ಕಾರಟಗಿ- ಯಶವಂತಪುರ ಎಕ್ಸ್‌ಪ್ರೆಸ್ (Karatagi-Yesvantpur Train) ರೈಲು ಹಳ್ಳಿತಪ್ಪಿದೆ.
ಕಾರಟಗಿ- ಯಶವಂತಪುರ ಎಕ್ಸ್‌ಪ್ರೆಸ್ ರೈಲು ಕೊಪ್ಪಳ ಜಿಲ್ಲೆಯ ಕಾರಟಗಿ ರೇಲ್ವೆ ನಿಲ್ದಾಣದ ಬಳಿ ಹಳ್ಳಿತಪ್ಪಿದೆ.
ಬೆಂಗಳೂರಿನ ಯಶವಂತಪುರದಿಂದ ಹೊರಟ ರೈಲು ಇಂದು(ಅ.17) ಬೆಳಗ್ಗೆ ಕಾರಟಗಿ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಇಂಜಿನ್ ಭಾಗ ಸಂಪೂರ್ಣವಾಗಿ ಹಳಿ ತಪ್ಪಿದೆ.
,ಅದೃಷ್ಟವಶಾತ್ ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಪೈಲಟ್ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಇದರಿಂದ, ಪ್ರಯಾಣಿಕರು ನಿಟ್ಟುಸಿಬಿಟ್ಟಿದ್ದಾರೆ.
ರೈಲು ಹಳಿ ತಪ್ಪಿದ್ದರಿಂದ ಇನ್ನುಳಿದ ಎರಡು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ ಎಂದು ತಿಳದಿಬಂಂದಿದೆ.
Published On - 12:42 pm, Tue, 17 October 23