- Kannada News Photo gallery Samsung Company's New Budget Phone Samsung Galaxy A05s set to Launch Today in India
ಭಾರತೀಯ ಮಾರುಕಟ್ಟೆಗಿಂದು ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ A05s ಲಗ್ಗೆ: ಏನಿದೆ ಫೀಚರ್ಸ್
Samsung Galaxy A05s Launch Today in India: ಭಾರತೀಯ ಮಾರುಕಟ್ಟೆಯಲ್ಲಿ ಇಂದು (ಅಕ್ಟೋಬರ್ 18) ಸ್ಯಾಮ್ಸಂಗ್ ಗ್ಯಾಲಕ್ಸಿ A05s (Samsung Galaxy A05s) ಬಿಡುಗಡೆಗೊಳ್ಳಲಿದೆ. ಕಂಪನಿಯು ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಖಚಿತ ಪಡಿಸಿದೆ. ಇದು ಭಾರತದಲ್ಲಿ 15,000 ರೂ. ಒಳಗೆ ರಿಲೀಸ್ ಆಗುವ ಅಂದಾಜಿದೆ.
Updated on: Oct 18, 2023 | 6:55 AM

ಆಕರ್ಷಕ ಬಜೆಟ್ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುವುದಲ್ಲಿ ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಕಂಪನಿ ಎತ್ತಿದ ಕೈ. ಭಾರತದಲ್ಲಿ ತಿಂಗಳಿಗೆ ಒಂದಾದರೂ ಕಡಿಮೆ ಬೆಲೆಯ ಫೋನನ್ನು ಅನಾವರಣ ಮಾಡುತ್ತಿದೆ. ಅದರಂತೆ ಇದೀಗ ಕಂಪನಿ ಹೊಸ ಫೋನೊಂದನ್ನು ಅನಾವರಣ ಮಾಡಲು ಸಜ್ಜಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಇಂದು (ಅಕ್ಟೋಬರ್ 18) ಸ್ಯಾಮ್ಸಂಗ್ ಗ್ಯಾಲಕ್ಸಿ A05s (Samsung Galaxy A05s) ಬಿಡುಗಡೆಗೊಳ್ಳಲಿದೆ. ಕಂಪನಿಯು ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಖಚಿತ ಪಡಿಸಿದೆ. ಇದು ಭಾರತದಲ್ಲಿ 15,000 ರೂ. ಒಳಗೆ ರಿಲೀಸ್ ಆಗುವ ಅಂದಾಜಿದೆ.

ಈ ಸ್ಮಾರ್ಟ್‌ಫೋನ್‌ನ ಬೆಲೆ ಗ್ಯಾಲಕ್ಸಿ M15 ಗಿಂತ ಕಡಿಮೆಯಿರುವ ಸಾಧ್ಯತೆಯಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ M15 ಗಿಂತ ಹೆಚ್ಚಿನ ಬೆಲೆಯಲ್ಲಿ ಗ್ಯಾಲಕ್ಸಿ A05s ಬಿಡುಗಡೆ ಆದರೆ ಎಮ್15 ಬೇಡಿಕೆ ಕುಸಿಯಲಿದೆ. ಗ್ಯಾಲಕ್ಸಿ M15 ಆರಂಭಿಕ ಬೆಲೆ 13,490 ರೂ. ಯಿಂದ ಆರಂಭವಾಗುತ್ತಿದೆ. ಇದೇ ಪ್ರೈಸ್ ರೇಂಜ್ನಲ್ಲಿ ಹೊಸ ಫೋನ್ ಕೂಡ ಇರಬಹುದು ಎನ್ನಲಾಗಿದೆ.

ಕಂಪನಿಯು ನೀಡಿರುವ ವಿವರಗಳ ಪ್ರಕಾರ, ಮುಂಬರುವ ಸ್ಯಾಮ್ಸಂಗ್ ಗ್ಯಾಲಕ್ಸಿ A05s ಸ್ಮಾರ್ಟ್ಫೋನ್ 6.7-ಇಂಚಿನ FHD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಮುಂಭಾಗದಲ್ಲಿ ಟಿಯರ್‌ಡ್ರಾಪ್ ನಾಚ್ ಅನ್ನು ಹೊಂದಿದ್ದು, ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಹಿಂಭಾಗದಲ್ಲಿ, ಸ್ಯಾಮ್‌ಸಂಗ್‌ನ “ಫ್ಲೋಟಿಂಗ್” ಕ್ಯಾಮೆರಾ ಆಯ್ಕೆ ಇದೆ. ಇದು ಗ್ಯಾಲಕ್ಸಿ S23 ಸರಣಿಯನ್ನು ಹೋಲುತ್ತದೆ.

50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೇರಿದಂತೆ ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಈ ಫೋನ್ನಲ್ಲಿ ಕ್ಯಾಮೆರಾಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಬಿಡುಗಡೆ ಆದ ನಂತರ ಈ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗುತ್ತದೆ. 2-ಮೆಗಾಪಿಕ್ಸೆಲ್ ಡೆಪ್ತ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಕೂಡ ನೀಡಲಾಗಿದೆ. ಮುಂಭಾಗದಲ್ಲಿ, ಸೆಲ್ಫಿಗಳನ್ನು ಸೆರೆಹಿಡಿಯಲು 13-ಮೆಗಾಪಿಕ್ಸೆಲ್ ಸಂವೇದಕವಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ A05s ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಮೂರು ರಿಫ್ರೆಶ್ ಬಣ್ಣಗಳಲ್ಲಿ ಲಭ್ಯವಿರುತ್ತದೆ – ತಿಳಿ ಹಸಿರು, ತಿಳಿ ನೇರಳೆ ಮತ್ತು ಕಪ್ಪು ಎಂದು ಕಂಪನಿ ಹೇಳಿದೆ. ಉಳಿದ ವಿವರಗಳು ಪ್ರಸ್ತುತ ತಿಳಿದಿಲ್ಲ. ಅಕ್ಟೋಬರ್ 18 ರಂದು ಈ ಫೋನಿನ ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ.
























