Updated on: Oct 18, 2023 | 12:10 PM
ನೀತು ವನಜಾಕ್ಷಿ ಅವರು ತೃತೀಯಲಿಂಗಿ. ಅವರು ಬಿಗ್ ಬಾಸ್ಗೆ ಕಾಲಿಟ್ಟು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಟಾಸ್ಕ್ಗಳನ್ನು ಉತ್ತಮವಾಗಿ ಆಡಿ ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದಾರೆ. ಅವರ ಬಾಲ್ಯದ ಫೋಟೋಗಳು ಲಭ್ಯವಾಗಿವೆ.
ನೀತು ಅವರ ಮೂಲ ಹೆಸರು ಮಂಜುನಾಥ್. ಅವರು ಹುಟ್ಟುವಾಗ ಹುಡುಗನ ರೀತಿಯೇ ಇದ್ದರು. ಬೆಳೆಯುತ್ತಾ ಹೋದಂತೆ ಅವರ ದೇಹದಲ್ಲಿ ಬದಲಾವಣೆ ಆಯಿತು. ಈಗ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ.
ಏಳನೇ ತರಗತಿಯಲ್ಲಿ ನೀತು ಅವರಿಗೆ ‘ನಾನು ಅವನಲ್ಲ ಅವಳು’ ಎನ್ನುವ ಭಾವನೆ ಕಾಡಲು ಶುರುವಾಯಿತು. ಅವರು ಹುಡುಗರ ಕಡೆ ಹೆಚ್ಚು ಅಟ್ರ್ಯಾಕ್ಟ್ ಆಗುತ್ತಿದ್ದರು. ಹೀಗೇಕೆ ಎನ್ನುವ ಪ್ರಶ್ನೆ ಅವರಲ್ಲಿ ಮೂಡೋಕೆ ಆರಂಭಿಸಿತ್ತು.
ಮಂಜುನಾಥ್ ಅವರು ಸಂಪೂರ್ಣವಾಗಿ ಬದಲಾದರು. ಅವರು ಹೆಸರನ್ನು ನೀತು ಎಂದು ಬದಲಾಯಿಸಿಕೊಂಡರು. ಅವರ ಬಾಲ್ಯದ ಫೋಟೋಗಳನ್ನು ಕುಟುಂಬದವರು ಟಿವಿ9 ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.
ತಾಯಿ ವನಜಾಕ್ಷಿ ಅವರು ನೀತು ಅವರ ಬೆಂಬಲಕ್ಕೆ ನಿಂತರು. ಮಗನಲ್ಲಿ ಆದ ಬದಲಾವಣೆಯನ್ನು ಅವರ ತಾಯಿ ಒಪ್ಪಿಕೊಂಡಿದ್ದಾರೆ. ಸಮಾಜದಿಂದ ನೀತು ಅವರನ್ನು ದೂರ ಇಡದೆ ಎಲ್ಲರ ಜೊತೆ ಬೆರೆಯಲು ಅವರು ಅನುವು ಮಾಡಿಕೊಟ್ಟಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ನೀತು ಅವರು ಉತ್ತಮ ಆಟ ಆಡುತ್ತಿದ್ದಾರೆ. ತಮ್ಮದೇ ಟ್ಯಾಟೂ ಸ್ಟುಡಿಯೋನ ಅವರು ಹೊಂದಿದ್ದಾರೆ.