Kannada News Photo gallery Karnataka Congress govt to fulfill another guarantee scheme as announced by Rahul Gandhi thats Bellary Jeans Apparel Park guarentee
ಕಾಂಗ್ರೆಸ್ ಸರ್ಕಾರ ಮತ್ತೊಂದು ಗ್ಯಾರಂಟಿ ಈಡೇರಿಸಲೇ ಬೇಕಾಗಿದೆ! ಅದಕ್ಕೆ ಬೇಕಿದೆ ಜಸ್ಟ್ 5 ಸಾವಿರ ಕೋಟಿ! ಇದನ್ನ ಸ್ವತಃ ರಾಹುಲ್ ಗಾಂಧಿಯೇ ಘೋಷಿಸಿದ್ದರು!
Bellary Jeans Apparel Park: ಬಳ್ಳಾರಿಯ ಜೀನ್ಸ್ ಗೆ ಮತ್ತಷ್ಟು ಮೆರಗು ನೀಡುವ ಮೂಲಕ ದೇಶ ವಿದೇಶಗಳಲ್ಲಿ ಬಳ್ಳಾರಿಯ ಜೀನ್ಸ್ ಗೆ ಮಾರುಕಟ್ಟೆ ಕಲ್ಪಿಸಲು ಜೀನ್ಸ್ ಅಪರಲ್ ಪಾರ್ಕ್ ಸ್ಥಾಪನೆ ಮಾಡೋದಾಗಿ ಅಸೆಂಬ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.
1 / 8
ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೇರಲು ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡಿದ್ರು. ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ತುಸು ವಿಳಂಬವಾಗಿಯಾದರೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಸೂಚನೆಗಳಿವೆ. ಆದರೆ ಈ ಮಧ್ಯೆ, 5 ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿರೋ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಮತ್ತೊಂದು ಗ್ಯಾರಂಟಿ ಯೋಜನೆ ಜಾರಿ ಮಾಡಬೇಕಾಗಿದೆ. ಅಷ್ಟಕ್ಕೂ ಅದ್ಯಾವ ಗ್ಯಾರಂಟಿ..? ಆ ಗ್ಯಾರಂಟಿ ಯೋಜನೆಗೆ ಬೇಕಾಗಿರೋ ಹಣವೆಷ್ಟು? ಆ ಗ್ಯಾರಂಟಿಯಿಂದ ಯಾರಿಗೆ ಲಾಭವಾಗಲಿದೆ? ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
2 / 8
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿತ್ತು. ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ. ಬಿಪಿಎಲ್ ಕಾರ್ಡದಾರರಿಗೆ 10 ಕೆಜಿ ಪಡಿತರ ಅಕ್ಕಿ, ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂಪಾಯಿ ಹಣ, ನಿರುದ್ಯೋಗಿ ಯುವಕರಿಗೆ 3 ಸಾವಿರ ರೂಪಾಯಿ ಭತ್ಯೆ, ಎಲ್ಲರ ಮನೆಗಳಿಗೂ 200 ಯೂನಿಟ್ ವಿದ್ಯುತ್ ಉಚಿತ ... ಹೀಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೋಡೆತ್ತು ಚುನಾವಣೆ ವೇಳೆ ಗ್ಯಾರಂಟಿಗಳ ಭರವಸೆ ನೀಡಿದ್ದರು. ಈ ಗ್ಯಾರಂಟಿ ಯೋಜನೆಗಳು ಈಗಾಗಲೇ ಜಾರಿಯಾಗುವ ಹಾದಿಯಲ್ಲಿವೆ. ಆದರೀಗ ಮತ್ತೊಂದು ಗ್ಯಾರಂಟಿ ಯೋಜನೆಯನ್ನ ಸರ್ಕಾರ (Karnataka Congress govt) ಈಡೇರಿಸಲೇಬೇಕಾಗಿದೆ.
3 / 8
ಬಳ್ಳಾರಿ ಅಂದ ತಕ್ಷಣ ನೆನಪಾಗೋದು ಗಣಿಗಾರಿಕೆ ಮತ್ತು ಗಣಿನಾಡಿನ ಜೀನ್ಸ್.. ಹೌದು. ಬಳ್ಳಾರಿಯಲ್ಲಿ ತಯಾರಿಸುವ ಜೀನ್ಸ್ ಬಟ್ಟೆಗಳು ದೇಶ ವಿದೇಶಗಳಲ್ಲೂ ಪ್ರಸಿದ್ದಿ ಪಡೆದಿವೆ. ಬಳ್ಳಾರಿಯಲ್ಲಿನ ಸಾವಿರಾರು ಜೀನ್ಸ್ ಘಟಕಗಳಲ್ಲಿ ನಿತ್ಯ ಲಕ್ಷಾಂತರ ಜನರು ಜೀನ್ಸ್ ಬಟ್ಟೆಗಳನ್ನು ರೆಡಿ ಮಾಡ್ತಾರೆ. ಆದ್ರೆ ಚಿಕ್ಕ ಚಿಕ್ಕ ಯೂನಿಟ್ ಗಳಲ್ಲಿ ತಯಾರಾಗುವ ಜೀನ್ಸ್ ಬಟ್ಟೆಗಳಿಂದ ಬದುಕು ಕಟ್ಟಿಕೊಂಡಿರುವ ಬಳ್ಳಾರಿ ಜನರಿಗಾಗಿಯೇ ಜೀನ್ಸ್ ತಯಾರಿಕಾ ಪಾರ್ಕ್ ಸ್ಥಾಪನೆ ಮಾಡುವುದಾಗಿ (Bellary Jeans Apparel Park) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಗ್ಯಾರಂಟಿ ಘೋಷಣೆ ಮಾಡಿದ್ದಾರೆ.
4 / 8
ಬಳ್ಳಾರಿಯ ಜೀನ್ಸ್ (Jeans Jeans) ಗೆ ಮತ್ತಷ್ಟು ಮೆರಗು ನೀಡುವ ಮೂಲಕ ದೇಶ ವಿದೇಶಗಳಲ್ಲಿ ಬಳ್ಳಾರಿಯ ಜೀನ್ಸ್ ಗೆ ಮಾರುಕಟ್ಟೆ ಕಲ್ಪಿಸಲು ಜೀನ್ಸ್ ಅಪರಲ್ ಪಾರ್ಕ್ ಸ್ಥಾಪನೆ ಮಾಡೋದಾಗಿ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.
5 / 8
ಬಳ್ಳಾರಿಯಲ್ಲಿ ಜೀನ್ಸ್ ಗೆ ಮೆರಗು ನೀಡಲು ಹಿಂದಿನ ಬಿಜೆಪಿ ಸರ್ಕಾರ ಸಹ ಜೀನ್ಸ್ ಪಾರ್ಕ್ ಸ್ಥಾಪನೆಗೆ ಒಲವು ತೋರಿ, ಘೋಷಣೆ ಮಾಡಿತ್ತು. ಆದ್ರೆ ಬಿಜೆಪಿ ಸರ್ಕಾರ ಜೀನ್ಸ್ ಪಾರ್ಕ್ ಸ್ಥಾಪನೆ ಮಾಡಲೇ ಇಲ್ಲ. ಇದನ್ನೆ ಅಸ್ತ್ರವಾಗಿ ಮಾಡಿಕೊಂಡಿದ್ದ ಕಾಂಗ್ರೆಸ್ ನಾಯಕರು ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಮೂಲಕ ಜೀನ್ಸ್ ಆಪರಲ್ ಪಾರ್ಕ್ ಸ್ಥಾಪನೆಯ ಗ್ಯಾರಂಟಿ ಘೋಷಣೆ ಮಾಡಿತ್ತು. 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ ಮಾಡೋದಾಗಿ ಘೋಷಣೆ ಮಾಡಿದ್ರು. ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಜೀನ್ಸ್ ಪಾರ್ಕ್ ಸ್ಥಾಪನೆಗೆ ಬರೋಬ್ಬರಿ 5 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡುವುದಾಗಿ ಭರವಸೆ ನೀಡಿದ್ರು.
6 / 8
7 / 8
ಅಲ್ಲದೇ ಜೀನ್ಸ್ ಪಾರ್ಕ್ ಸ್ಪಾಪನೆಯಿಂದ 25 ಸಾವಿರ ಜನರಿಗೆ ನೇರವಾಗಿ & ಪರೋಕ್ಷವಾಗಿ ಉದ್ಯೋಗ ದೊರೆಯಲಿದ್ದು. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಜೀನ್ಸ್ ಪಾರ್ಕ್ ಸ್ಥಾಪನೆ ಮಾಡುವುದಾಗಿ ಗ್ಯಾರಂಟಿ ವಾಗ್ದಾನ ನೀಡಿದ್ರು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜೀನ್ಸ್ ಪಾರ್ಕ್ ಸ್ಥಾಪನೆಗೆ ಸ್ಥಳ ಹಾಗೂ ರೂಪರೇಷಗಳ ಸಿದ್ದತೆ ನಡೆಯುತ್ತಿದೆ. ರಾಹುಲ್ ಗಾಂಧಿ ಘೋಷಣೆಯ ಪ್ರಕಾರ ಮೊದಲ ಅಧಿವೇಶನದಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆಯ ಘೋಷಣೆಯಾಗುವ ಸಾಧ್ಯತೆಯಿದೆ.
8 / 8
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಸಾವಿರಾರು ಕೋಟಿ ಹಣ ಹೊಂದಿಸಬೇಕಾಗಿದೆ. ಇದೀಗ 5 ಗ್ಯಾರಂಟಿಯ ಜೊತೆಗೆ ಜೀನ್ಸ್ ಪಾರ್ಕ್ ಸ್ಥಾಪನೆಗೂ ಸಹ 5 ಸಾವಿರ ಕೋಟಿ ಅನುದಾನ ಬೇಕಿದೆ. ಹೀಗಾಗಿ ಸರ್ಕಾರ ಅನುದಾನ ಬಿಡುಗಡೆಗೆ ಅದ್ಯಾವ ಪ್ಲ್ಯಾನ್ ಮಾಡುತ್ತೆ. ಜೀನ್ಸ್ ಪಾರ್ಕ್ ಸ್ಥಾಪನೆಯಿಂದ ಅದೆಷ್ಟು ಜನರಿಗೆ ಉದ್ಯೋಗ ದೊರೆಯಲಿದೆ ಅನ್ನೋದು ಅಧಿವೇಶನದ ಬಳಿಕ ಸ್ಪಷ್ಟವಾಗಲಿದೆ.
Published On - 6:23 pm, Tue, 6 June 23