- Kannada News Photo gallery Karnataka Elections 2023 Police seize Rs 7-5 lakh worth of unaccounted cash from a biker in Davanagere news
Karnataka Elections 2023: ಕಂತೆ ಕಂತೆ ಹಣ ಸೊಂಟಕ್ಕೆ ಕಟ್ಟಿಕೊಂಡು ಬೈಕ್ನಲ್ಲಿ ಸಾಗಾಟ; 7 ಲಕ್ಷ ರೂ. ಪೊಲೀಸರ ವಶಕ್ಕೆ
ಚುನಾವಣೆ ಸಮೀಪದಲ್ಲಿ ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಹಣ ಅಕ್ರಮವಾಗಿ ಸಾಗಾಟವಾಗುತ್ತಿರುವುದು ಅಲ್ಲಲ್ಲಿ ಪತ್ತೆಯಾಗುತ್ತಿದೆ. ಇದೀಗ ದಾವಣಗೆರೆಯಲ್ಲೂ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7.5 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Updated on: Apr 06, 2023 | 5:44 PM

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಹಣ ಅಕ್ರಮವಾಗಿ ಸಾಗಾಟವಾಗುತ್ತಿರುವುದು ಅಲ್ಲಲ್ಲಿ ಪತ್ತೆಯಾಗುತ್ತಿದೆ. ಇದೀಗ ದಾವಣಗೆರೆಯಲ್ಲೂ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7.5 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೊಸ್ಟ್ನಲ್ಲಿ ಬೈಕ್ ತಡೆದ ಪೊಲೀಸರು ಸವಾರನನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಸೊಂಟದಲ್ಲಿ ಕಂತೆಕಂತೆ ನೋಟುಗಳು ಪತ್ತೆಯಾಗಿವೆ.

ಶಿಕಾರಿಪುರ ಮೂಲದ ಸೈಫುಲ್ಲಾ ಮತ್ತು ಕುಮಾರ್ ಎಂಬವರು ಬೈಕ್ನಲ್ಲಿ ಹಣ ಸಾಗಾಟ ಮಾಡುತ್ತಿದ್ದರು. ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡದೆ ದಾವಣಗೆರೆಯಿಂದ ಬಂದಿದ್ದು, ಹೊನ್ನಾಳಿಯಿಂದ ಬಂದಿದ್ದು ಎಂದು ಗೊಂದಲ ಸೃಷ್ಟಿಸಿದ್ದಾರೆ.

ಬೈಕ್ ಸವಾರರನ್ನು ತಪಾಸಣೆ ನಡೆಸುವಾಗಲೇ ಪೊಲೀಸ್ ಸಿಬ್ಬಂದಿ ವಿಡಿಯೋ ಚಿತ್ರೀಕರಣ ಮಾಡಿದ್ದು, ಸೂಕ್ತ ದಾಖಲೆ ನೀಡಿ ಎನ್ನುತ್ತಿರುವುದನ್ನು ಕೇಳಿಸಬಹುದು.

ನಿನ್ನೆ ತಡರಾತ್ರಿ 12 ಗಂಟೆ ಸರಿಸುಮಾರು ನಡೆದ ಘಟನೆ ಇದಾಗಿದ್ದು, ಹಣ ವಶಕ್ಕೆ ಪಡೆದು ಸೂಕ್ತ ದಾಖಲೆ ನೀಡುವಂತೆ ಸೂಚಿಸಲಾಗಿದೆ.



















