ಬಿಸಿಲಿಗೆ ಕಂಗೆಟ್ಟಿದ್ದ ಕರುನಾಡಿಗೆ ವರುಣ ಸಿಂಚನ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆ

|

Updated on: Apr 13, 2024 | 7:12 PM

ರಾಜ್ಯದ ಹಲವೆಡೆ ಗುಡುಗು ಸಹಿತ ಗಾಳಿ ಮಳೆ ಆಗುತ್ತಿದೆ. ಬಿಸಿಲಿಗೆ ಕಂಗೆಟ್ಟಿದ್ದ ಕರುನಾಡಿಗೆ ಮಳೆ ತಂಪೆರೆದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆಯಾಗಿದ್ದರೆ, ಇನ್ನು ಕೆಲ ಜಿಲ್ಲೆಗಳಲ್ಲಿ ನಿರಂತರ ಮಳೆ ಆಗುತ್ತಿದೆ. ಇಂದು ಕೂಡ ಹಲವು ಜಿಲ್ಲೆಗಳಲ್ಲಿ ಮಳೆ ಆಗಿದ್ದು, ವಾತಾವರಣ ಕೂಲ್​ ಕೂಲ್ ಆಗಿದೆ.

1 / 6
ರಾಜ್ಯದ ಹಲವೆಡೆ ಗುಡುಗು ಸಹಿತ ಗಾಳಿ ಮಳೆ ಆಗುತ್ತಿದೆ. ಸದ್ಯ ಇದರಿಂದ ತಾಪಮಾನವೂ ಇಳಿಕೆಯಾಗಿದ್ದು, ಕೂಲ್ ಕೂಲ್ ಆಗಿದೆ. ಬಿಸಿಲಿಗೆ ಕಂಗೆಟ್ಟಿದ್ದ ಕರುನಾಡಿಗೆ ಮಳೆ ತಂಪೆರೆಯುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆಯಾಗಿದ್ದರೆ, ಇನ್ನು ಕೆಲ ಜಿಲ್ಲೆಗಳಲ್ಲಿ ನಿರಂತರ ಮಳೆ ಆಗುತ್ತಿದೆ. ಇಂದು ಕೂಡ ಹಲವು ಜಿಲ್ಲೆಗಳಲ್ಲಿ ಮಳೆ ಆಗಿದೆ.

2 / 6
ಬಾಗಲಕೋಟೆ ನಗರದ ವಿದ್ಯಾಗಿರಿ, ನವನಗರ ಸೇರಿದಂತೆ ಹಲವೆಡೆ ಸುಮಾರು ಅರ್ಧಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಜಿಟಿಜಿಟಿ ಮಳೆ ಸುರಿದೆ.

3 / 6
ದಾವಣಗೆರೆ ತಾಲೂಕಿನ ಹೆಬ್ಬಾಳು, ಹುಣಸೇಕಟ್ಟೆ, ಹಾಲುವರ್ತಿ ಸೇರಿದಂತೆ ಹಲವೆಡೆ ಮಳೆ ಆಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪು ಸೂಸಿದ್ದಾನೆ. ಹೆಬ್ಬಾಳು ಟೋಲ್ ಬಳಿ ಇರುವ ಅಂಗಡಿಗಳಿಗೆ ನೀರು ನುಗ್ಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆ ಬೀಳುತ್ತಿದೆ.

4 / 6
ಮೂಡಿಗೆರೆ, ಕೊಪ್ಪ, ಜಯಪುರ, ಬಾಳೆಹೊನ್ನೂರು, ಸೇರಿದಂತೆ ಚಿಕ್ಕಮಗಳೂರು ನಗರ, ಮಲ್ಲೇನಹಳ್ಳಿ, ಖಾಂಡ್ಯ, ಮುತ್ತೋಡಿ ಭಾಗದಲ್ಲಿ ಸುಮಾರು ಒಂದು ಗಂಟೆ ಮಳೆ ಸುರಿದಿದೆ. ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾಫಿನಾಡಿಗರಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯಾದ್ಯಂತ ಬಿಸಿಲ ಝಳಕ್ಕೆ ಜನರು ಕಂಗಲಾಗಿದ್ದರು.

5 / 6
ಬಿಸಿಲಿನ ಝಳದಿಂದ ಬಸವಳಿದಿದ್ದ ಗದಗ-ಬೆಟಗೇರಿ ಅವಳಿನಗರದಲ್ಲಿ ಗುಡುಗು, ಗಾಳಿ ಸಹಿತ ವರುಣ ತಂಪೆರೆದಿದ್ದಾನೆ. ಶಿವಮೊಗ್ಗ ನಗರದಲ್ಲಿ ಗಾಳಿ ಸಹಿತ ಧಾರಾಕಾರ ಮಳೆ ಆಗಿದೆ. ನಗರದಲ್ಲಿ 40 ಡಿಗ್ರಿವರೆಗೆ ಬಿಸಿಲಿನ ತಾಪಮಾನ ತಲುಪಿತ್ತು. ಕೊನೆಗೂ ಇಂದು ಬೇಸಿಗೆ ಮಳೆ ಸುರಿದೆ.

6 / 6
ಕೊಡಗು ಜಿಲ್ಲೆಯ ಮಡಿಕೇರಿ ಸುತ್ತಮುತ್ತ ವರ್ಷದ ಮೊದಲ ಮಳೆ ಸುರಿದಿದೆ. ಮಳೆ ಆಗಮನದಿಂದ ಕಾಫಿ ಬೆಳೆಗಾರರು ಮತ್ತು ರೈತರ ಮೊಗದಲ್ಲಿ ಹರ್ಷ ತುಂಬಿದೆ.

Published On - 7:11 pm, Sat, 13 April 24