‘ಬಿಗ್ ಬಾಸ್ ಕನ್ನಡ’ ಸ್ಪರ್ಧಿಗಳ ಸಂಭಾವ್ಯ ಪಟ್ಟಿ; ಇದೆ ಕೆಲವು ಅಚ್ಚರಿಯ ಹೆಸರುಗಳು

|

Updated on: Sep 29, 2024 | 7:31 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಆರಂಬಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಈ ಬಗ್ಗೆ ಘೋಷಣೆ ಆಗಲಿದೆ. ಸ್ಪರ್ಧಿಗಳ ಎಂಟ್ರಿಗೆ ಫ್ಯಾನ್ಸ್ ಕಾದಿದ್ದಾರೆ. ಈ ಮಧ್ಯೆ ಸಂಭಾವ್ಯ ಪಟ್ಟಿ ಹೊರ ಬಿದ್ದಿದ್ದು ಆ ಬಗ್ಗೆ ಇಲ್ಲಿದೆ ಮಾಹಿತಿ.

1 / 8
ಕಿಚ್ಚ ಸುದೀಪ್ ಜೊತೆ ಆಪ್ತತೆ ಹೊಂದಿರೋ ರಂಜಿತ್ ಕುಮಾರ್ ಕೂಡ ಬಿಗ್ ಬಾಸ್​ ಮನೆಗೆ ಬರುತ್ತಿದ್ದಾರೆ. ಅವರು ಕೆಸಿಸಿಯಲ್ಲಿ ಸುದೀಪ್ ತಂಡದ ಜೊತೆಯೇ ಇದ್ದರು ಅನ್ನೋದು ವಿಶೇಷ.

2 / 8
ಭೂಮಿಕಾ ಬಸವರಾಜ್ ಅವರು ದೊಡ್ಮನೆಗೆ ಬರೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಅವರ ಹೆಸರು ಚಾಲ್ತಿಯಲ್ಲಿ ಇದೆ. ಈ ಬಗ್ಗೆ ಇಂದು ಸಂಜೆಯೇ ಸ್ಪಷ್ಟನೆ ಸಿಗಬೇಕಿದೆ.

3 / 8
ಹರಿಪ್ರಿಯಾ ಅವರು ದೊಡ್ಮನೆಗೆ ಬರೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದಾಗ್ಯೂ ಅವರ ಹೆಸರು ಚಾಲ್ತಿಯಲ್ಲಿ ಇದೆ. ಅವರು ದೊಡ್ಮನೆ ಪ್ರವೇಶ ಮಾಡಿರೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

4 / 8
   ಕಿರಣ್ ರಾಜ್ ಅವರು ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡುತ್ತಾರೆ ಎನ್ನಲಾಗಿದೆ. ಈ ಮೊದಲು ಅವರು ‘ಕನ್ನಡತಿ’ ಧಾರಾವಾಹಿ ಮಾಡಿದ್ದರು. ಆಗ ಮಿನಿ ಸೀಸನ್​ಗೆ ಬಂದಿದ್ದರು. ಈಗ ಅವರು ಟಿವಿ ಸೀಸನ್​ಗೆ ಬರುತ್ತಾರೆ ಎನ್ನಲಾಗಿದೆ.

5 / 8
ಕನ್ನಡದಲ್ಲಿ ‘ಚಾಣಾಕ್ಯ’, ‘ಖಡಕ್’ ರೀತಿಯ ಸಿನಿಮಾಗಳನ್ನು ಮಾಡಿದವರು ಧರ್ಮಕೀರ್ತಿ ರಾಜ್. ಅವರಿಗೂ ಬಿಗ್ ಬಾಸ್​ನಲ್ಲಿ ಅವಕಾಶ ಸಿಕ್ಕಿದೆ. ಅವರು ದೊಡ್ಮನೆಯಲ್ಲಿ ಯಾವ ರೀತಿಯ ಆಟ ಪ್ರದರ್ಶನ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ.

6 / 8
ನಟ ತ್ರಿವಿಕ್ರಮ್ ಕೂಡ ‘ಬಿಗ್ ಬಾಸ್​’ ಮನೆಗೆ ಎಂಟ್ರಿ ಪಡೆಯೋ ಸಾಧ್ಯತೆ ಇದೆ. ಅವರು ಇದರಿಂದ ಜನಪ್ರಿಯತೆ ಪಡೆಯೋ ನಿರೀಕ್ಷೆಯಲ್ಲಿ ಇದ್ದಾರೆ. ಅವರ ಅಭಿಮಾನಿ ಬಳಗ ಹೇಳಿಕೊಳ್ಳುವಷ್ಟು ಹಿರಿದಾಗಿಲ್ಲ. ಹೀಗಾಗಿ, ಬಿಗ್ ಬಾಸ್ ಮೂಲಕ ಗಮನ ಸೆಳೆಯುವ ಇಚ್ಛೆ ಇಟ್ಟುಕೊಂಡಿದ್ದಾರೆ.

7 / 8
ಭವ್ಯಾ ಗೌಡ ಕೂಡ ದೊಡ್ಮನೆಗೆ ಪ್ರವೇಶ ಪಡೆಯಲಿದ್ದಾರಂತೆ. ಈ ಮೊದಲು ಕಲರ್ಸ್ ಕನ್ನಡದ ‘ಗೀತಾ’ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ಈಗ ಅವರಿಗೆ ಬಿಗ್ ಬಾಸ್​ನಲ್ಲಿ ಅವಕಾಶ ಸಿಕ್ಕಿದೆ. ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ.

8 / 8
ಹಿರಿಯ ನಟಿ ಪ್ರೇಮಾ ಕೂಡ ‘ಬಿಗ್ ಬಾಸ್’ ಮನೆಗೆ ತೆರಳುವ ಸಾಧ್ಯತೆ ಇದೆಯಂತೆ. ಅವರು ಹೋದರೆ ಬಿಗ್ ಬಾಸ್​ಗೆ ಹೊಸ ಕಳೆ ಬರಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.