ನೀವು ಚಹಾ ಪ್ರಿಯರೇ? ಎಚ್ಚರ! ಅತಿಯಾದ ಚಹಾ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ

| Updated By: shruti hegde

Updated on: Aug 15, 2021 | 4:37 PM

ಚಹಾ ಸೇವನೆಯು ಆರೋಗ್ಯದ ಮೇಲೆ ಎಷ್ಟು ಅರೋಗ್ಯ ಪ್ರಯೋಜನವನ್ನು ನೀಡುತ್ತದೆಯೋ ಅಷ್ಟೇ ನಕಾರಾತ್ಮಕ ಪರಿಣಾಮಗಳೂ ಇವೆ. ಅತಿಯಾಗಿ ಚಹಾ ಸೇವಿಸುವುದರಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ.

1 / 5
ನಿಕೋಟಿನ್ ಮತ್ತು ಕೆಫೀನ್ ಸೇವನೆಯು ಹೊಟ್ಟೆಯಲ್ಲಿ ಆಮ್ಲವನ್ನು ಉಂಟು ಮಾಡುತ್ತದೆ. ಇಂತಹ ಸಮಯದಲ್ಲಿ ಹೆಚ್ಚಿನ ಚಹ ಸೇವನೆಯು ಗ್ಯಾಸ್ (ವಾಯು) ಅಥವಾ ಆ್ಯಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ನಿಧಾನವಾದ ಜೀರ್ಣಕ್ರಿಯೆಯಿಂದ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಹದಗೆಡುತ್ತದೆ.

2 / 5
ನಿದ್ದೆ ಬಾರದು ಎಂಬ ಉದ್ದೇಶದಿಂದ ಚಹಾ ಸೇವಿಸುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಕೆಲಸ ಮಾಡುವವರು ಹೆಚ್ಚು ಚಹ ಸೇವಿಸುತ್ತಾರೆ. ದೇಹದಲ್ಲಿ ನಿಕೋಟಿನ್ ಮತ್ತು ಕೆಫೀನ್ ಪ್ರಮಾಣವನ್ನು ಹೆಚ್ಚಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಜತೆಗೆ ಉತ್ತಮ ನಿದ್ರೆಯ ಮೇಲೆ ಅಡ್ಡ ಪರಿಣಾಮ ಬೀರಬಹುದು.

3 / 5
ಅನೇಕ ಜನರು ಹಸಿವಾದಾಗ ಖಾಲಿ ಹೊಟ್ಟೆಯಲ್ಲಿ ಚಹ ಸೇವಿಸುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ಖಾಲಿ ಹೊಟ್ಟೆಯಲ್ಲಿ ಚಹ ಸೇವಿಸುವುದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ಏಕೆಂದರೆ ಚಹಾದಲ್ಲಿನ ಕೆಫೀನ್ ದೇಹದಲ್ಲಿ ಬಹಳ ಬೇಗ ಕರಗುತ್ತದೆ. ಇದರ ಪರಿಣಾಮ ರಕ್ತದೊತ್ತಡ ಕೂಡ ವೇಗವಾಗಿ ಪರಿಣಾಮ ಬೀರುತ್ತದೆ. ಚಹಾದ ಅತಿಯಾದ ಸೇವನೆಯು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

4 / 5
ಇತ್ತೀಚಿನ ದಿನಗಳಲ್ಲಿ ಸಂಧಿವಾತದಂತಹ ಸಮಸ್ಯೆಗಳು ಹೆಚ್ಚಾಗಿವೆ. ಅತಿಯಾದ ಚಹಾ ಸೇವನೆಯು ಮೂಳೆಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದರಿಂದ ಕೀಲು ನೋವಿನ ಸಮಸ್ಯೆ ಕಾಡ ತೊಡಗುತ್ತದೆ.

5 / 5
ಚಹ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಕೆಲವರಂತೂ ಹೊತ್ತು- ಗೊತ್ತಿಲ್ಲದೇ ಚಹಾವನ್ನು ಸೇವಿಸುತ್ತಾರೆ. ಆದರೆ ಅತಿಯಾದ ಚಹ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ಮರೆಯದಿರಿ. ನಿಯಮಿತವಾಗಿ ಚಹಾ ಸೇವಿಸಿ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ.

Published On - 4:34 pm, Sun, 15 August 21