ಬೇವಿನ ಎಲೆ ಕಹಿ ಎಂದು ಮೂಗು ಮುರಿಯುವ ಬದಲು ಆರೋಗ್ಯ ಪ್ರಯೋಜನ ತಿಳಿದುಕೊಳ್ಳಿ
TV9 Web | Updated By: Pavitra Bhat Jigalemane
Updated on:
Mar 23, 2022 | 2:41 PM
ಬೇವಿನ ಎಲೆಗಳು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿವೆ. ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುವುದರ ಜತೆಗೆ ಕೂದಲಿನ ಬೆಳವಣಿಗೆಗೆ ಸಹಾಯಕವಾಗಿದೆ. ಕಹಿ ಬೇವಿನ ಎಲೆಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
1 / 8
ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕಹಿ ಬೇವು ಬಗ್ಗೆ ಯುಗಾದಿಯ ಸಮಯದಲ್ಲಿ ಬೇವು ಬೆಲ್ಲ ಮಾಡುವಾಗ ನೆನಪಿಸಿಕೊಳ್ಳುವುದು ಬಿಟ್ಟರೆ, ಬೇರೆ ಸಂದರ್ಭದಲ್ಲಿ ಬಳಕೆ ಕಡಿಮೆ. ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಹಿ ಬೇವಿನ ಬಗ್ಗೆ ಇಲ್ಲಿದೆ ಮಾಹಿತಿ.
2 / 8
ಬೇವಿನ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದಲ್ಲದೆ ಕಹಿ ಬೇವು ರಕ್ತವನ್ನು ಸಹ ಶುದ್ಧೀಕರಿಸುತ್ತದೆ. ಇದು ಅನೇಕ ರೀತಿಯ ದೈಹಿಕ ಕಾಯಿಲೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
3 / 8
ಕಹಿ ಬೇವಿನ ಎಲೆಗಳು ಮುಖದಲ್ಲಿನ ಮೊಡವೆಗಳನ್ನು ದೂರ ಮಾಡುತ್ತದೆ. ಅಲ್ಲದೆ ಗಾಯಗಳನ್ನು ಬೇಗ ಗುಣಪಡಿಸುತ್ತದೆ. ಮೊಡವೆ ಮತ್ತು ಗಾಯಗಳಿಗೆ ಕಹಿ ಬೇವಿನ ಎಲೆ ಪೇಸ್ಟ್ ಹಚ್ಚುವುದರಿಂದ ನೋವಿನಿಂದ ಪರಿಹಾರ ಸಿಗುತ್ತದೆ.
4 / 8
ತುರಿಕೆ ಅಥವಾ ಇನ್ನಿತರ ಚರ್ಮದ ಕಾಯಿಲೆಗೆ ಕಹಿ ಬೇವು ರಾಮಬಾಣವಾಗಿದೆ. ಚರ್ಮದ ತೊಂದರೆ ಇರುವವರು ಪ್ರತಿದಿನ ಕಹಿ ಬೇವಿನ ಎಲೆಗಳನ್ನು ಸೇವಿಸಿದರೆ ಒಳಿತು.
5 / 8
ಕಹಿ ಬೇವಿನ ಎಲೆಗಳನ್ನು ಕುದಿಸಿ, ಆ ನೀರನ್ನು ಪ್ರತಿದಿನ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಹುಳುಗಳು ನಾಶವಾಗುತ್ತದೆ. ಜ್ವರ ಮತ್ತು ಇತರ ಕಾಯಿಲೆಗಳನ್ನು ಕೂಡ ಕಹಿ ಬೇವು ಗುಣಪಡಿಸುತ್ತದೆ.
6 / 8
ಕಹಿ ಬೇವಿನ ಮರದ ಕಡ್ಡಿಗಳಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದರಿಂದ ಬಾಯಿ ವಾಸನೆಯ ಸಮಸ್ಯೆ ಮತ್ತು ವಸಡಿನ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಲದೇ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.
7 / 8
ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಹೊಂದಿರುವವರು ಕಹಿ ಬೇವಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅವುಗಳನ್ನು ಪ್ರತಿ ದಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಮೂತ್ರಪಿಂಡದಲ್ಲಿನ ಕಲ್ಲಿನ ಸಮಸ್ಯೆ ದೂರವಾಗುತ್ತದೆ
8 / 8
ಕಹಿ ಬೇವಿನ ಎಲೆಗಳು ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅನೇಕ ಪ್ರಯೋಜನಗಳನ್ನು ಹೊಂದಿವೆ. ಕಹಿ ಬೇವಿನ ಎಲೆಗಳನ್ನು ಪ್ರತಿದಿನ ತೆಗೆದುಕೊಳ್ಳುವುದರಿಂದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.