Asleigh Barty: 4 ವರ್ಷ, 3 ಗ್ರ್ಯಾಂಡ್ ಸ್ಲಾಮ್.. 25 ನೇ ವಯಸ್ಸಿಗೆ ಬಿಲಿಯನೇರ್! ನಂ.1 ಪಟ್ಟದೊಂದಿಗೆ ವಿದಾಯ
Asleigh Barty: ಆಸ್ಟ್ರೇಲಿಯಾದ 25ರ ಹರೆಯದ ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿ ಆಶ್ಲೀ ಬಾರ್ಟಿ ಬುಧವಾರ ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಿದರು.
Updated on:Mar 23, 2022 | 12:50 PM



ಆಶ್ಲೀ ಬಾರ್ಟಿ 24 ಏಪ್ರಿಲ್ 1996 ರಂದು ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಇಪ್ಸ್‌ವಿಚ್‌ನಲ್ಲಿ ಜನಿಸಿದರು. ಆಶ್ಲೇಗೆ ಟೆನ್ನಿಸ್ ಜೊತೆಗೆ ಕ್ರಿಕೆಟ್ ಮತ್ತು ನೆಟ್ಬಾಲ್ನಲ್ಲೂ ಪ್ರಸಿದ್ಧರು. ಬಾರ್ಟಿ ನಂತರ ಟೆನಿಸ್‌ಗಾಗಿ ನೆಟ್‌ಬಾಲ್ ತ್ಯಜಿಸಿದರು. 2014 ರ ಯುಎಸ್ ಓಪನ್ ನಂತರ, ಆಶ್ಲೀ ಬಾರ್ಟಿ ಅವರು ವೃತ್ತಿಪರ ಟೆನಿಸ್‌ನಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿದರು. ಅದರ ನಂತರ ಅವರು ಕ್ರಿಕೆಟ್ ಆಡಲು ಪ್ರಾರಂಭಿಸಿ ಬಿಬಿಎಲ್ ತಂಡವನ್ನು ಸೇರಿಕೊಂಡಿದ್ದರು. ಇದರ ನಂತರ ಅವರು 2017 ರಲ್ಲಿ ಪುನರಾಗಮನ ಮಾಡಿದಲ್ಲದೆ ಮತ್ತೆ ಹಿಂತಿರುಗಿ ನೋಡಲಿಲ್ಲ.

ಡೈಲಿ ಮೇಲ್ ವರದಿಯ ಪ್ರಕಾರ, ಆಶ್ಲೀ ಬಾರ್ಟಿ ಅವರ ನಿವ್ವಳ ಮೌಲ್ಯ ಸುಮಾರು ಒಂದು ಬಿಲಿಯನ್ 64 ಕೋಟಿಗಳು. ಈ ವರ್ಷ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಆಟಗಾರರ ಪೈಕಿ ಎಂಟನೇ ಸ್ಥಾನದಲ್ಲಿದ್ದಾರೆ. ಅವರು ಜಾಗ್ವಾರ್, ಫಿಲಾ, ವೆಜಿಮೈಟ್, ರಾಡೋ ಮತ್ತು ಉಬರ್ ಈಟ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.

ಕಳೆದ ವರ್ಷ ಬಾರ್ಟಿ, ದೀರ್ಘಕಾಲದ ಗೆಳೆಯ, ಗಾಲ್ಫ್ ಆಟಗಾರ ಗ್ಯಾರಿ ಕಿಸಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಇಬ್ಬರೂ ಸೇರಿ ಈಗ ಬ್ರಿಸ್ಬೇನ್‌ನ ವಾಟರ್‌ಬ್ರೂಕ್ಸ್ ಪ್ರದೇಶದಲ್ಲಿ ತಮ್ಮ ಕನಸ್ಸಿನ ಐಷಾರಾಮಿ ಮನೆಯನ್ನು ನಿರ್ಮಿಸುತ್ತಿದ್ದಾರೆ.
Published On - 11:37 am, Wed, 23 March 22
























