ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಇರುವ ಕೆಂಪು, ಹಸಿರು, ನೀಲಿ ಮತ್ತು ಕಪ್ಪು ಗುರುತುಗಳ ಅರ್ಥ ಏನು ಗೊತ್ತೇ?! ಇಲ್ಲಿದೆ ಮಾಹಿತಿ
TV9 Web | Updated By: ganapathi bhat
Updated on:
Mar 06, 2022 | 10:53 AM
ಪೇಸ್ಟ್ನ ನಿರ್ಧಿಷ್ಟ ವಿಷಯ ವಿವರಿಸಲು, ಟೂತ್‌ಪೇಸ್ಟ್ ತಯಾರಿಸುವ ಕಂಪನಿಗಳು ಅವುಗಳ ಮೇಲೆ ಗುರುತನ್ನು ಮಾಡುತ್ತವೆ. ಒಂದು ಟೂತ್‌ಪೇಸ್ಟ್ ಇನ್ನೊಂದಕ್ಕಿಂತ ಎಷ್ಟು ಭಿನ್ನವಾಗಿದೆ ಎಂಬುದನ್ನು ಈ ಬಣ್ಣಗಳು ಹೇಳುತ್ತವೆ. ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿನ ವಿವಿಧ ಬಣ್ಣದ ಬ್ಲಾಕ್‌ಗಳ ಅರ್ಥವೇನು? ಇಲ್ಲಿ ತಿಳಿದುಕೊಳ್ಳಿ.
1 / 5
ಟೂತ್ಪೇಸ್ಟ್ನ ಟ್ಯೂಬ್‌ನಲ್ಲಿ ವಿವಿಧ ಬಣ್ಣಗಳ ಗುರುತನ್ನು ನೀವು ಗಮನಿಸಿರಬಹುದು. ಉದಾಹರಣೆಗೆ ಕೆಂಪು, ಹಸಿರು, ನೀಲಿ ಮತ್ತು ಕಪ್ಪು ಬಣ್ಣಗಳು ಇರುವುದು ನೀವು ನೋಡಿರಬಹುದು. ಈ ಬಣ್ಣಗಳು ತಮ್ಮದೇ ಆದ ಅರ್ಥವನ್ನು ಹೊಂದಿವೆ. ಪೇಸ್ಟ್ನ ನಿರ್ಧಿಷ್ಟ ವಿಷಯ ವಿವರಿಸಲು, ಟೂತ್‌ಪೇಸ್ಟ್ ತಯಾರಿಸುವ ಕಂಪನಿಗಳು ಅವುಗಳ ಮೇಲೆ ಗುರುತನ್ನು ಮಾಡುತ್ತವೆ. ಒಂದು ಟೂತ್‌ಪೇಸ್ಟ್ ಇನ್ನೊಂದಕ್ಕಿಂತ ಎಷ್ಟು ಭಿನ್ನವಾಗಿದೆ ಎಂಬುದನ್ನು ಈ ಬಣ್ಣಗಳು ಹೇಳುತ್ತವೆ. ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿನ ವಿವಿಧ ಬಣ್ಣದ ಬ್ಲಾಕ್‌ಗಳ ಅರ್ಥವೇನು? ಇಲ್ಲಿ ತಿಳಿದುಕೊಳ್ಳಿ.
2 / 5
ಮೊದಲಿಗೆ, ಟೂತ್ಪೇಸ್ಟ್ನ ಟ್ಯೂಬ್‌ನಲ್ಲಿ ಮಾಡಿದ ಕೆಂಪು ಬಣ್ಣದ ಬ್ಲಾಕ್ ಬಗ್ಗೆ ಮಾತನಾಡೋಣ. ಈ ಬಣ್ಣದ ಬ್ಲಾಕ್ ಎಂದರೆ ನೈಸರ್ಗಿಕ ಮತ್ತು ರಾಸಾಯನಿಕ ವಸ್ತುಗಳು ಎರಡನ್ನೂ ಬೆರೆಸಿ ಈ ಟೂತ್ ಪೇಸ್ಟ್ ತಯಾರಿಸಲಾಗಿದೆ ಎಂದು ಅರ್ಥ. ನೀವು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಟೂತ್‌ಪೇಸ್ಟ್ ಮಾತ್ರ ಬಳಸಲು ಬಯಸಿದರೆ, ಕೆಂಪು ಬಣ್ಣದ ಮಾರ್ಕ್ ಇರುವ ಪೇಸ್ಟ್ ನಿಮಗಾಗಿ ಅಲ್ಲ.
3 / 5
ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಹಸಿರು ಬಣ್ಣದ ಗುರುತು ಇದ್ದರೆ, ಅದು ನೈಸರ್ಗಿಕ ಪದಾರ್ಥಗಳಿಂದ ಮಾತ್ರ ತಯಾರಿಸಲ್ಪಟ್ಟಿದೆ ಎಂದು ಅರ್ಥ. ನೀವು ರಾಸಾಯನಿಕ ವಸ್ತುಗಳನ್ನು ಇಷ್ಟಪಡದಿದ್ದರೆ, ಕೇವಲ ನೈಸರ್ಗಿಕವಾದ ಪೇಸ್ಟ್ ಬೇಕಾದರೆ ಈ ರೀತಿಯ ಟೂತ್‌ಪೇಸ್ಟ್ ಅನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ.
4 / 5
ಟ್ಯೂಬ್ ಮೇಲೆ ನೀಲಿ ಗುರುತು ಇದ್ದರೆ, ಅದು ನೈಸರ್ಗಿಕ ಪದಾರ್ಥಗಳು ಮತ್ತು ಔಷಧಿಗಳಿಂದ ತಯಾರಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. ನಿರ್ದಿಷ್ಟ ಪರಿಸ್ಥಿತಿಯಲ್ಲಿ ಈ ರೀತಿಯ ಪೇಸ್ಟ್ ಅನ್ನು ಬಳಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಆದ್ದರಿಂದ, ಅದನ್ನು ಬಳಸುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.
5 / 5
ಇನ್ನು ಕಪ್ಪು ಗುರುತು ಇದೆ ಎಂದರೆ ಈ ಟೂತ್‌ಪೇಸ್ಟ್ ಅನ್ನು ರಾಸಾಯನಿಕಗಳಿಂದ ಮಾತ್ರ ತಯಾರಿಸಲಾಗುತ್ತದೆ. ಆದ್ದರಿಂದ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ, ವಿವಿಧ ಬಣ್ಣದ ಗುರುತು ಇರುವ ಪೇಸ್ಟ್‌ಗಳಿಂದ ನಿಮ್ಮ ಆಯ್ಕೆಯನ್ನು ನೀವು ಮಾಡಬಹುದು. ಒಟ್ಟಾರೆ ನೋಡುವುದಾದರೆ, ಕೆಂಪು= ನೈಸರ್ಗಿಕ ಮತ್ತು ರಾಸಾಯನಿಕ, ಹಸಿರು= ನೈಸರ್ಗಿಕ ಪದಾರ್ಥ ಮಾತ್ರ, ನೀಲಿ= ನೈಸರ್ಗಿಕ ಪದಾರ್ಥಗಳು ಮತ್ತು ಔಷಧಿ, ಕಪ್ಪು= ರಾಸಾಯನಿಕಗಳಿಂದ ಮಾತ್ರ ಎಂದು ಅರ್ಥ.