Updated on: Dec 05, 2022 | 8:25 PM
ನಟಿ ಕೃತಿ ಶೆಟ್ಟಿ ಮೂಲತಃ ಕರ್ನಾಟಕದ ಕರಾವಳಿವರು. ಆದರೂ ಈ ಬೆಡಗಿ ಟಾಲಿವುಡ್ನಲ್ಲಿ ತಮ್ಮದೇ ಚಾರ್ಮ್ ಹೊಂದಿದ್ದಾರೆ. ಸದ್ಯ ಟಾಲಿವುಡ್ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಕೃತಿ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಫ್ಯಾನ್ಸ್ಗಳೊಂದಿಗೆ ಸದಾ ಸಂಪರ್ಕದಲ್ಲಿರುವ ನಟಿ, ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
'ಉಪ್ಪೇನಾ' ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ನೀಡಿದ ಕೃತಿ ಶೆಟ್ಟಿ, ತಮ್ಮ ಮುದ್ದು ಮುದ್ದಾದ ನಟನೆಯಿಂದ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದರು.
ನಟಿ ಕೃತಿ ಶೆಟ್ಟಿ ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಸಹ ಆಚರಿಸಿಕೊಂಡಿದ್ದಾರೆ. ತಮಗೆ ಶುಭ ಕೋರಿದ ಎಲ್ಲರಿಗೂ ಪತ್ರದ ಮೂಲಕ ಧನ್ಯವಾದ ಹೇಳಿದ್ದಾರೆ.
ಸದ್ಯ ಕೃತಿ ಶೆಟ್ಟಿ ಅವರ ಕೈಯಲ್ಲಿ ಸಾಲು ಸಾಲು ಆಫರ್ಗಳಿದ್ದು, ನಟನೆಯಲ್ಲಿ ಬ್ಯುಸಿ ಆಗಿದ್ದಾರೆ.