KTM E-Duke: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಡ್ಯೂಕ್

| Updated By: ಝಾಹಿರ್ ಯೂಸುಫ್

Updated on: Feb 10, 2022 | 8:26 PM

KTM Duke electric: ಭಾರತದಲ್ಲಿ ಕೆಟಿಎಂ-ಬಜಾಜ್​ನೊಂದಿಗೆ ಸಹಭಾಗಿತ್ವ ಹೊಂದಿದ್ದು, ಹೀಗಾಗಿ ಕೆಟಿಎಂ ಇ ಡ್ಯೂಕ್ ಉತ್ಪಾದನೆ ಭಾರತದಲ್ಲೇ ನಡೆಯುವ ಸಾಧ್ಯತೆಯಿದೆ.

1 / 5
ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಇತ್ತೀಚೆಗೆ ಹಲವು ಎಲೆಕ್ಟ್ರಿಕ್ ಬೈಕ್‌ಗಳು ಮತ್ತು ಸ್ಕೂಟರ್‌ಗಳು ಎಂಟ್ರಿ ಕೊಟ್ಟಿವೆ. ಹೀಗಾಗಿ ಬಿಡುಗಡೆಯಾದ ಬಹುತೇಕ ಸ್ಕೂಟರ್​ಗಳು ದ್ವಿಚಕ್ರ ವಾಹನ ಪ್ರಿಯರ ಗಮನ ಸೆಳೆದಿದೆ. ಅದರಲ್ಲೂ ದುಬಾರಿ ಪೆಟ್ರೋಲ್ ದರ ನಡುವೆ ಗ್ರಾಹಕರು ಕೂಡ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಆಸಕ್ತಿವಹಿಸುತ್ತಿದ್ದಾರೆ. ಇದನ್ನು ಮನಗಂಡಿರುವ ಕೆಟಿಎಂ ಕಂಪೆನಿ ಕೂಡ ತನ್ನ ಜನಪ್ರಿಯ ಡ್ಯೂಕ್ ಬೈಕ್​ ಅನ್ನು ಎಲೆಕ್ಟ್ರಿಕ್ ಮಾಡೆಲ್​ನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

2 / 5
motorcycle.dom ವರದಿ ಪ್ರಕಾರ ಕೆಟಿಎಂ ಕಂಪೆನಿ ಎಲೆಕ್ಟ್ರಿಕ್ ಡ್ಯೂಕ್ ನಿರ್ಮಾಣಕ್ಕೆ ಮುಂದಾಗಿದೆ. ಅದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದ್ದು, ಅದರಂತೆ ಹೊಸ ಮಾದರಿಯಲ್ಲಿ ಹೊಸ ಬೈಕ್​ ಅನ್ನು ಪರಿಚಯಿಸಲು ಪ್ಲ್ಯಾನ್ ರೂಪಿಸಿದೆ.

3 / 5
ಇದಕ್ಕಾಗಿ ಡ್ಯೂಕ್‌ ಮೋಟಾರ್‌ಸೈಕಲ್‌ನಲ್ಲಿ ಇ-ಪಿಲೆನ್ ಬ್ಯಾಟರಿಯನ್ನು ಬಳಸಲಾಗುತ್ತಿದ್ದು, ಇದು 5.5kWh ಸ್ಥಿರ ಬ್ಯಾಟರಿ ಸಾಮರ್ಥ್ಯ ಹೊಂದಿರಲಿದೆ.  ಈ ಬ್ಯಾಟರಿಯ ಸಹಾಯದಿಂದ ಮೋಟಾರ್‌ಸೈಕಲ್ 10kW ಶಕ್ತಿಯನ್ನು ಪಡೆಯಲಿದೆ. ಹಾಗೆಯೇ ಇದನ್ನು ಔಟ್‌ಪುಟ್ ಆಗಿ ಪರಿವರ್ತಿಸಿದರೆ 13.4bhp ಶಕ್ತಿಯನ್ನು ಉತ್ಪಾದಿಸಬಹುದು.

4 / 5
ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ KTM ಡ್ಯೂಕ್ 125 ಬೈಕ್ 14.5 Bhp ಶಕ್ತಿಯನ್ನು ಉತ್ಪಾದಿಸುತ್ತದೆ. ಹೀಗಾಗಿ ಎಲೆಕ್ಟ್ರಿಕ್ ಡ್ಯೂಕ್ ಬೈಕ್ ಎಂಟ್ರಿ ಲೆವೆಲ್ ಬೈಕ್ ಆಗಿರಲಿದೆ.

5 / 5
ಭಾರತದಲ್ಲಿ ಕೆಟಿಎಂ-ಬಜಾಜ್​ನೊಂದಿಗೆ ಸಹಭಾಗಿತ್ವ ಹೊಂದಿದ್ದು, ಹೀಗಾಗಿ ಕೆಟಿಎಂ ಇ ಡ್ಯೂಕ್ ಉತ್ಪಾದನೆ ಭಾರತದಲ್ಲೇ ನಡೆಯುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಿನಲ್ಲಿ ಯುವ ಬೈಕ್ ಪ್ರಿಯರ ಮನಗೆದ್ದಿರುವ ಕೆಟಿಎಂ ಡ್ಯೂಕ್ ಶೀಘ್ರದಲ್ಲೇ ಇ-ಡ್ಯೂಕ್ ಅವತಾರದಲ್ಲೂ ಕಾಣಿಸಿಕೊಳ್ಳಲಿರುವುದಂತು ಖಚಿತವಾಗಿದೆ.