- Kannada News Photo gallery Lava's New Budget Smartphone Lava O2 Sale Started In India check price and offers
Lava O2: ಭಾರತದಲ್ಲಿ ಲಾವಾ O2 ಸ್ಮಾರ್ಟ್‌ಫೋನ್ ಮಾರಾಟ ಆರಂಭ: ಬೆಲೆ ಕೇವಲ 8,499 ರೂ.
Lava O2 Sale: ಲಾವಾ O2 ಸ್ಮಾರ್ಟ್‌ಫೋನ್ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಏಕೈಕ ರೂಪಾಂತರಕ್ಕೆ ರೂ. 8,499 ನಿಗದಿ ಮಾಡಲಾಗಿದೆ. ಈ ಫೋನ್ ಲಾವಾ ಇ-ಸ್ಟೋರ್ ಮತ್ತು ಅಮೆಜಾನ್ ಮೂಲಕ ಸೇಲ್ ಕಾಣುತ್ತಿದೆ.
Updated on: Mar 28, 2024 | 6:55 AM

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದಾ ಬಜೆಟ್ ಬೆಲೆಗೆ ಒಂದೊಳ್ಳೊ ಫೋನನ್ನು ಅನಾವರಣ ಮಾಡುವ ಭಾರತದ ಪ್ರಸಿದ್ಧ ಮೊಬೈಲ್ ತಯಾರಕ ಸಂಸ್ಥೆ ಲಾವಾ ಇತ್ತೀಚೆಗಷ್ಟೆ ಭಾರತದಲ್ಲಿ ಹೊಸ ಲಾವಾ O2 (Lava O2) ಎಂಬ ಫೋನನ್ನು ಲಾಂಚ್ ಮಾಡಿತ್ತು. 50MP ಕ್ಯಾಮೆರಾ, 90Hz ಡಿಸ್ಪ್ಲೇ ಮತ್ತು 5,000mAh ಬ್ಯಾಟರಿಯೊಂದಿಗೆ ಬಂದ ಈ ಫೋನ್ ಇದೀಗ ಮಾರಾಟ ಕಾಣುತ್ತಿದೆ.

ಲಾವಾ O2 ಸ್ಮಾರ್ಟ್‌ಫೋನ್ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಏಕೈಕ ರೂಪಾಂತರಕ್ಕೆ ರೂ. 8,499 ನಿಗದಿ ಮಾಡಲಾಗಿದೆ. ಈ ಫೋನ್ ಲಾವಾ ಇ-ಸ್ಟೋರ್ ಮತ್ತು ಅಮೆಜಾನ್ ಮೂಲಕ ಸೇಲ್ ಕಾಣುತ್ತಿದೆ. ಮೆಜೆಸ್ಟಿಕ್ ಪರ್ಪಲ್, ಇಂಪೀರಿಯಲ್ ಗ್ರೀನ್ ಮತ್ತು ರಾಯಲ್ ಗೋಲ್ಡ್ ಎಂಬ ಮೂರು ಬಣ್ಣಗಳ ರೂಪಾಂತರಗಳಲ್ಲಿ ಬರುತ್ತದೆ.

ಲಾವಾ O2 ಸ್ಮಾರ್ಟ್‌ಫೋನ್ 6.5-ಇಂಚಿನ HD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು ಸೆಲ್ಫಿಗಳಿಗಾಗಿ ಪಂಚ್-ಹೋಲ್ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 8GB LPDDR4X RAM ಮತ್ತು 128GB UFS 2.2 ಸ್ಟೋರೇಜ್‌ನೊಂದಿಗೆ ಜೋಡಿಯಾಗಿರುವ ಯುನಿಸಾಕ್ T616 ಪ್ರೊಸೆಸರ್‌ನಿಂದ ಚಾಲಿತವಾಗಿದೆ.

ಛಾಯಾಗ್ರಹಣ ವಿಭಾಗದಲ್ಲಿ, ನೀವು AI ಮೋಡ್, HDR ಮೋಡ್, ಪೋರ್ಟ್ರೇಟ್ ಮೋಡ್, ಬ್ಯೂಟಿ ಮೋಡ್ ಮತ್ತು ನೈಟ್ ಮೋಡ್‌ನಂತಹ ವೈಶಿಷ್ಟ್ಯಗಳೊಂದಿಗೆ 50MP ಡ್ಯುಯಲ್ AI ಕ್ಯಾಮೆರಾವನ್ನು ಪಡೆಯುತ್ತೀರಿ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮೆರಾ ಇದೆ.

ಈ ಫೋನ್ 18W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಆಂಡ್ರಾಯ್ಡ್ 13 ಮೂಲಕ ರನ್ ಆಗುತ್ತದೆ. ನೀವು ಲಾವಾ O2 ಜೊತೆಗೆ ಕರೆ ರೆಕಾರ್ಡಿಂಗ್ ಮತ್ತು ಡ್ಯುಯಲ್ ಅಪ್ಲಿಕೇಶನ್ ಬೆಂಬಲವನ್ನು ಸಹ ಪಡೆಯುತ್ತೀರಿ. ಈ ಫೋನ್‌ನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ.














