ಮತದಾನ ದಿನದಂದೆ ಕೆಲವು ಮದುವೆಗಳು ಜರುಗಿವೆ. ಅದರಂತೆ ಬೆಂಗಳೂರಿನ ಶ್ರೀನಗರದಲ್ಲಿ ವಿವಾಹದ ಬಳಿಕ ಮತಗಟ್ಟೆಗೆ ಬಂದು ನವದಂಪತಿ ಮತದಾನ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನವದಂಪತಿ ಕವಿತಾ ಯಾದವ್ ಹಾಗೂ ವಿನೋದ್ ಯಾದವ್, ತಾಳಿ ಕಟ್ಟಿದ ನಂತರ ಮತ ಕ್ಷೇತ್ರಕ್ಕೆ ಬಂದು ದಂಪತಿ ಮತದಾನ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿಯೂ ಮದುವೆಯಾದ ಬಳಿಕ ನೂತನ ವಧು- ವರ, ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ.
ಕಲ್ಯಾಟ ಮಂಟಪದಿಂದ ಮೈಸೂರಿನ TK ಬಡಾವಣೆಯ ಮತಗಟ್ಟೆಗೆ ಬಂದ ನೂತನ ವಧು-ವರ ದಿನೇಶ್ ಹಾಗೂ ರುಚಿತ ಅವರು ಮತ ಚಲವಾಣೆ ಮಾಡಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಟಪ್ಪನಹಟ್ಟಿ ಗ್ರಾಮದ ಮತಗಟ್ಟೆ ಸಂಖ್ಯೆ 78ರಲ್ಲಿ ನವದಂಪತಿ ಅಶೋಕ್ - ಸುಶ್ಮಿತ ಮತದಾನ ಮಾಡಿದರು.
ಮದುವೆ ಮಂಟಪಕ್ಕೆ ಬರುವ ಮೊದಲು ಕೊಡಗಿನಲ್ಲಿ ವಧು-ವರ ಮತಚಲಾವಣೆ ಮಾಡಿದ್ದಾರೆ. ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿ ತೀರ್ಥೇಶ್- ವಿನುತ ಮತ ಹಾಕಿದರು.