Madikeri gun carnival 2022: ಈ ಬಾರಿಯ ಕೊಡಗಿನ ವಿಶೇಷ ಕೋವಿ ಹಬ್ಬ ಹೇಗಿತ್ತು ಅಂತ ನೀವೇ ನೋಡಿ…

Updated By: ಸಾಧು ಶ್ರೀನಾಥ್​

Updated on: Dec 30, 2022 | 4:37 PM

ಕೊಡಗಿನ ಜನರ ಆಚಾರ ವಿಚಾರಗಳು ವಿಭಿನ್ನ... ಈ ಪುಟ್ಟ ಜಿಲ್ಲೆಯ ಹಬ್ಬದ ಆಚಾರಣೆಯಂತೂ ಎಂಥವರನ್ನೂ ಸೆಳೆಯುವಂತದ್ದು... ನಿಮ್ಗೆ ಗೊತ್ತಾ... ಕೋವಿಯನ್ನ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡೋ ಇಲ್ಲಿನ ಜನರು ಕೋವಿಗೂ ಒಂದು ಹಬ್ಬ ಮಾಡ್ತಾರೆ... ಈ ಬಾರಿಯ ಕೊಡಗಿನ ವಿಶೇಷ ಕೋವಿ ಹಬ್ಬ ಹೇಗಿತ್ತು ಅಂತ ನೀವೇ ನೋಡಿ...

1 / 14
ದೇಶದಲ್ಲಿ ಯಾರಿಗೂ ಇಲ್ಲದ ವಿಶೇಷ ವಿನಾಯಿತಿ ಕೊಡಗಿನ ಜನ್ರಿಗೆ ಕೋವಿ ಬಳಸಲು ಇದೆ. ಇದು ಶತಮಾನಗಳಿಂದಲೂ ನಡೆದುಕೊಂಡು ಬಂದ ಪದ್ದತಿ, ಇದೇ ಕಾರಣಕ್ಕೆ ಕೋವಿ ಕೊಡಗಿನವರ ಪಾಲಿಗೆ ಕೇವಲ ಆಯುಧವಲ್ಲ, ಅದೊಂದು ಧಾರ್ಮಿಕ ಸಂಕೇತ. ಹಾಗಾಗಿ ಈಗಿನ ಯುವ ಪೀಳಿಗೆಗೆ ಕೋವಿಗೂ ಕೊಡಗಿನ ಜನರಿಗೂ  ಇರೋ ಅವಿನಾಭಾವ ಸಂಬಂಧದ ಪರಂಪರೆಯನ್ನು ತಿಳಿಸಲು ಈ ಕೋವಿ ಉತ್ಸವ ಮಹತ್ವ ಪಡೆದಿದೆ.

2 / 14
ಇನ್ನ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಹೊರವಲಯದಲ್ಲಿ ನಡೆದ ಈ ವಿಶಿಷ್ಟ ಉತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ಉಡುಪಿನಲ್ಲಿ ಭಕ್ತಿಪೂರ್ವಕವಾಗಿ ಮೆರವಣಿಗೆಯಲ್ಲಿ ಕೋವಿಯನ್ನು ತಂದು ಪೂಜಿಸಲಾಯ್ತು..  ಪುರುಷ ಮಹಿಳೆ ಎಂಬ ಭೇದವಿಲ್ಲದೆ, ಎಲ್ಲರೂ ತೆಂಗಿನ ಕಾಯಿಗೆ ಗುಂಡು ಹಾರಿಸೋ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ರು.

3 / 14
ಬಂದೂಕು ಸಮೇತ ಮೆರವಣಿಗೆ ನಡೆಸಿದ ಸಾಂಪ್ರದಾಯಿಕ ಉಡುಗೆತೊಟ್ಟ ಜನರು ಮೈದಾನದಲ್ಲಿ ಜಮಾಯಿಸಿ ಬಂದೂಕು ತಮ್ಮ ಹಕ್ಕು ಎಂಬುದನ್ನ ಸಾರಿದ್ರು. ಇದಾದ ಬಳಿಕ ಉತ್ಸವದಲ್ಲಿ ಪಾಲ್ಗೊಂಡಿದ್ದವರು ತಮ್ಮ ತಮ್ಮ ಕೋವಿಗಳೊಂದಿಗೆ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದರು.  ನಾವು ಹಲವು ಬಗೆಯ ಉತ್ಸವಗಳನ್ನ ನೋಡಿರ್ತೀವಿ, ಆದರೆ ಕೊಡಗಿನಲ್ಲಿ ನಡೆಯುವ ಕೋವಿ ಉತ್ಸವ ನಿಜಕ್ಕೂ ವಿಶೇಷ. ಕೋವಿ ಬಳಸೋದು ಪ್ರಾಣ ರಕ್ಷಣೆಗಾಗಿ ಅಲ್ಲ ಬದಲಾಗಿ ಕೋವಿಗೆ ಕೊಡವರಲ್ಲಿ ಪೂಜ್ಯಭಾವನೆ ಇದೆ ಅನ್ನೋದನ್ನ ಸಾರೋದಲ್ಲಿ ಈ ಹಬ್ಬ ಸಕ್ಸಸ್ ಆಯಿತು. ವರದಿ: ಗೋಪಾಲ್ ಸೋಮಯ್ಯ ಐಮಂಡ, ಟಿವಿ 9, ಕೊಡಗು

4 / 14
ಕಳೆದ 12 ವರ್ಷದಿಂದ ಈ ಕೋವಿ ಉತ್ಸವಕ್ಕೆ ಕೊಡಗಿನಲ್ಲಿ ಚಾಲನೆ ಸಿಕ್ಕಿದೆ. ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ಈ ವಿಶಿಷ್ಟ ಕೋವಿ ಹಬ್ಬವನ್ನ ಶುರುಮಾಡಿದೆ. ಕೋವಿ ಹಬ್ಬವನ್ನು ಶುರುಮಾಡಲು ಕೂಡ ಒಂದು ಮಹತ್ವದ ಹಿನ್ನೆಲೆಯಿದೆ.

5 / 14
ಕೊಡಗಿನಲ್ಲಿ ಕೋವಿಗೆ ಪೂಜ್ಯಭಾವನೆಯಿದೆ... ಪ್ರತಿಮನೆಯಲ್ಲಿಯೂ ಹಬ್ಬ ಹರಿದಿನಗಳಂದು ದೇವರಂತೆಯೇ ಕೋವಿಗೂ ಪೂಜೆ ಸಲ್ಲುತ್ತೆ. ಇದೆಲ್ಲದರ ಸಂಕೇತವಾಗಿ  ಕೋವಿ ಹಬ್ಬವನ್ನ  ಸಾರ್ವಜನಿಕವಾಗಿ  ಆಚರಣೆ ಮಾಡೋ‌ ಮೂಲಕ ಇಲ್ಲಿಯ ಜನರು ಸಂಭ್ರಮಿಸುತ್ತಾರೆ.

6 / 14
ಈ ಬಾರಿ ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮದಲ್ಲಿ ಕೊಡಗು ನ್ಯಾಷನಲ್‌ ಕೌನ್ಸಿಲ್ ವತಿಯಿಂದ ಈ ಕೋವಿ ಹಬ್ಬ ಆಚರಿಸಲಾಯಿತು.

7 / 14
ಕೊಡಗಿನ ಜನರ ಹಬ್ಬ ಹರಿದಿನ, ಹುಟ್ಟು ಸಾವು ಎಲ್ಲದರಲ್ಲಿಯೂ ಕೋವಿಗೆ ವಿಶೇಷ ಸ್ಥಾನವಿದೆ. ಬಂದೂಕು ಕೊಡವರಿಗೆ ಕೇವಲ ಒಂದು ಆಯುಧವಲ್ಲ ಇದು ಇಲ್ಲಿನ ಜನರ ಧಾರ್ಮಿಕ ಸಂಕೇತ.

8 / 14
ಇಂಡಿಯನ್ ಆರ್ಮ್ಸ್​​ ಆಕ್ಟ್ ಸೆಕ್ಷನ್ ಮೂರರ ಪ್ರಕಾರ ಇಲ್ಲಿನ ಮೂಲ ನಿವಾಸಿಗಳಿಗೆ ಕೋವಿ ಬಳಸಲು ವಿನಾಯಿತಿ ಕೂಡ ಇದೆ.

9 / 14
ಪ್ರಕೃತಿ ಸೌಂದರ್ಯದ ಶ್ರೀಮಂತ ಜಿಲ್ಲೆ, ಯೋಧರ ನಾಡು... ಎಂದು ಕರೆಸಿಕೊಳ್ಳುವ ಕೊಡಗಿನ ಪ್ರತಿಯೊಂದು ಆಚರಣೆಯೂ ಸ್ಪೆಷಲ್. ವೀರ ಶೂರರ ನಾಡೆಂದು ಕರೆಸಿಕೊಳ್ಳೋ ಇಲ್ಲಿನ ಜನರ ಪ್ರತಿಯೊಂದು ಹಬ್ಬಕ್ಕೂ - ಪ್ರಕೃತಿಗೂ ಸಂಬಂಧ ಇದ್ದೇ ಇರುತ್ತೆ.

10 / 14
ಶಸ್ತ್ರವೊಂದಕ್ಕೆ ಇಷ್ಟೊಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿರೋ ಇವರೆಲ್ಲಾ ಕರ್ನಾಟಕದ ಹೆಮ್ಮೆಯ ಕೊಡಗಿನವರು..

11 / 14
ಸಾಂಪ್ರದಾಯಿಕ ಶೈಲಿಯ ಉಡುಪಿನಲ್ಲಿ ಕೊಡಗಿನ ಜನ್ರು. ಬಂದೂಕುಗಳನ್ನ ನೀಟಾಗಿ ಜೋಡಿಸಿ ಪೂಜೆ ಮಾಡುತ್ತಿರೋ ಜನ.. ಕೋವಿಗೆ ಶ್ರದ್ದೆಯಿಂದ ನಮಿಸುತ್ತಾ ಆರಾಧಿಸುತ್ತಿರೋ ಮಂದಿ, ಈ ವಿಶೇಷ ಪದ್ದತಿಯನ್ನ ಕಂಡ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.

12 / 14
ಈ ಬಾರಿಯ ಕೊಡಗಿನ  ವಿಶೇಷ ಕೋವಿ ಹಬ್ಬ ಹೇಗಿತ್ತು ಅಂತ ನೀವೇ ನೋಡಿ...

13 / 14
ಕೊಡಗಿನ ಜನರ ಆಚಾರ ವಿಚಾರಗಳು ವಿಭಿನ್ನ... ಈ ಪುಟ್ಟ ಜಿಲ್ಲೆಯ ಹಬ್ಬದ ಆಚಾರಣೆಯಂತೂ ಎಂಥವರನ್ನೂ  ಸೆಳೆಯುವಂತದ್ದು... ನಿಮ್ಗೆ ಗೊತ್ತಾ... ಕೋವಿಯನ್ನ ಶ್ರದ್ಧಾ  ಭಕ್ತಿಯಿಂದ ಪೂಜೆ ಮಾಡೋ ಇಲ್ಲಿನ ಜನರು ಕೋವಿಗೂ ಒಂದು ಹಬ್ಬ ಮಾಡ್ತಾರೆ...

14 / 14
ಈ ಬಾರಿಯ ಕೊಡಗಿನ  ವಿಶೇಷ ಕೋವಿ ಹಬ್ಬ ಹೇಗಿತ್ತು ನೋಡಿ. ಬಂದೂಕು ಸಮೇತ ಮೆರವಣಿಗೆ ನಡೆಸಿದ ಸಾಂಪ್ರದಾಯಿಕ ಉಡುಗೆತೊಟ್ಟ ಜನರು ಮೈದಾನದಲ್ಲಿ ಜಮಾಯಿಸಿ ಬಂದೂಕು ತಮ್ಮ ಹಕ್ಕು ಎಂಬುದನ್ನ ಸಾರಿದ್ರು. ಇದಾದ ಬಳಿಕ ಉತ್ಸವದಲ್ಲಿ ಪಾಲ್ಗೊಂಡಿದ್ದವರು ತಮ್ಮ ತಮ್ಮ ಕೋವಿಗಳೊಂದಿಗೆ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದರು.