ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ಶಿವ ಮತ್ತು ತಾಯಿ ಪಾರ್ವತಿ (ಮಹಾಶಿವರಾತ್ರಿ 2022) ಮಹಾಶಿವರಾತ್ರಿಯಂದು ವಿವಾಹವಾದರು. ಮಹಾಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ ಶಿವನನ್ನು ಮೆಚ್ಚಿಸಲು ಭಕ್ತರು ಉಪವಾಸ ಮಾಡುತ್ತಾರೆ. ತಾಯಿ ಪಾರ್ವತಿಯಂತೆಯೇ ಹೆಣ್ಣುಮಕ್ಕಳು ಕೂಡ ತಮಗೆ ಬೇಕಾದುದನ್ನು ಪಡೆಯಲು ಉಪವಾಸವಿದ್ದು, ಎಲ್ಲ ನಿಯಮಗಳನ್ನು ಪಾಲಿಸಿ ಪೂಜಿಸುತ್ತಾರೆ.
ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿರಾರ್ ಕೌಶಿಕ್ ಜಾಧವ್ ಎನ್ನುವವರು ಬಿಲ್ವ ಪತ್ರೆ ಮೇಲೆ ಭೋಲೆನಾಥನ ಚಿತ್ರವನ್ನು ಚಿತ್ರಿಸಿದ್ದಾರೆ. ಕೇವಲ 20 ನಿಮಿಷಗಳಲ್ಲಿ ಈ ಚಿತ್ರವನ್ನು ಬಿಡಿಸಲಾಗಿದೆ.
ಬಿಲ್ವ ಪತ್ರೆಯ ಮೂರು ಎಲೆಗಳು ಶಿವನ ಮೂರು ಕಣ್ಣುಗಳನ್ನು ಸಂಕೇತಿಸುತ್ತವೆ. ಅಂದರೆ ಶಿವನ ರೂಪವನ್ನು ಹೊಂದಿರುವ ಬಿಲ್ವ ಎಲೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹಾಗಾಗಿ ಚಿತ್ರಕಲಾವಿದ ಕೌಶಿಕ್ ಜಾಧವ್ ಬಿಲ್ವ ಪತ್ರೆ ಮೇಲೆ ಶಿವನನ್ನು ಚಿತ್ರಿಸಿದ್ದಾರೆ.
Published On - 11:02 am, Tue, 1 March 22