Asian Cup: ಏಷ್ಯನ್ ಕಪ್​ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಮನಿಕಾ ಬಾತ್ರಾ..!

| Updated By: ಪೃಥ್ವಿಶಂಕರ

Updated on: Nov 19, 2022 | 6:03 PM

Asian Cup: ಏಷ್ಯನ್ ಕಪ್‌ನ 39 ವರ್ಷಗಳ ಇತಿಹಾಸದಲ್ಲಿ ಪದಕ ಗೆದ್ದ ಮೊದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮನಿಕಾ ಪಾತ್ರರಾಗಿದ್ದಾರೆ.

1 / 5
ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಏಷ್ಯನ್ ಕಪ್​ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಸೋತ ನಂತರ ಅವರು ಕಂಚಿನ ಪದಕಕ್ಕಾಗಿ ಜಪಾನ್‌ನ ಹೀನಾ ಹಯಾತ್ ಅವರನ್ನು ಎದುರಿಸಿದ್ದರು.

2 / 5
ಮನಿಕಾ ಬಾತ್ರಾ ಪದಕದ ಪಂದ್ಯದಲ್ಲಿ ಹಿನಾ ಹಯಾತಾ ಅವರನ್ನು 11-6,6-11,11-7,12-10,4-11, 11-2 ಸೆಟ್​​ಗಳಿಂದ ಸೋಲಿನ ಪಂದ್ಯವನ್ನು ಗೆದ್ದು ಭಾರತಕ್ಕೆ ಪದಕ ಗೆದ್ದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌ ನಿರಾಸೆಯ ನಂತರ ಮನಿಕಾ ಪಡೆದ ದೊಡ್ಡ ಗೆಲುವು ಇದಾಗಿದೆ.

3 / 5
ಶ್ರೇಯಾಂಕ ರಹಿತ ಮನಿಕಾ ಈ ಕಾಂಟಿನೆಂಟಲ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ವಿಶ್ವದ ಐದನೇ ಶ್ರೇಯಾಂಕದ ಟೇಬಲ್ ಟೆನಿಸ್ ಆಟಗಾರ್ತಿಯ ವಿರುದ್ಧ 8-11 11-7 7-11 6-11 11-8 7-11 (2-4) ಸೋಲನುಭವಿಸಿ ಚಿನ್ನದ ಪದಕದ ರೇಸ್​ನಿಂದ ಹೊರಬಿದ್ದಿದ್ದರು.

4 / 5
ಶ್ವ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿರುವ ಮನಿಕಾ ಕ್ವಾರ್ಟರ್‌ಫೈನಲ್‌ನಲ್ಲಿ ತನ್ನ ಉತ್ತಮ ಶ್ರೇಯಾಂಕದ ಚೈನೀಸ್ ತೈಪೆಯ ಚೆನ್ ಸು ಯು ಅವರನ್ನು 4-3 ಅಂತರದಿಂದ ಸೋಲಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದರು.

5 / 5
ಏಷ್ಯನ್ ಕಪ್‌ನ 39 ವರ್ಷಗಳ ಇತಿಹಾಸದಲ್ಲಿ ಪದಕ ಗೆದ್ದ ಮೊದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮನಿಕಾ ಪಾತ್ರರಾಗಿದ್ದಾರೆ. ಈ ಹಿಂದೆ 2015ರಲ್ಲಿ ಅಚಂತ ಶರತ್ ಕಮಲ್ ಮತ್ತು 2019ರಲ್ಲಿ ಜಿ ಸತ್ಯನ್ ಆರನೇ ಸ್ಥಾನ ಪಡೆದಿದ್ದರು.