Updated on: Nov 19, 2022 | 4:47 PM
ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ನಟನೆಯ ‘ಲೈಗರ್’ ಸಿನಿಮಾ ಈ ವರ್ಷ ತೆರೆಗೆ ಬಂತು. ಭಾರೀ ನಿರೀಕ್ಷೆಗಳೊಂದಿಗೆ ತೆರೆಕಂಡಿದ್ದ ಈ ಸಿನಿಮಾ ಸೋಲು ಕಂಡಿತು.
ನಟಿ ಅನನ್ಯಾ ಪಾಂಡೆಗೆ ಇದು ಮೊದಲ ಟಾಲಿವುಡ್ ಸಿನಿಮಾ ಆಗಿತ್ತು. ಆದರೆ, ಈ ಚಿತ್ರ ಸೋತಿತು. ಈ ಮೂಲಕ ಗೆಲ್ಲುವ ಕನಸು ಕಂಡಿದ್ದ ಅನನ್ಯಾಗೆ ಹಿನ್ನಡೆ ಆಗಿದೆ.
ಸದ್ಯ ಅನನ್ಯಾ ಪಾಂಡೆ ‘ಖೋ ಗಯೇ ಹಮ್ ಕಹಾ’ ಹಾಗೂ ‘ಡ್ರೀಮ್ ಗರ್ಲ್ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
2019ರಲ್ಲಿ ತೆರೆಗೆ ಬಂದ ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದವರು ಅನನ್ಯಾ ಪಾಂಡೆ.
ಆ ಬಳಿಕ ಹಲವು ಚಿತ್ರಗಳಲ್ಲಿ ಅವರು ನಟಿಸಿದರು. ಆದರೆ, ದೊಡ್ಡ ಯಶಸ್ಸು ಅವರಿಗೆ ಸಿಕ್ಕಿಲ್ಲ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಆಫರ್ಗಳು ಸುಲಭವಾಗಿ ಸಿಕ್ಕವು. ಆದರೆ, ಗೆಲುವು ಮಾತ್ರ ಸಿಕ್ಕಿಲ್ಲ.