ಹೊಸ ಕಾರು ಖರೀದಿಸಿದ ಮ್ಯಾಕ್ಸ್ ಮಂಜು? ಇಲ್ಲಿದೆ ವಿವರ..

Updated on: Jun 14, 2025 | 8:54 AM

ಉಗ್ರಂ ಮಂಜು ಅವರು ನಟನೆಯಲ್ಲಿ ಬ್ಯುಸಿ ಇದ್ದಾರೆ. ಬಿಗ್ ಬಾಸ್ ಬಳಿಕ ಅವರಿಗೆ ಬರೋ ಆಫರ್​ಗಳು ಕೂಡ ಹೆಚ್ಚಿವೆ. ಅವರು ಈಗ ಕೆಲವು ಕೆಟ್ಟ ಗುಣಗಳನ್ನು ಕಳೆದು ಒಳ್ಳೆಯ ರೀತಿಯಲ್ಲಿ ಜೀವನ ನಡೆಸಲು ಬಯಸುತ್ತಿದ್ದಾರೆ. ಈಗ ಅವರ ಕಾರಿನ ಫೋಟೋ ವೈರಲ್ ಆಗಿದೆ.

1 / 5
ಮ್ಯಾಕ್ಸ್ ಮಂಜು ಶೂಟಿಂಗ್ ಕಾರಣಕ್ಕೆ, ವೈಯಕ್ತಿಕ ಕಾರಣಕ್ಕೆ ನಾನಾ ಕಡೆಗಳಿಗೆ ಪ್ರವಾಸ ಬೆಳೆಸುತ್ತಾರೆ. ಈಗ ಅವರು ಸಕಲೇಶಪುರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮಂಜು ಅವರು ಹಂಚಿಕೊಂಡಿದ್ದಾರೆ. ಈ ವೇಳೆ ಒಂದು ವಿಚಾರ ಗಮನ ಸೆಳೆದಿದೆ.

ಮ್ಯಾಕ್ಸ್ ಮಂಜು ಶೂಟಿಂಗ್ ಕಾರಣಕ್ಕೆ, ವೈಯಕ್ತಿಕ ಕಾರಣಕ್ಕೆ ನಾನಾ ಕಡೆಗಳಿಗೆ ಪ್ರವಾಸ ಬೆಳೆಸುತ್ತಾರೆ. ಈಗ ಅವರು ಸಕಲೇಶಪುರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮಂಜು ಅವರು ಹಂಚಿಕೊಂಡಿದ್ದಾರೆ. ಈ ವೇಳೆ ಒಂದು ವಿಚಾರ ಗಮನ ಸೆಳೆದಿದೆ.

2 / 5

ಮ್ಯಾಕ್ಸ್ ಮಂಜು ಅವರು ಮಹೀಂದ್ರಾ XUV 700 ಕಾರಿನ ಎದುರು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಮಂಜು ಹೊಸ ಕಾರು ಖರೀದಿಸಿದರೆ ಎನ್ನುವ ಪ್ರಶ್ನೆ ಮೂಡಿದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

3 / 5

ಇದು ಮಂಜು ಅವರ ಕಾರೇ. ಅವರು 2024ರ ಆಗಸ್ಟ್​ ತಿಂಗಳಲ್ಲೇ ಈ ಕಾರನ್ನು ಖರೀದಿ ಮಾಡಿದ್ದರು. ಅಂದರೆ ಬಿಗ್ ಬಾಸ್​ಗೆ ಹೋಗುವ ಮೊದಲೇ ಅವರು ಹೊಸ ಕಾರನ್ನು ಖರೀದಿ ಮಾಡಿಯಾಗಿತ್ತು. ಆದರೆ, ಅವರು ಆ ಫೋಟೋಗಳನ್ನು ಹಂಚಿಕೊಂಡಿರಲಿಲ್ಲ.

4 / 5

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಸೋ ಅವಕಾಶ ಮಂಜುಗೆ ದೊರೆಯಿತು. ಇಲ್ಲಿ ಮಂಜು ಸಾಕಷ್ಟು ಜನಪ್ರಿಯತೆ ಪಡೆದರು. ‘ಬಿಗ್ ಬಾಸ್’ ಮನೆಯಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರಿಗೆ ಹೊಸ ಹೊಸ ಆಫರ್​ಗಳು ಬರುತ್ತಿವೆ.

5 / 5

ಮಂಜು ಅವರು ‘ಮ್ಯಾಕ್ಸ್’ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡಿದರು. ಇದಾದ ಬಳಿಕ ಅವರನ್ನು ಅನೇಕರು ಉಗ್ರಂ ಮಂಜು ಎಂದು ಕರೆಯೋ ಬದಲು ಮ್ಯಾಕ್ಸ್ ಮಂಜು ಎಂದು ಕರೆಯುತ್ತಿದ್ದಾರೆ. ಇದು ಅವರಿಗೆ ಖುಷಿ ನೀಡಿದೆ.   

Published On - 8:52 am, Sat, 14 June 25

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us