
ದಿ ಕ್ಲಾಸಿಕ್ ಲುಕ್ ಈ ಹೇರ್ ಸ್ಟೈಲ್ ಹದಿಹರೆಯದವರಿಂದ ಹಿಡಿದು ಅರವತ್ತು ವಯಸ್ಸಿನವರಿಗೂ ಕೂಡ ಬೆಸ್ಟ್ ಎನ್ನಬಹುದು. ಆಕರ್ಷಕವಾದ ನೋಟವನ್ನು ಹೊಂದಲು ಇಷ್ಟ ಪಡುವವರು ಈ ಕೇಶವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು.

ಬ್ಲೋಔಟ್ ಹೇರ್ ಸ್ಟೈಲ್ ನಲ್ಲಿ ತಲೆಯ ಎರಡೂ ಬದಿಯ ಕೂದಲನ್ನು ಶಾರ್ಟ್ ಮಾಡಿ, ಮಧ್ಯದಲ್ಲಿ ಸ್ವಲ್ಪ ಕೂದಲನ್ನು ಉದ್ದವಾಗಿ ಬಿಡುವುದು ಯುವಕರಿಗೆ ಹೇಳಿ ಮಾಡಿಸಿದ ಕೇಶವಿನ್ಯಾಸವಾಗಿದೆ. ಆದರೆ ವಯಸ್ಸು 30 ದಾಟಿದವರಿಗೆ ಇದು ಸೂಕ್ತವಲ್ಲ. ಯುವಕರಿಗಂತೂ ಇದು ರಗಡ್ ಲುಕ್ ನೀಡುವುದರಲ್ಲಿ ಎರಡು ಮಾತಿಲ್ಲ.

ಜುಟ್ಟು ಹಾಕುವುದು ಕೂಡ ಈಗಿನ ಕಾಲದಲ್ಲಿ ಟ್ರೆಂಡ್ ಎನ್ನಬಹುದು. ಕೂದಲಿಗೆ ಕತ್ತರಿ ಹಾಕಲು ಇಷ್ಟ ಎನ್ನುವವರು ಈ ಹೇರ್ ಸ್ಟೈಲನ್ನು ಆಯ್ಕೆ ಮಾಡಿಕೊಳ್ಳಬಹುದು. ಸದೃಢ ಮೈಕಟ್ಟು ಹೊಂದಿದ್ದವರಿಗೆ ಜುಟ್ಟು ಹಾಕುವ ಈ ಕೇಶ ವಿನ್ಯಾಸವು ಹೊಸ ಲುಕ್ ತಂದುಕೊಡುತ್ತದೆ.

ಸೈಡ್ ಶೇವ್ ಮಾಡಿದ ಉದ್ದ ಕೂದಲಿನ ಹೇರ್ ಸ್ಟೈಲ್ ಯೋ ಯೋ ಲುಕ್‌ಗೆ ಹೇಳಿ ಮಾಡಿಸಿದ ಹೇರ್ ಸ್ಟೈಲ್ ಎನ್ನಬಹುದು. ಇದನ್ನ ಮಾಡಿಸಲು ಕೂದಲು ಸ್ವಲ್ಪ ಮಂದವಾಗಿದ್ದರೆ ಒಳ್ಳೆಯದು. ಕಾಲೇಜು ಹುಡುಗರು ಹಾಗೂ ಯುವಕರಿಗೆ ಈ ಕೇಶವಿನ್ಯಾಸವು ಸೂಕ್ತವಾಗಿದೆ.

ಆರ್ಮಿ ಕಟ್ ಹೇರ್ ಸ್ಟೈಲ್ ತೆಳ್ಳಗೆ ಮೈ ಕಟ್ಟು ಹೊಂದಿರುವ ಯುವಕರಿಗೆ ಇದು ಸೂಕ್ತವಲ್ಲ. ಸದೃಢ ಮೈಕಟ್ಟು ಹೊಂದಿರುವವರು ಇದನ್ನು ಮಾಡಿಸಬಹುದು. ಯುವಕರು ಹಾಗೂ ಮಧ್ಯವಯಸ್ಸಿನವರಿಗೆ ಈ ಕೇಶವಿನ್ಯಾಸವು ಖಡಕ್ ಲುಕ್ ತಂದು ಕೊಡುವುದರಲ್ಲಿ ಎರಡು ಮಾತಿಲ್ಲ.