- Kannada News Photo gallery MG Hector facelift launched in Auto Expo 2023 at Rs 14.73 lakh, chek out details
Auto Expo 2023: ಆಕರ್ಷಕ ಬೆಲೆಯಲ್ಲಿ ಬಿಡುಗಡೆಗೊಂಡ ಎಂಜಿ ಹೆಕ್ಟರ್ ಫೇಸ್‌ಲಿಫ್ಟ್!
ಎಂಜಿ ಮೋಟಾರ್ ಕಂಪನಿಯು 2023ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ ಫೇಸ್‌ಲಿಫ್ಟ್ ಎಸ್ ಯುವಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿತು. ಹೊಸ ಕಾರು ಈ ಬಾರಿ ಹಲವಾರು ನವೀಕೃತ ಸೌಲಭ್ಯಗಳೊಂದಿಗೆ ಅತಿಹೆಚ್ಚು ಸುರಕ್ಷತೆ ನೀಡುವ ಅಡ್ವಾನ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
Updated on:Jan 11, 2023 | 5:19 PM

ಹೊಸ ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ ಮಾದರಿಗಳನ್ನು ಬಿಡುಗಡೆ ಮಾಡಿದ ಎಂಜಿ ಮೋಟಾರ್

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 14.73 ಲಕ್ಷದಿಂದ ರೂ. 21.73 ಲಕ್ಷ ಬೆಲೆ ಹೊಂದಿರುವ ಹೆಕ್ಟರ್ ಫೇಸ್‌ಲಿಫ್ಟ್ ಕಾರು

ಎಕ್ಸ್ ಶೋರೂಂ ಪ್ರಕಾರ ರೂ. 20.15 ಲಕ್ಷದಿಂದ ರೂ. 22.43 ಲಕ್ಷ ಬೆಲೆ ಹೊಂದಿದೆ 7 ಸೀಟರ್ ಸೌಲಭ್ಯ ಹೊಂದಿರುವ ಹೆಕ್ಟರ್ ಪ್ಲಸ್

ಸ್ಟೈಲ್, ಶೈನ್, ಸ್ಮಾರ್ಟ್, ಸ್ಮಾರ್ಟ್ ಪ್ರೊ, ಸ್ಯಾವಿ ಪ್ರೊ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ ಹೆಕ್ಟರ್ ಫೇಸ್‌ಲಿಫ್ಟ್

ಹೊಸ ಕಾರುಗಳಲ್ಲಿ ಈ ಹಿಂದಿನಂತೆಯೇ 1.5 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯ

ಪೆಟ್ರೋಲ್ ಮಾದರಿಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳು ಖರೀದಿಗೆ ಲಭ್ಯ

ಡೀಸೆಲ್ ಮಾದರಿಗಳಲ್ಲಿ ಕೇವಲ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಮಾತ್ರ ಖರೀದಿಗೆ ಲಭ್ಯ

ವಿನೂತನ ಫೀಚರ್ಸ್ ಗಳೊಂದಿಗೆ ಶಾರ್ಪ್ ಡಿಸೈನ್ ಹೊಂದಿರುವ ಹೊಸ ಕಾರಿನಲ್ಲಿ 18 ಇಂಚಿನ ಅಲಾಯ್ ವ್ಹೀಲ್, ಕ್ರೋಮ್ ಸರೌಂಡ್ ಮತ್ತು ಮರುವಿನ್ಯಾಸಗೊಳಿಸಿದ ರಿಯರ್ ಬಂಪರ್ ಜೋಡಣೆ

ಒಳಭಾಗದಲ್ಲೂ ಹಲವಾರು ಬದಲಾವಣೆ ಹೊಂದಿರುವ ಹೊಸ ಕಾರಿನಲ್ಲಿ 14.0 ಇಂಚಿನ ಟಚ್ ಸ್ಕ್ರೀನ್ ಡ್ಯಾಶ್ ಬೋರ್ಡ್, ಡಿ ಶೇಫ್ ಎಸಿ ವೆಂಟ್ಸ್, 7 ಇಂಚಿನ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ಲಭ್ಯವಿದೆ.

ಸುರಕ್ಷತೆಗಾಗಿ ವಿವಿಧ ಸುರಕ್ಷಾ ಫೀಚರ್ಸ್ ಹೊಂದಿರುವ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸೌಲಭ್ಯವನ್ನು ಜೋಡಿಸಲಾಗಿದ್ದು, ಹೊಸ ಕಾರು ಮಹೀಂದ್ರಾ ಎಕ್ಸ್ ಯುವಿ700, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಹೈರೈಡರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.
Published On - 5:02 pm, Wed, 11 January 23




