ದಿನಕ್ಕೆ ಐದಾರು ಎಸಳು ಪುದೀನಾ ಸೊಪ್ಪು ತಿಂದರೆ ಏನೇನೆಲ್ಲ ಆಗುತ್ತೆ ನೋಡಿ!

|

Updated on: Oct 14, 2023 | 4:54 PM

ಪುದೀನಾವು ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಪುದೀನಾ ಹೊಟ್ಟೆಯಿಂದ ತುಂಬಿದ ಗ್ಯಾಸ್​ ತೆಗೆದುಹಾಕುತ್ತದೆ. ಪುದೀನಾವನ್ನು ಸ್ನಾಯು ಸೆಳೆತವನ್ನು ನಿವಾರಿಸಲು ಬಳಸಲಾಗುತ್ತದೆ. ಪುದೀನಾ ಸೇವಿಸುವುದರಿಂದ ಅಸ್ತಮಾದ ಲಕ್ಷಣಗಳು ಕಡಿಮೆಯಾಗುತ್ತವೆ. ಇದು ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

1 / 15
ಪುದೀನಾ ಸೊಪ್ಪು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಸ್ಯವಾಗಿದೆ. ಇದನ್ನು ವೈಜ್ಞಾನಿಕವಾಗಿ ಮೆಂಥಾ ಸ್ಪಿಕಾಟಾ ಎಂದು ಕರೆಯಲಾಗುತ್ತದೆ.

2 / 15
ಪುದೀನಾವನ್ನು ಇಂಗ್ಲಿಷ್‌ನಲ್ಲಿ ಸ್ಪಿಯರ್‌ಮಿಂಟ್ ಎಂದು ಕರೆಯಲಾಗುತ್ತದೆ. ಇದನ್ನು ಭಾರತೀಯ ಮತ್ತು ಇಟಾಲಿಯನ್ ಅಡುಗೆಗಳಲ್ಲಿ ಹೆಚ್ಚು ಬಳಸಲಾಗುತ್ತದೆ.

3 / 15
ಪುದೀನಾ ಸೊಪ್ಪಿನ ಪರಿಮಳದಿಂದಾಗಿ ಅಡುಗೆಗೆ ಹೊಸ ರುಚಿ ಬರುತ್ತದೆ. ಪಲಾವ್, ಬಿರಿಯಾನಿ, ಚಟ್ನಿ, ಸ್ಮೂಥಿ, ಜ್ಯೂಸ್ ಹೀಗೆ ಹಲವು ರೀತಿಯ ಅಡುಗೆಯಲ್ಲಿ ಪುದೀನಾವನ್ನು ಬಳಸಲಾಗುತ್ತದೆ.

4 / 15
ಪುದಿನಾದ ಒಣಗಿದ ಸಸ್ಯ ಮತ್ತು ಸಾರಭೂತ ತೈಲಗಳನ್ನು ಆಹಾರ, ಸೌಂದರ್ಯವರ್ಧಕ, ಮಿಠಾಯಿ, ಚೂಯಿಂಗ್ ಗಮ್, ಟೂತ್‌ಪೇಸ್ಟ್ ಮತ್ತು ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

5 / 15
ಪುದೀನಾವು ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಪುದೀನಾ ಹೊಟ್ಟೆಯಿಂದ ತುಂಬಿದ ಗ್ಯಾಸ್​ ತೆಗೆದುಹಾಕುತ್ತದೆ.

6 / 15
ಪುದೀನಾವನ್ನು ಸ್ನಾಯು ಸೆಳೆತವನ್ನು ನಿವಾರಿಸಲು ಬಳಸಲಾಗುತ್ತದೆ. ಇದು ಮೂತ್ರವರ್ಧಕ ಚಟುವಟಿಕೆಯನ್ನು ಹೊಂದಿದೆ. ಅಂದರೆ, ಪುದೀನಾವನ್ನು ತಿಂದರೆ ಮೂತ್ರ ವಿಸರ್ಜನೆ ಹೆಚ್ಚಾಗಿ, ಕಿಡ್ನಿ ಕ್ಲೀನ್ ಆಗುತ್ತದೆ.

7 / 15
ಪುದೀನಾ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. ಇದು ಆಂಟಿಫಂಗಲ್ ಆಗಿದ್ದು, ಅತಿಸಾರವನ್ನು ಕೂಡ ಕಡಿಮೆ ಮಾಡುತ್ತದೆ.

8 / 15
ಪುದೀನಾ ಸೇವಿಸುವುದರಿಂದ ಅಸ್ತಮಾದ ಲಕ್ಷಣಗಳು ಕಡಿಮೆಯಾಗುತ್ತವೆ. ಇದು ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

9 / 15
ಶೀತ ಬಂದಾಗ ಪುದೀನಾವನ್ನು ಸೇವಿಸಿದರೆ ಬೇಗ ಗುಣವಾಗುತ್ತದೆ. ಅಲ್ಲದೆ, ನಿಮ್ಮ ತೂಕ ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ.

10 / 15
ನಿಮ್ಮ ಜೀರ್ಣಕ್ರಿಯೆಯನ್ನು ಪುದೀನಾ ಸರಾಗಗೊಳಿಸುತ್ತದೆ. ಪುದಿನಾ ಕರುಳಿನಿಂದ ವಿಷವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

11 / 15
ಪುದೀನಾವನ್ನು ಸುಲಭವಾಗಿ ಮನೆಯ ಹಿತ್ತಿಲಲ್ಲೋ, ಬಾಲ್ಕನಿಯಲ್ಲೋ ಬೆಳೆಸಬಹುದು. ಇದು ಎಲ್ಲಿ ಬೇಕಾದರೂ ಸೊಂಪಾಗಿ ಬೆಳೆಯುತ್ತದೆ.

12 / 15
ಅಡುಗೆಗೆ ಮಾತ್ರವಲ್ಲದೆ ನಿಮ್ಮ ಲೆಮನ್ ಟೀಗೆ ಒಂದೆರಡು ಎಸಳು ಪುದೀನಾವನ್ನು ಹಾಕಿಕೊಂಡರೆ ಅದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ, ಆರೋಗ್ಯಕ್ಕೂ ಒಳ್ಳೆಯದು. ಮಜ್ಜಿಗೆಗೂ ಪುದೀನಾ ಸೊಪ್ಪು ಹಾಕಿಕೊಳ್ಳಬಹುದು.

13 / 15
ಪ್ರಯೋಗಾಲಯದ ಅಧ್ಯಯನಗಳಲ್ಲಿ, ಪುದೀನಾ ಎಲೆಗಳ ಸಾರವು ವಿವಿಧ ಕ್ಯಾನ್ಸರ್ ಕೋಶಗಳ ವಿರುದ್ಧ ಬಲವಾದ ಕ್ಯಾನ್ಸರ್ ವಿರೋಧಿ ಚಟುವಟಿಕೆಯನ್ನು ತೋರಿಸಿದೆ. ಪುದೀನಾ ಎಲೆಗಳಿಂದ ಸಾರಗಳು ಸ್ತನ ಮತ್ತು ಬಾಯಿಯ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸಬಹುದು ಎನ್ನಲಾಗಿದೆ. ಆದರೆ, ಈ ಬಗ್ಗೆ ಇನ್ನಷ್ಟು ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ.

14 / 15
ಪುದೀನಾದ ಜ್ಯೂಸ್ ಮಾಡಿಕೊಂಡು ಕುಡಿದರೂ ಒಳ್ಳೆಯದು. ಪುದಿನಾ ಎಲೆಯ ಸಾರವು ರಕ್ತದಲ್ಲಿನ ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

15 / 15
ಹೀಗಾಗಿ, ದಿನವೂ ಐದಾರು ಎಸಳು ಪುದೀನಾವನ್ನು ಸೇವಿಸಿದರೆ ಅದರಿಂದ ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.