Dasara Doll Exhibition: 20ಕ್ಕೂ ಹೆಚ್ಚು ದೇಶಗಳ ಕಲಾಕೃತಿಗೆ ನೋಡುಗರು ಫಿದಾ!
Dasara: ದಾವಣಗೆರೆಯ ಎಸ್.ಎಸ್. ಬಡಾವಣೆ ನಿವಾಸಿಗಳಾದ ಮುರುಗೇಂದ್ರಪ್ಪ ಹಾಗೂ ಸುಮಂಗಲಾ ಅವರ ಮನೆಯಲ್ಲಿ ದಸರಾ ಪ್ರಯುಕ್ತ ಏರ್ಪಡಿಸಲಾದ ಬೊಂಬೆ ಪ್ರದರ್ಶನ ಕಂಡು ನೋಡುಗರು ಫಿದಾ ಆಗಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಆಫ್ರಿಕಾ ಸೇರಿ 20ಕ್ಕೂ ಹೆಚ್ಚು ದೇಶಗಳ ಬೊಂಬೆಗಳು ಪ್ರದರ್ಶನದಲ್ಲಿ ಕಣ್ಮನ ಸೆಳೆಯುತ್ತಿವೆ.
Updated on: Sep 29, 2025 | 2:33 PM

ಇಂಜಿನಿಯರ್ ಆಗಿದ್ದ ಮುರುಗೇಂದ್ರಪ್ಪ ನೈಜೀರಿಯಾ, ಕೀನ್ಯಾ, ಉಗಾಂಡಾ, ಕಿಂಬರ್ಲಿ, ಘಾನಾ, ಕ್ಯೂಬಾ ಹೀಗೆ ಹತ್ತಾರು ಆಫ್ರಿಕನ್ ದೇಶಗಳನ್ನು ಸುತ್ತಿದ್ದಾರೆ. ಪ್ರತೀ ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಸ್ಥಳೀಯತೆ ಪ್ರತಿನಿಧಿಸುವ ಕಲಾಕೃತಿಗಳನ್ನು ಸಂಗ್ರಹಿಸಿ ತಂದು ತಮ್ಮ ಮನೆಯನ್ನೇ ಮ್ಯೂಸಿಯಂ ಮಾಡಿದ್ದಾರೆ.

ಎರಡು ದಶಕಗಳ ಕಾಲ ನೈಜೀರಿಯಾದಲ್ಲಿ ನೆಲೆಸಿದ್ದ ದಂಪತಿ ಹಲವು ದೇಶಗಳ ಪ್ರವಾಸ ಮಾಡಿದ್ದು, 20ಕ್ಕೂ ಹೆಚ್ಚು ವಿದೇಶಿ ಕಲಾಕೃತಿಗಳ ಸಂಗ್ರಹ ಇವರ ಬಳಿಯಿವೆ. ಆಫ್ರಿಕಾದ ಸಂಸ್ಕೃತಿ ಹೇಳುವ ಮರದ ಗೊಂಬೆಗಳು ಇವುಗಳಲ್ಲಿ ವಿಶೇಷ.

ಒಂದೊಂದು ಕಲಾಕೃತಿಯೂ ಆಫ್ರಿಕಾ ಜನರ ಸೃಜನಶೀಲತೆ, ಕರಕುಶಲ ಕಲೆ ಬಗ್ಗೆ ಸಾರಿ ಹೇಳುತ್ತಿವೆ. ಜೀವನೋಪಾಯಕ್ಕಾಗಿ ಅಲ್ಲಿನ ಜನ ಇವುಗಳನ್ನ ತಯಾರಿಸಿ ಕಡಿಮೆ ವೆಚ್ಚಕ್ಕೆ ಮಾರಾಟ ಮಾಡುತ್ತಾರೆ. ಅವುಗಳನ್ನ ದಸರಾ ಸಂದರ್ಭ ಇಲ್ಲಿ ಪ್ರದರ್ಶಿಸಿದರೆ ಸ್ಥಳೀಯರಿಗೆ ಅಲ್ಲಿನ ಸಂಸ್ಕೃತಿ ಪರಿಚಯವಾಗುತ್ತದೆ ಎಂಬುದು ಮುರುಗೇಂದ್ರಪ್ಪ ದಂಪತಿ ಅಭಿಪ್ರಾಯ.

ದಸರಾ ಬೊಂಬೆ ಪ್ರದರ್ಶನದಲ್ಲಿ ಆಫ್ರಿಕನ್ ಕಲಾಕೃತಿಗಳು ಪ್ರದರ್ಶನವಾಗುತ್ತಿರುವುದು ತುಂಬಾ ಅಪರೂಪ. ಹೀಗಾಗಿ ಮುರುಗೇಂದ್ರಪ್ಪ ಹಾಗೂ ಸುಮಂಗಲಾ ಅವರ ಮನೆಯ ಈ ಎಕ್ಸಿಬಿಷನ್ ದಾವಣಗೆರೆಯಲ್ಲಿ ಮನೆ ಮಾತಾಗಿದ್ದು, ದಸರಾ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದೆ.

ವಿದೇಶಿ ಬೊಂಬೆಗಳು ಮಾತ್ರವಲ್ಲದೆ ಕರ್ನಾಟಕದ ಸ್ಥಳೀಯ ಕಲಾಕೃತಿಗಳನ್ನೂ ಪ್ರದರ್ಶನದಲ್ಲಿ ಕಾಣಬಹುದಾಗಿದೆ. ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ ಚನ್ನಪಟ್ಟಣ, ಮೈಸೂರಿನ ವಿವಿಧ ಬೊಂಬೆಗಳೂ ಇಲ್ಲಿವೆ.

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.
Read More



