Cave Temples: ನೋಡಲೇ ಬೇಕಾದ ಕರ್ನಾಟಕದ ಐದು ಅದ್ಭುತ ಗುಹೆ ದೇವಾಲಯಗಳು
TV9 Web | Updated By: ಆಯೇಷಾ ಬಾನು
Updated on:
Feb 17, 2022 | 6:30 AM
ಕರ್ನಾಟಕವು ಅಸಂಖ್ಯಾತ ದೇವಾಲಯಗಳನ್ನು ಒಳಗೊಂಡಿದೆ. ದೇವಾಲಯದ ವಾಸ್ತುಶಿಲ್ಪ ವೀಕ್ಷಣೆಗೆಂದೇ ದೇಶ-ವಿದೇಶಗಳಿಂದ ಅನೇಕ ಪ್ರವಾಸಿಗರು ಕರ್ನಾಟಕಕ್ಕೆ(Karnataka Temples) ಭೇಟಿ ನೀಡುತ್ತಾರೆ. ಅಲ್ಲದೆ ರಾಜ್ಯದ ದೇವಾಲಯಗಳು ಪ್ರವಾಸೋದ್ಯಮಕ್ಕೆ ಪ್ರಮುಖ ಕೊಡುಗೆ ನೀಡಿದೆ. ಸದ್ಯ ನಾವಿಂದು ಕರ್ನಾಟಕದ ಐದು ಅದ್ಭುತ ಗುಹೆ ದೇವಾಲಯಗಳನ್ನು (Cave Temples) ಪಟ್ಟಿ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇವೆ.
1 / 5
ಗವಿಪುರಂ ಗುಹೆ ದೇವಾಲಯ(Gavi Gangadhareshwara Temple): ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾದ ದೇವಾಲಯ. ಇದನ್ನು 16ನೇ ಶತಮಾನದಲ್ಲಿ ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರು ನಿರ್ಮಿಸಿದ್ದಾರೆ ಎನ್ನಲಾಗಿದೆ. ಹಾಘೂ ಈ ದೇವಾಲಯವು ತ್ರೇತಾ ಯುಗಕ್ಕೂ ಹಿಂದಿನದು ಎನ್ನಲಾಗುತ್ತೆ. ಈ ದೇವಾಲಯದಲ್ಲಿ ಗೌತಮ ಮುನಿ ಶಿವನನ್ನು ಪೂಜಿಸಿದ್ದನಂತೆ. ವಿಶೇಷವೆಂದರೆ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ಸೂರ್ಯಾಸ್ತದ ಸೂರ್ಯನ ಕಿರಣಗಳು ಕಿಟಕಿಯನ್ನು ಪ್ರವೇಶಿಸಿ ನಂದಿಯ ಕೊಂಬುಗಳ ನಡುವೆ ಹಾದು ಶಿವಲಿಂಗದ ಮೇಲೆ ಬೀಳುತ್ತದೆ.
2 / 5
ಹುಳಿಮಾವು ಶಿವ ಗುಹೆ ದೇವಾಲಯ(Hulimavu Shiva Cave Temple): ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿರುವ ಹುಳಿಮಾವು ಶಿವ ಗುಹೆ ದೇವಾಲಯವು 16ನೇ ಶತಮಾನದಲ್ಲಿ ನಿರ್ಮಿಸಲಾದ ದೇವಾಲಯ ಎನ್ನಲಾಗಿದೆ. ಈ ಶಿವ ಗುಹೆ ದೇವಾಲಯವು ಏಕ ಬಂಡೆ ಗುಹೆಯಲ್ಲಿದೆ. ಈ ದೇವಸ್ಥಾನವು ಮೂರು ದೇವತೆಗಳಿಗೆ ಸಮರ್ಪಿಸಲಾಗಿದೆ. ಈ ಗುಹೆಯಲ್ಲಿ ಸಂತ ಶ್ರೀ ರಾಮಾನಂದ ಸ್ವಾಮೀಜಿಗಳು ಧ್ಯಾನ ಮಾಡುತ್ತಿದ್ದರೆಂದು ನಂಬಲಾಗಿದೆ. ಅಲ್ಲದೆ ಅವರ ಸಮಾಧಿ ಕೂಡ ಅಲ್ಲಿ ಇದೆ.
3 / 5
ಬಾದಾಮಿ ಗುಹೆ ದೇವಾಲಯ(Badami Cave Temple): ಬಾದಾಮಿ ಗುಹಾ ದೇವಾಲಯ ಭಾರತದ ಕರ್ನಾಟಕದ ಉತ್ತರ-ಕೇಂದ್ರ ಭಾಗದಲ್ಲಿರುವ ಬಾದಾಮಿಯ ಪಟ್ಟಣದಲ್ಲಿದೆ. ಈ ಪುರಾತನ ದೇವಾಲಯವು ಹಿಂದೂ, ಬೌದ್ಧ, ಜೈನ ಧರ್ಮಕ್ಕೆ ಮೀಸಲಾಗಿರುವ ದೇವಾಲಯ. ಇಲ್ಲಿಗೆ ಲಕ್ಷಾಂತರ ಮಂದಿ ಭೇಟಿ ಕೊಡ್ತಾರೆ.
4 / 5
ಐಹೊಳೆ ಗುಹೆ ದೇವಾಲಯ(Aihole Cave Temple): ಬಾಗಲಕೋಟೆಯಲ್ಲಿರುವ ಐಹೊಳೆಯಲ್ಲಿ ಈ ಗುಹೆ ದೇವಾಲಯವಿದೆ. ಇಲ್ಲಿ ಕಂಡುಬರುವ ಹೆಚ್ಚಿನ ಸ್ಮಾರಕಗಳು ಮತ್ತು ಶಿಲ್ಪಗಳು 12 ನೇ ಶತಮಾನದಷ್ಟು ಹಳೆಯವು. ಮಲಪ್ರಭ ಕಣಿವೆಯಲ್ಲಿ ಹಲವಾರು ಗುಹೆ ದೇವಾಲಯಗಳಿವೆ. ಇಲ್ಲಿನ ಅನೇಕ ದೇವಾಲಯಗಳನ್ನು ಅವುಗಳ ಮೂಲ ರೂಪದಲ್ಲಿ ಕಾಣಲಾಗದಿದ್ದರೂ, ಇದು ಇತಿಹಾಸ ಪ್ರಿಯರಿಗೆ ಇನ್ನೂ ಪ್ರಮುಖ ಆಕರ್ಷಣೆಯಾಗಿದೆ.
5 / 5
ನೆಲ್ಲಿತೀರ್ಥ ಗುಹೆ ದೇವಾಲಯ(Nellitheertha Cave Temple): 15 ನೇ ಶತಮಾನಕ್ಕೆ ಸೇರಿದ ನೆಲ್ಲಿತೀರ್ಥ ಪ್ರದೇಶವು ತನ್ನ ಮಹತ್ವ ಮತ್ತು ಸೌಂದರ್ಯದಿಂದಾಗಿ ಶಿವ ಭಕ್ತರಿಗೆ ಹೆಚ್ಚು ಇಷ್ಟವಾಗುತ್ತದೆ. ಗುಹೆಯ ಹೊರಗೆ ಶಿವನಿಗೆ ಪ್ರತಿಮೆಯ ರೂಪದಲ್ಲಿ ಅರ್ಪಿತವಾದ ದೇವಾಲಯವಿದೆ. ಇಲ್ಲಿ ಮೊಣಕಾಲುಗಳ ಮೇಲೆ ಗುಹೆಯೊಳಗೆ ಪ್ರವೇಶಿಸಬೇಕು.