ಕಂಗನಾ ರಣಾವತ್ ನಡೆಸಿಕೊಡುತ್ತಿರುವ ‘ಲಾಕಪ್’ ಶೋನಲ್ಲಿ ಪೂನಂ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ. ಎಲ್ಲಾ ಸ್ಪರ್ಧಿಗಳನ್ನು ಜೈಲಿನ ಮಾದರಿಯ ಸೆಟ್ನಲ್ಲಿ ಇರಿಸಲಾಗಿದೆ. ಜೀವನದಲ್ಲಿ ತಾವು ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡು ಪೂನಂ ಭಾವುಕರಾಗಿದ್ದಾರೆ.
ನಟಿ ಪೂನಂ ಪಾಂಡೆ ಅವರು ಸ್ಯಾಮ್ ಬಾಂಬೆ ಅವರನ್ನು ಮದುವೆ ಆಗಿದ್ದರು. ಇಬ್ಬರದ್ದೂ ಪ್ರೇಮ ವಿವಾಹ. ಆದರೆ, ಈ ಸಂಬಂಧ ಹೆಚ್ಚು ವರ್ಷ ಬಾಳಲಿಲ್ಲ. ನಾಲ್ಕು ವರ್ಷಗಳ ಕಾಲ ಸ್ಯಾಮ್ನಿಂದ ಚಿತ್ರ ಹಿಂಸೆ ಅನುಭವಿಸಿರುವುದಾಗಿ ಪೂನಂ ಪಾಂಡೆ ಹೇಳಿಕೊಂಡಿದ್ದಾರೆ. ಸಾಯುವ ನಿರ್ಧಾರಕ್ಕೂ ಅವರು ಬಂದಿದ್ದರು.
ಕಂಗನಾ ರಣಾವತ್ ನಡೆಸಿಕೊಡುತ್ತಿರುವ ‘ಲಾಕಪ್’ ಶೋನಲ್ಲಿ ಪೂನಂ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ. ಎಲ್ಲಾ ಸ್ಪರ್ಧಿಗಳನ್ನು ಜೈಲಿನ ಮಾದರಿಯ ಸೆಟ್ನಲ್ಲಿ ಇರಿಸಲಾಗಿದೆ. ಜೀವನದಲ್ಲಿ ತಾವು ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡು ಪೂನಂ ಭಾವುಕರಾಗಿದ್ದಾರೆ.
‘ಈ ಜೈಲು, ಊಟ, ನಿದ್ದೆ, ಇದು ನನಗೆ ಐಷಾರಾಮಿ ಎನಿಸುತ್ತಿದೆ. ನಾನು ನಾಲ್ಕು ವರ್ಷಗಳ ಕಾಲ ರಿಲೇಷನ್ಶಿಪ್ನಲ್ಲಿದ್ದೆ. ಆ ನಾಲ್ಕು ವರ್ಷ ನಾನು ನಿದ್ದೆ ಮಾಡಲಿಲ್ಲ. ಸರಿಯಾಗಿ ಊಟ ಮಾಡಲಿಲ್ಲ. ನಾನು ಮಲಗುವ ಕೋಣೆಗೆ ಸ್ಯಾಮ್ ಬೀಗ ಹಾಕುತ್ತಿದ್ದ. ನಾನು ಸಾಯುವ ನಿರ್ಧಾರಕ್ಕೂ ಬಂದಿದ್ದೆ’ ಎಂದಿದ್ದಾರೆ ಪೂನಂ.
‘ಅನೇಕ ಬಾರಿ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ. ನಾಯಿಗೆ ಹೊಡೆದಂತೆ ನನಗೆ ಆತ (ಸ್ಯಾಮ್ ಬಾಂಬೆ) ಹೊಡೆಯುತ್ತಿದ್ದ. ನಾನು ತುಂಬಾನೇ ವೀಕ್ ಎನ್ನುವ ಭಾವನೆ ನನ್ನನ್ನು ಕಾಡುತ್ತಿತ್ತು’ ಎಂದು ಬೇಸರ ಹೊರಹಾಕಿದ್ದಾರೆ ಪೂನಂ.
‘ಈ ರೀತಿ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆ ಎದ್ದು ನಿಲ್ಲಬೇಕು. ತಮಗಾಗಿ ಹೋರಾಟ ಮಾಡಬೇಕು. ನಾನು ಅದರಿಂದ ಹೊರ ಬಂದು ಈಗ ನಿಮ್ಮ ಎದುರು ನಿಂತಿದ್ದೇನೆ ಅನ್ನೋದು ಖುಷಿಯ ವಿಚಾರ’ ಎಂದಿದ್ದಾರೆ ಪೂನಂ.