ಮೈಲಾರ್ ಮಲ್ಲಣ್ಣನನ ಅದ್ದೂರಿ ಜಾತ್ರೆ; ಕ್ಷಿಂಟಾಲ್ಗಟ್ಟಲೇ ಭಂಡಾರ ಎರಚಿ ಹರಕೆ ತೀರಿಸೋ ಭಕ್ತರು
ಸುರೇಶ ನಾಯಕ | Updated By: ಕಿರಣ್ ಹನುಮಂತ್ ಮಾದಾರ್
Updated on:
Dec 17, 2023 | 4:56 PM
ದಕ್ಷಿಣದ ಕಾಶಿ ಎಂದು ಹೆಸರು ಪಡೆದಿರುವ ಮೈಲಾರ್ ಮಲ್ಲಣ್ಣನನ ಜಾತ್ರೆಯು, ಒಂದು ತಿಂಗಳ ಕಾಲ ಅದ್ಧೂರಿಯಾಗಿ ನಡೆಯುತ್ತದೆ. ಈ ಜಾತ್ರೆಯಲ್ಲಿ ಪ್ರತಿದಿನ ಹತ್ತಾರು ಕ್ಷಿಂಟಾಲ್ ಬಂಡಾರ ಎರಚಿ ಭಕ್ತರು ಹರಕೆ ತೀರಿಸುತ್ತಾರೆ. ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬರುತ್ತಿದ್ದು, ಎಲ್ಲಿ ನೋಡಿದರಲ್ಲಿ ಜನರೇ ಕಾಣಿಸುತ್ತಿದ್ದಾರೆ
1 / 8
ಇಂದಿನಿಂದ ಒಂದು ತಿಂಗಳ ಕಾಲ ಐತಿಹಾಸಿಕ ಮೈಲಾರ ಮಲ್ಲಣ್ಣ ದೇವರ ಜಾತ್ರೆ ನಡೆಯುತ್ತದೆ. ರಾಜ್ಯ ಸೇರಿದಂತೆ ಬೇರೆ ಬೇರೆ ರಾಜ್ಯದ ಸಾವಿರಾರು ಭಕ್ತರು ಪ್ರತಿದಿನ ಬರುತ್ತಾರೆ. ಪ್ರತಿದಿನ ಟನ್ ಗಟ್ಟಲೇ ಭಂಡಾರವನ್ನು ಹರಕೆ ರೂಪದಲ್ಲಿ ದೇವರಿಗೆ ಹಾರಿಸುತ್ತಾರೆ.
2 / 8
ಐತಿಹಾಸಿಕ ಹಿನ್ನೆಲೆಯುಳ್ಳ ಕಲ್ಯಾಣ ಕರ್ನಾಟಕದ ಪ್ರಸಿದ್ಧ ದೇವಸ್ಥಾನ ಮೈಲಾರ ಮಲ್ಲಣ್ಣ ದೇವಸ್ಥಾನವಿರುವುದು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಪೂರ ಗ್ರಾಮದಲ್ಲಿರುವ ಈ ಕ್ಷೇತ್ರದಲ್ಲಿ. ಒಂದು ತಿಂಗಳುಗಳ ಕಾಲ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ.
3 / 8
ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಮಹರಾಷ್ಟ್ರ, ತೆಲಂಗಾಣ, ಆಂದ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು ದೇವಸ್ಥಾನದ ಆವರಣದಲ್ಲಿಯೇ ರಾತ್ರಿಯಿಡಿ ಕಳೆದ ಇಲ್ಲಿಯೇ ಅಡುಗೆ ಆಡಿಕೊಂಡು ದೇವರ ದರ್ಶನ ಮಾಡುತ್ತಾರೆ.
4 / 8
ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಕೂಡಾ ದೇವರಿಗೆ ಹರಕೆ ರೂಪದಲ್ಲಿ ತೆಂಗಿನಕಾಯಿಯ ಹೋಳು ಮತ್ತು ಭಂಡಾರವನ್ನು ಮಿಶ್ರಣ ಮಾಡಿ ಹಾರಿಸುತ್ತಾರೆ. ಇದಕ್ಕೆ ಚೋಪಡಿ ಎನ್ನುತ್ತಾರೆ. ದೇವಸ್ಥಾನದ ತುಂಬ ಅರಿಶಿಣ ಚೆಲ್ಲಿರುವ ದೃಶ್ಯ ಸಾಮಾನ್ಯವಾಗಿದ್ದು, ಪ್ರತಿಯೊಬ್ಬರು ಭಂಡಾರ ಹಾರಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.
5 / 8
ಈ ಭಾಗದಲ್ಲಿ ಒಂದು ತಿಂಗಳ ಕಾಲ ನಡೆಯುವ ಏಕೈಕ ಜಾತ್ರೆಯಾಗಿರುವ ಕಾರಣ, ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಛಟ್ಟಿ ಅಮಾವಾಸ್ಯೆಯಿಂದ ಆರಂಭವಾಗುವ ಈ ಜಾತ್ರೆ, ಏಳ್ಳು ಅಮಾವಾಸ್ಯೆಯವರೆಗೂ ನಿರಂತರ ಒಂದು ತಿಂಗಳುಗಳ ಕಾಲ ಜಾತ್ರೆ ನಡೆಯುತ್ತೆ. ಒಂದು ತಿಂಗಳ ಅವಧಿಯಲ್ಲಿ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಮಲ್ಲಣ್ಣ ದೇವರ ದರ್ಶನ ಪಡೆಯುತ್ತಾರೆ.
6 / 8
ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ರಾಕ್ಷಸರನ್ನು ಸಂಹಾರ ಮಾಡಲು ಮಲ್ಲಣ್ಣನ ರೂಪದಲ್ಲಿ ಶಿವ 11ನೇ ರೂಪ ತಾಳಿ, ಮೈಲಾರದಲ್ಲಿ ನೆಲೆಸಿದ ಎನ್ನುವ ಪ್ರತೀತಿ ಇದೆ. ಜನರಿಗೆ ಎಲ್ಲಿಲ್ಲದ ತೊಂದರೆ ಕೊಡುತ್ತಿದ್ದ ಮಣಿಕಂಠ ಹಾಗೂ ಮಲ್ಲ ಎನ್ನುವ ಅಸುರರನ್ನು ಸಂಹರಿಸಲು ಮಾರ್ಥಂಡ ಭೈರವನ ರೂಪ ತಳೆದ ಶಿವ (ಮಲ್ಲಣ್ಣ) ನಂತರ ಇಲ್ಲಿ ನೆಲೆಸಿದ ಎನ್ನುವ ಉಲ್ಲೇಖ ಪುರಾಣಗಳಲ್ಲಿ ಇದೆ.
7 / 8
ದ್ವಾಪರ ಯುಗದಲ್ಲಿ ಈ ಘಟನೆ ನಡೆದಿದೆ ಎಂದು ಮರಾಠಿಯ ಮಲ್ಹಾರಿ ಮಹಾತ್ಮೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ತಿರುಪತಿಯ ತಿಮ್ಮಪ್ಪನಿಗೆ ಮಲ್ಲಣ್ಣ ದೇವರು ಸಾಲ ನೀಡಿದ್ದರು. ಏಳು ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದ ತಿಮ್ಮಪ್ಪ ಅದನ್ನು ಮರಳಿ ಪಾವತಿಸಲೇ ಇಲ್ಲ. ಹೀಗಾಗಿ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಏಳು ಕೋಟಿ- ಏಳಕೋಟ್ಗೆ ಎನ್ನುತ್ತಾರೆ ಎನ್ನುವ ಪ್ರತೀತಿ ಇದೆ.
8 / 8
ಇನ್ನು ಇಲ್ಲಿಗೆ ಬರುವ ಭಕ್ತರು, ಒಂದು ದಿನ ಮುಂಚಿತವಾಗಿ ಬಂದು ಇಲ್ಲಿಯೇ ಅಡುಗೆ ಮಾಡಿ ದೇವರಿಗೆ ನೈವೈದ್ಯವನ್ನ ಮಾಡಿ, ತಾವು ಕೂಡ ಊಟ ಮಾಡಿ ದೇವರ ದರ್ಶನ ಪಡೆದು ಹೋಗುತ್ತಾರೆ. ಮೈಲಾರ ಮಲ್ಲಣ್ಣ ಬೇಡಿದ ವರವನ್ನ ಕೊಡುತ್ತಾರೆಂದು ಇಲ್ಲಿನ ಭಕ್ತರು ಹೇಳುತ್ತಿದ್ದಾರೆ.