
ಮಕ್ಕಳ ನೆಚ್ಚಿನ ಮೇಷ್ಟ್ರು, ಜನರ ಮೆಚ್ಚಿನ ರಾಷ್ಟ್ರಪತಿ, ಕ್ಷಿಪಣಿ ಜನಕ ಡಾ. ಎಪಿಜೆ ಅಬ್ದುಲ್ ಕಲಾಂ ಉತ್ತಮ ಸಮಾಜದ ಕನಸು ಕಂಡ ವ್ಯಕ್ತಿ. ಕಲಾವಿದ ರಾಹುಲ್, ದೇವರಾಜ ಮೊಹಲ್ಲಾದ ಕೊತ್ವಾಲ ರಾಮಯ್ಯ ರಸ್ತೆಯ ಗೋಡೆಯ ಮೇಲೆ ಚಿತ್ರ ಬಿಡಿಸಿ ಸಮಾನತೆಯ ಸಂದೇಶ ಸಾರಿದ್ದಾರೆ.

ಕಲಾವಿದ ರಾಹುಲ್, ಡಾ ಎಪಿಜೆ ಅಬ್ದುಲ್ ಕಲಾಂ ಅವರು ಕ್ಯಾಂಡಲ್ ಮೂಲಕ ಜ್ಯೋತಿ ಬೆಳಗುವ ಚಿತ್ರ ಬಿಡಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ದೇವರಾಜ ಮೊಹಲ್ಲಾದ ಕೊತ್ವಾಲ ರಾಮಯ್ಯ ರಸ್ತೆಯ ಗೋಡೆಯ ಮೇಲೆ ಚಿತ್ರ ಬಿಡಿಸುತ್ತಿರುವ ಕಲಾವಿದ ರಾಹುಲ್

ಶಾಲೆ ಜ್ಞಾನ ದೇಗುಲ ಜ್ಞಾನ ಸಂಪಾದನೆಗಾಗಿ ಇರುವುದು. ಇದು ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಶಾಂತಿ ನೆಲೆಸಬೇಕು. ಶಾಲೆಗಳಲ್ಲಿ ಪ್ರತಿಭಟನೆ ಬೇಡ ಎಂಬ ಸಂದೇಶ ಸಾರಿದ್ದಾರೆ. ಸಮವಸ್ತ್ರ ಧರಿಸಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳ ಚಿತ್ರ ಬಿಡಿಸಿ ಶಾಲೆಗಳಲ್ಲಿ ಶಿಕ್ಷಣಕ್ಕೆ ಮಾತ್ರ ಆದ್ಯತೆ ಇರಬೇಕೆಂಬ ಜಾಗೃತಿ ಮೂಡಿಸಿದ್ದಾರೆ.

ಒಮ್ಮೆ ಕಾರ್ಯಕ್ರಮದಲ್ಲಿ ಅಬ್ದುಲ್ ಕಲಾಂರಿಗೆ ದೀಪ ಬೆಳಗಲು ಹೇಳಿದ್ರಂತೆ. ದೀಪ ಹಚ್ಚಿದ ಬಳಿಕ ನಗುತ್ತ ಕಲಾಂ ಹೇಳಿದ್ರು, ನಾನು ಮುಸ್ಲಿಂ, ನಾನು ಕ್ರಿಸ್ಟಿಯನ್ರ ಕ್ಯಾಂಡಲ್ ಮೂಲಕ ಹಿಂದೂರ ಜ್ಯೋತಿ ಬೆಳಗುತ್ತಿದ್ದೇನೆ. ಇದೇ ರೀತಿಯ ಏಕತೆ ನಮ್ಮ ದೇಶದಲ್ಲಿರಬೇಕು ಎಂದು. ಇದೇ ಸಂದೇಶವನ್ನು ಸಾರುತ್ತಿದೆ ಈ ಚಿತ್ರ
Published On - 3:19 pm, Fri, 11 February 22