ಮೈಸೂರಿನಲ್ಲಿ ರೇಸ್ ಕಾರುಗಳ ಹವಾ: ವೀಕೆಂಡ್​ನಲ್ಲಿ ರೇಸ್ ಕಣ್ತುಂಬಿಕೊಂಡ ಜನ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 04, 2023 | 9:41 PM

ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಇಂದು ಫಾಸ್ಟ್ ಕಾರ್ ರೇಸ್ ಆಯೋಜಿಸಲಾಗಿತ್ತು. 2017 ರಿಂದ ಮೈಸೂರು ಗ್ರಾವೆಲ್ ಫೆಸ್ಟ್ ಕಾರು ರೇಸ್ ಆಯೋಜನೆ ಮಾಡ್ತಿದ್ದು,‌ ಕೋವಿಡ್ ಬಳಿಕ ಈ ವರ್ಷ ಮತ್ತೆ ಕಾರು ರೇಸ್ ಆಯೋಜಿಸಲಾಗಿದೆ. ಎರಡು ಟ್ರಾಕ್​ನಲ್ಲಿ ಕಾರು ರೇಸ್ ನಲ್ಲಿ ಭಾಗವಹಿಸಿದ್ದ ಚಾಲಕರು ಮೈದಾನದಲ್ಲಿ ತಮ್ಮ ಚಮತ್ಕಾರ ತೋರಿದ್ದಾರೆ.

1 / 5
ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಇಂದು ಫಾಸ್ಟ್ ಕಾರ್ ರೇಸ್ ಆಯೋಜಿಸಲಾಗಿತ್ತು. 2017 ರಿಂದ ಮೈಸೂರು ಗ್ರಾವೆಲ್ ಫೆಸ್ಟ್ ಕಾರು ರೇಸ್ ಆಯೋಜನೆ ಮಾಡುತ್ತಿದ್ದು, ರೇಸ್​ನಲ್ಲಿ ಭಾಗವಹಿಸಿದ್ದ ಕಾರು ಚಾಲಕರು ಮೈದಾನದಲ್ಲಿ ತಮ್ಮ ಚಮತ್ಕಾರ ತೋರಿಸಿದ್ದಾರೆ.

2 / 5
ವೀಕೆಂಡ್​ನಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರೇಸ್ ಕಾರುಗಳ ಹವಾ ಜೋರಾಗಿತ್ತು. ಧೂಳೆಬ್ಬಿಸುತ್ತ ಶರವೇಗದಲ್ಲಿ ನುಗ್ಗುತ್ತಿದ್ದ ಕಾರುಗಳು ನೋಡುಗರ ಎದೆ ನಡುಗಿಸಿದ್ದವು. ಟ್ರ್ಯಾಕ್​ನಲ್ಲಿ ಬುಲೆಟ್​ನಂತೆ  ಸಾಗುತ್ತಿದ್ದ ಕಾರುಗಳು ರೇಸ್ ಪ್ರೀಯರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದವು.

3 / 5
ಕಾರು ರೇಸ್​ನಲ್ಲಿ 160 ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 84 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
1100,1400,1650 ಸಿಸಿ ಸೇರಿದಂತೆ ಸುಮಾರು 8 ವಿಭಾಗಗಳು, ಮೈಸೂರು ನಾವಿಸ್ ಕ್ಲಾಸ್, ಇಂಡಿಯನ್ ನ್ಯಾಷನಲ್ ಕ್ಲಾಸ್ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ಕಾರು ರೇಸ್​ನಲ್ಲಿ 160 ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 84 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. 1100,1400,1650 ಸಿಸಿ ಸೇರಿದಂತೆ ಸುಮಾರು 8 ವಿಭಾಗಗಳು, ಮೈಸೂರು ನಾವಿಸ್ ಕ್ಲಾಸ್, ಇಂಡಿಯನ್ ನ್ಯಾಷನಲ್ ಕ್ಲಾಸ್ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

4 / 5
ಸ್ಪರ್ಧೆಯಲ್ಲಿ ಟಾಪ್ ಫಾಸ್ಟ್ 10 ಡ್ರೈವರ್​ಗಳನ್ನು ಆಯ್ಕೆ ಮಾಡಿ ಬಳಿಕ ಸ್ಪರ್ಧೆಯಲ್ಲಿ ಗೆದ್ದ ಒಬ್ಬರಿಗೆ 2 ಲಕ್ಷ ರೂ. ನಗದು ಬಹುಮಾನ ವಿತರಣೆ ಮಾಡಲಾಯಿತು.

5 / 5
ದುಬೈ, ಲಡಾಕ್, ಡೆಲ್ಲಿ, ಮುಂಬೈ, ಪೂನಾ, ಕೊಚ್ಚಿ ಸೇರಿದಂತೆ ವಿವಿಧ ಕಡೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ರೋಚಕ ರೇಸ್ ನೋಡುಗರ ಮೈ ನವಿರೇಳಿಸಿತು. ಸಾಂಸ್ಕೃತಿಕ ನಗರಿ ಜನರು ಕಾರು ರೇಸ್ ಕಣ್ತುಂಬಿಕೊಂಡು ಖುಷಿಪಟ್ಟರು.