Kannada News Photo gallery Mysuru Dasara 2023 mysore all set to welcome dasara gajapade and temporary shed construction starts
Mysore Dasara 2023: ದಸರಾ ಗಜಪಡೆ ಸ್ವಾಗತಕ್ಕೆ ಸಜ್ಜಾಗುತ್ತಿದೆ ಅರಮನೆ ನಗರಿ, ಜಂಬೂಸವಾರಿಗೆ ಮಿಸ್ ಆಗಲಿವೆ ಚೈತ್ರಾ-ವಿಕ್ರಮ ಆನೆ
ರಾಮ್, ಮೈಸೂರು | Updated By: ಆಯೇಷಾ ಬಾನು
Updated on:
Aug 21, 2023 | 1:58 PM
ಸೆಪ್ಟೆಂಬರ್ 1 ರಂದು ಗಜಪಯಣದ ಮೂಲಕ ಅಭಿಮನ್ಯು ನೇತೃತ್ವದ ಗಜಪಡೆ ಮೈಸೂರಿಗೆ ಆಗಮಿಸಲಿದೆ. ಸೆ.4ರಂದು ಮೈಸೂರು ಅರಮನೆ ಆವರಣ ಪ್ರವೇಶಿಸಲಿರುವ ಗಜಪಡೆ ವಾಸ್ತವ್ಯಕ್ಕಾಗಿ ತಾತ್ಕಾಲಿಕ ಶೆಡ್ ಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಮಾವುತರು ಕಾವಾಡಿಗಳ ಕುಟುಂಬಕ್ಕೂ ತಾತ್ಕಾಲಿಕ ಶೆಡ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮೊದಲ ತಂಡದಲ್ಲಿ ಮೈಸೂರಿಗೆ 9 ಆನೆಗಳು ಆಗಮಿಸಲಿವೆ. ಆನೆಗಳ ಜೊತೆಗೆ ಮಾವುತರು, ಕಾವಾಡಿಗಳು ಕೂಡ ಬರಲಿದ್ದಾರೆ.
1 / 7
ದಸರಾ ಗಜಪಡೆ ಸ್ವಾಗತಕ್ಕೆ ಮೈಸೂರು ಅರಮನೆ ಸಜ್ಜಾಗುತ್ತಿದೆ. ದಸರಾ ಗಜಪಡೆ ಮೈಸೂರು ಆಗಮನಕ್ಕೆ 10 ದಿನ ಮಾತ್ರ ಬಾಕಿ ಇದೆ. (ಸಂಗ್ರಹ ಚಿತ್ರ)
2 / 7
ಸೆಪ್ಟೆಂಬರ್ 1 ರಂದು ಗಜಪಯಣದ ಮೂಲಕ ಅಭಿಮನ್ಯು ನೇತೃತ್ವದ ಗಜಪಡೆ ಮೈಸೂರಿಗೆ ಆಗಮಿಸಲಿದೆ. ಸೆ.4ರಂದು ಮೈಸೂರು ಅರಮನೆ ಆವರಣ ಪ್ರವೇಶಿಸಲಿರುವ ಗಜಪಡೆ ವಾಸ್ತವ್ಯಕ್ಕಾಗಿ ತಾತ್ಕಾಲಿಕ ಶೆಡ್ ಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. (ಸಂಗ್ರಹ ಚಿತ್ರ)
3 / 7
ಮಾವುತರು ಕಾವಾಡಿಗಳ ಕುಟುಂಬಕ್ಕೂ ತಾತ್ಕಾಲಿಕ ಶೆಡ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮೊದಲ ತಂಡದಲ್ಲಿ ಮೈಸೂರಿಗೆ 9 ಆನೆಗಳು ಆಗಮಿಸಲಿವೆ. ಆನೆಗಳ ಜೊತೆಗೆ ಮಾವುತರು, ಕಾವಾಡಿಗಳು ಕೂಡ ಬರಲಿದ್ದಾರೆ.
4 / 7
ಚೈತ್ರಾ ಹಾಗೂ ವಿಕ್ರಮ ಆನೆಗಳು ಈ ಬಾರಿಯ ದಸರಾ ಜಂಬೂಸವಾರಿಗೆ ಮಿಸ್ ಆಗಲಿದ್ದಾರೆ. ಚೈತ್ರಾ ಗರ್ಭಿಣಿ, ವಿಕ್ರಮ ಆನೆಗೆ ಮದ ಹಿನ್ನೆಲೆ ಜಂಬೂಸವಾರಿಗೆ ಮಿಸ್ ಆಗಲಿದ್ದಾರೆ.
5 / 7
ದಸರಾಗೆ ಆಗಮಿಸುವ ಆನೆಗಳಿಗೆ ಪ್ರಗ್ನೆನ್ಸಿ ಪರೀಕ್ಷೆ ನಡೆಸಿದ್ದು ಚೈತ್ರಾ ಆನೆ ಗರ್ಭಿಣಿಯಾಗಿದೆ. ಹೀಗಾಗಿ ಚೈತ್ರಾ ಬಂಡೀಪುರದ ರಾಂಪುರ ಕ್ಯಾಂಪ್‌ನಲ್ಲಿದೆ. ಇನ್ನು ವಿಕ್ರಮ ಆನೆ ಹಾರಂಗಿ ಕ್ಯಾಂಪ್‌ನಲ್ಲಿದೆ.
6 / 7
59 ವರ್ಷದ ವಿಕ್ರಮ ಆನೆ 19 ಬಾರಿ ದಸರೆಯಲ್ಲಿ ಭಾಗಿಯಾಗಿದೆ. ಚೈತ್ರಾ ಆನೆ 10 ಬಾರಿ ದಸರೆಯಲ್ಲಿ ಭಾಗಿಯಾಗಿದೆ.
7 / 7
ಚೈತ್ರಾ ಆನೆ ಇದುವರೆಗೂ 13 ಮರಿಗಳಿಗೆ ಜನ್ಮ ನೀಡಿದೆ. ಕಳೆದ ಬಾರಿ ಗರ್ಭಿಣಿ ಆನೆ ಲಕ್ಷ್ಮೀಯನ್ನು ಗೊತ್ತಿಲ್ಲದೆ ಕರೆ ತರಲಾಗಿತ್ತು. ದಸರಾ ವೇಳೆ ಮೈಸೂರು ಅರಮನೆಯಲ್ಲೇ ಲಕ್ಷ್ಮೀ ಆನೆ ಮರಿಗೆ ಜನ್ಮ ನೀಡಿತ್ತು.