Updated on: Aug 11, 2021 | 3:18 PM
ಶ್ರಾವಣ ಮಾಸವು ಭಾರತೀಯರಿಗೆ ಅತ್ಯಂತ ಪ್ರಮುಖವಾದ ಮಾಸ. ಶುಭ ಕಾರ್ಯಗಳಿಗೆ ಪ್ರಶಸ್ತವಾದ, ಹಬ್ಬ ಹರಿದಿನಗಳು ಹೆಚ್ಚಿರುವ ಈ ಮಾಸವನ್ನು ಬಹಳ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಹಬ್ಬದ ಸಂಭ್ರಮದ ಜತೆಗೆ ಮದರಂಗಿ ಹೆಚ್ಚು ಖುಷಿ ನೀಡುತ್ತದೆ. ಅಲ್ಲದೆ ಮಳೆಗಾಲ. ಮಳೆಗಾಲದಲ್ಲಿ ಸೋಂಕಿನ ತೀವ್ರತೆ ಹೆಚ್ಚಿರುತ್ತದೆ. ಹೀಗಾಗಿ ಕೈಗೆ ಮದರಂಗಿ ಹಚ್ಚುವುದು ಸೂಕ್ತ. ಇದು ಸೋಂಕಿನಿಂದ ರಕ್ಷಣೆ ನೀಡುತ್ತದೆ.
ವಿಭಿನ್ನ ಮತ್ತು ಹೊಸತನವನ್ನು ಇಷ್ಟಪಡುವವರಿಗೆ. ಮಿನುಗು ಮೆಹಂದಿ ಉತ್ತಮವಾಗಿದೆ. ಇದರ ವಿನ್ಯಾಸವು ಜನರ ಗಮನವು ನಿಮ್ಮತ್ತ ಸೆಳೆಯುವಂತೆ ಮಾಡುತ್ತದೆ. ಮೆಹಂದಿಯನ್ನು ಹಾಕಿದ ನಂತರ, ವಿನ್ಯಾಸದ ಮಧ್ಯದಲ್ಲಿ ಮಿನುಗುವಿಕೆಯನ್ನು ಬಳಸಲಾಗುತ್ತದೆ. ಈ ಮೆಹಂದಿ ವಿಭಿನ್ನವಾಗಿ ಕಾಣುತ್ತದೆ.
ಕೆಲವು ಮಹಿಳೆಯರು ಕೈತುಂಬಾ ಮೆಹಂದಿಯನ್ನು ಹಾಕಲು ಇಷ್ಟಪಡುತ್ತಾರೆ. ಇನ್ನು ಕೆಲವರಿಗೆ ಸ್ಪಷ್ಟವಾದ ವಿನ್ಯಾಸ ಬೇಕು. ಹಾಗಾಗಿ ಅವರು ಸಂಪೂರ್ಣ ಕೈಯಲ್ಲಿ ವಿನ್ಯಾಸವನ್ನು ಮಾಡಲು ಇಷ್ಟಪಡುವುದಿಲ್ಲ. ನಿಮಗೆ ಕೈತುಂಬಾ ಮೆಹಂದಿ ಇಷ್ಟವಾಗದಿದ್ದರೆ, ನಾಗರ ಪಂಚಮಿ ಹಬ್ಬಕ್ಕಾಗಿ ಸರಳವಾದ ಮೆಹಂದಿ ವಿನ್ಯಾಸಗಳನ್ನು ಪ್ರಯತ್ನಿಸಬಹುದು. ಈ ಮೆಹಂದಿ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಜತೆಗೆ ಇದು ನೋಡಲು ಬಹಳ ಆಕರ್ಷಕವಾಗಿ ಕಾಣುತ್ತದೆ.
ಹೂವಿನ ಮೆಹಂದಿ ಅತ್ಯಂತ ಕಡಿಮೆ ಸಮಯದಲ್ಲಿ ಹಾಕಿಕೊಳ್ಳಬಹುದು. ಹೂವಿನ ಮೆಹಂದಿ ತುಂಬಾ ಸುಂದರವಾಗಿ ಕಾಣುತ್ತದೆ. ಇದರ ಅತ್ಯುತ್ತಮ ವಿನ್ಯಾಸಕ್ಕಾಗಿ ನೀವು ಅಂತರ್ಜಾಲದ ಸಹಾಯವನ್ನು ತೆಗೆದುಕೊಳ್ಳಬಹುದು. ಇದಲ್ಲದೇ ಈ ಮೆಹಂದಿ ವಿನ್ಯಾಸದ ಹಲವು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಅಂಗೈಯ ಒಂದು ತುದಿಯಿಂದ ಆರಂಭಗೊಂಡು ಇನ್ನೊಂದು ತುದಿಯಲ್ಲಿ ಕೊನೆಗೊಳ್ಳುವ ಮೆಹಂದಿಯನ್ನು ಕರ್ಣೀಯ ಮೆಹಂದಿ ಎಂದು ಕರೆಯಲಾಗುತ್ತದೆ. ಕೆಲಸಕ್ಕೆ ಹೊಗುವವರಿಗೆ ಇದು ಉತ್ತಮ ವಿನ್ಯಾಸವಾಗಿದೆ. ಇದು ಸಂಪೂರ್ಣ ಕೈಯನ್ನು ಸಹ ತುಂಬುವುದಿಲ್ಲ ಮತ್ತು ಮೆಹಂದಿ ಸುಂದರವಾಗಿ ಕಾಣುತ್ತದೆ. ನಾಗರ ಪಂಚಮಿಗೆ ಈ ಮೆಹಂದಿ ಅತ್ಯುತ್ತಮ ಆಯ್ಕೆಯಾಗಿದೆ.
ವಾಸ್ತವವಾಗಿ ಬೇರೆ ದಿನಗಳಲ್ಲಿ ಹಾಕುವ ಮೆಹಂದಿಗಿಂತ ನಾಗರ ಪಂಚಮಿ ದಿನ ಕೈಗೆ ಹಾಕಿಕೊಳ್ಳುವ ಮೆಹಂದಿ ಹೆಚ್ಚು ಆರೋಗ್ಯಕರ ಗುಣವನ್ನು ಹೊಂದಿದೆ. ಮಳೆಗಾಲದಲ್ಲಿ ಕಾಲಿನ ಸೆಳೆತ ಮತ್ತು ಚರ್ಮದ ಕಾಯಿಲೆಗಳು ಹೆಚ್ಚಾಗಿರುತ್ತದೆ. ಮೆಹಂದಿ ಈ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲ್ಲದೆ ಮೆಹಂದಿ ಸೋಂಕನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ಸಂಬಂಧಿಸಿದ ಇನ್ನಿತರ ಕಾಯಿಲೆಗಳನ್ನು ನಿರ್ವಹಣೆ ಮಾಡುತ್ತದೆ.