Nag Panchami 2024 : ನಾಗರ ಪಂಚಮಿಗೆ ಕರ್ನಾಟಕದ ಮನೆ ಮನೆಗಳಲ್ಲಿ ಈ ಸಿಹಿ ತಿನಿಸುಗಳದ್ದೇ ಘಮ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 08, 2024 | 3:35 PM

ಶ್ರಾವಣ ಮಾಸದಂದು ಮೊದಲ ಹಬ್ಬವಾದ ನಾಗರ ಪಂಚಮಿಯು ಬಂದೇ ಬಿಟ್ಟಿದೆ. ಆಗಸ್ಟ್ 9 ರಂದು ನಾಡಿನಾದಾದಂತ್ಯ ಹಬ್ಬವನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ಹಬ್ಬ ಅಂದ್ಮೇಲೆ ಸಿಹಿತಿಂಡಿ ಇರದೇ ಹೋದರೆ ಹೇಗೆ ಹೇಳಿ. ನಾಗರಪಂಚಮಿಯಂದು ದೇವರ ನೈವೇದ್ಯಕ್ಕೆ ಒಂದೊಂದು ಭಾಗದಲ್ಲಿ ಒಂದೊಂದು ಬಗೆಯ ಸಿಹಿ ತಿಂಡಿ ಮಾಡುತ್ತಾರೆ. ಹಾಗಾದ್ರೆ ಕರ್ನಾಟಕದ ಯಾವೆಲ್ಲಾ ಭಾಗಗಳಲ್ಲಿ ಏನೆಲ್ಲಾ ಸಿಹಿ ತಿನಿಸನ್ನು ಮಾಡುತ್ತಾರೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

1 / 5
ಅರಶಿನ ಎಲೆ ಕಡುಬು : ನಾಗ ದೇವರ ನೈವೇದ್ಯಕ್ಕೆ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಅರಶಿನ ಎಲೆ ಕಡುಬಿನ ಘಮವು ಎಲ್ಲರ ಮನೆಯ ತುಂಬಾ ಹರಡುತ್ತದೆ. ಅರಿಶಿನ ಎಲೆಗಳಲ್ಲಿ ಸುತ್ತಿ ತಯಾರಿಸುವ ಈ ಸಿಹಿ ತಿಂಡಿಯಲ್ಲಿ ತೆಂಗಿನಕಾಯಿ ಮತ್ತು ಬೆಲ್ಲದ ಸಿಹಿಯು ಅರಶಿನ ಎಲೆಯ ಘಮದೊಂದಿಗೆ ರುಚಿಯು ಅಷ್ಟೇ ಅದ್ಭುತ. ತುಳುವಿನಲ್ಲಿ ಅರಶಿನ ಎಲೆ ಪತೋಳಿ ಅಥವಾ ಅರಶಿನ ಎಲೆ ಕಡುಬಿಗೆ ಈರಡ್ಯೆ ಎಂದು ಹೇಳುವುದಿದೆ.

2 / 5
ಬಾಳೆಹಣ್ಣಿನ ಸುಟ್ಟೇವು : ನಾಗರ ಪಂಚಮಿಗೆ ಉತ್ತರ ಕನ್ನಡ ಹಾಗೂ ಮಲೆನಾಡಿನ ಭಾಗಗಳಲ್ಲಿ ದೇವರಿಗೆ ನೈವೇದ್ಯಕ್ಕಾಗಿ ಬಾಳೆಹಣ್ಣಿನ ಸುಟ್ಟೇವು ಮಾಡುತ್ತಾರೆ. ಗೋಧಿ ಹಿಟ್ಟು, ಬೆಲ್ಲ, ಏಲಕ್ಕಿ ಹಾಗೂ ಬಾಳೆಹಣ್ಣಿನಿಂದ ತಯಾರಿಸುವ ಈ ಕರಿದ ತಿಂಡಿಯು ಎಲ್ಲರಿಗೂ ಇಷ್ಟವಾಗುತ್ತದೆ. ಬಾಳೆಹಣ್ಣಿನ ಸುಟ್ಟೇವು ಈ ತಿನಿಸನ್ನು ಮುಳುಕ ಎಂದು ಹೇಳುವುದಿದೆದೆ.

3 / 5
 ಶೇಂಗಾ ಉಂಡೆ : ನಾಗರ ಪಂಚಮಿ ಹಬ್ಬಕ್ಕೆ ಉತ್ತರ ಕರ್ನಾಟಕದ ಭಾಗದಲ್ಲಿ ಶೇಂಗಾದ ಉಂಡೆ ತುಂಬಾನೇ ಫೇಮಸ್. ಸಿಹಿ ತಿನಿಸನ್ನು ಮಾಡುವುದು ಎಷ್ಟು ಸುಲಭವೋ ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ. ಬೆಲ್ಲ, ತೆಂಗಿನ ತುರಿ ಹಾಗೂ ಶೇಂಗಾವು ಪರಿಮಳವು ಬಾಯಿಗೆ ಸಿಗುತ್ತಿದ್ದರೆ ಮತ್ತೆ ಮತ್ತೆ ತಿನ್ನಬೇಕೇನಿಸುತ್ತದೆ.

4 / 5
ಅಕ್ಕಿ ತಂಬಿಟ್ಟು : ನಾಗರ ಪಂಚಮಿಯಂದು ದೇವರಿಗೆ ವಿವಿಧ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಅಕ್ಕಿ ತಂಬಿಟ್ಟು ನಾಗರ ಪಂಚಮಿಗೆ ವಿಶೇಷವಾಗಿದೆ. ಈ ರೆಸಿಪಿ ಮಾಡಲು ಮನೆಯಲ್ಲಿ  ಅಕ್ಕಿ, ಹುರಿಗಡಲೆ, ತೆಂಗಿನ ತುರಿ, ಬೆಲ್ಲ  ಹಾಗೂ ಏಲಕ್ಕಿಯಿದ್ದರೆ ಹತ್ತೇ ಹತ್ತು ನಿಮಿಷದಲ್ಲಿ ಈ ಸಿಹಿ ತಿಂಡಿಯೂ ರೆಡಿಯಾಗುತ್ತದೆ.

5 / 5
ಅಳ್ಳಿಟ್ಟು : ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ಹಬ್ಬಕ್ಕೆ ಅಳ್ಳಿಟ್ಟು  ಜನಪ್ರಿಯವಾದ ಸಿಹಿ ತಿನಿಸಾಗಿದ್ದು,  ಇದನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ಭಾಗದಲ್ಲಿ ಅಳ್ಳಿಟ್ಟು ಇಲ್ಲದೇ ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿವು ಪೂರ್ಣವಾಗುವುದೇ ಇಲ್ಲ. ಜೋಳದ ಅರಳು, ಗೋಧಿ ಹಿಟ್ಟು, ಬೆಲ್ಲ, ಅಕ್ಕಿ, ಗಸಗಸೆ, ಏಲಕ್ಕಿ, ಲವಂಗ ಹಾಗೂ ಜಾಯಿಕಾಯಿಯಿಂದ ಮಾಡುವ ಈ ತಿನಿಸು ತಿನ್ನಲು ರುಚಿಕರವಾಗಿರುತ್ತದೆ.