ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿ, ಪಕ್ಷಿಗಳ ಕಲರವ; ಛಾಯಾಗ್ರಾಹಕರೊಬ್ಬರ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ
ರಾಮ್, ಮೈಸೂರು | Updated By: ಆಯೇಷಾ ಬಾನು
Updated on:
Aug 06, 2023 | 11:10 AM
ಮೈಸೂರಿನ ತಪ್ಪಲಿನಲ್ಲಿ ಮತ್ತು ತಮಿಳುನಾಡಿನ ನೀಲಗಿರಿ ಪರ್ವತಗಳ ನಡುವೆ ಇರುವ ನಾಗರಹೊಳೆಯಲ್ಲಿನ ಹುಲಿ, ಜಿಂಕೆ, ಆನೆ, ಕರಡಿ, ಸಾರಂಗ ಸೇರಿದಂತೆ ವಿವಿಧ ಪ್ರಾಣಿ ಪಕ್ಷಿಗಳು ಹಿರಿಯ ಛಾಯಾಗ್ರಾಹಕ ಲಕ್ಷ್ಮೀ ನಾರಾಯಣ್ ಯಾದವ್ ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿವೆ.
1 / 10
ಮೈಸೂರು ಕಾಡಿನಲ್ಲಿ ಪ್ರಾಣಿ ಪಕ್ಷಿಗಳ ಕಲರವ ಪ್ರವಾಸಿಗರನ್ನು ಸಂತೋಷದಲ್ಲಿ ತೇಲಿಸಿದೆ. ಮೈಸೂರಿನ ತಪ್ಪಲಿನಲ್ಲಿ ಮತ್ತು ತಮಿಳುನಾಡಿನ ನೀಲಗಿರಿ ಪರ್ವತಗಳ ನಡುವೆ ಇರುವ ನಾಗರಹೊಳೆಯಲ್ಲಿನ ಪ್ರಾಣಿಗಳ ಫೋಟೋಸ್.
2 / 10
ಹಿರಿಯ ಛಾಯಾಗ್ರಾಹಕ ಲಕ್ಷ್ಮೀ ನಾರಾಯಣ್ ಯಾದವ್ ಅವರು ವಿವಿಧ ಕಾಡು ಪ್ರಾಣಿಗಳ ಚಲನವನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.
3 / 10
ಹುಲಿ, ಜಿಂಕೆ, ಆನೆ, ಕರಡಿ, ಸಾರಂಗ ಸೇರಿದಂತೆ ವಿವಿಧ ಪಕ್ಷಿಗಳ ಫೋಟೋಸ್ ಸೆರೆ ಹಿಡಿದಿದ್ದಾರೆ. ನಾಗರಹೊಳೆ ಅಭಯಾರಣ್ಯದಲ್ಲಿ ಅಪರೂಪದ ಕಾಡು ಪ್ರಾಣಿಗಳ ದೃಶ್ಯ ಸೆರೆಯಾಗಿದೆ.
4 / 10
ಉತ್ತಮ ಮಳೆ ಆದ ಹಿನ್ನೆಲೆ ಕಾಡು ಹಸಿರಿನಿಂದ ಕಂಗೊಳಿಸುತ್ತಿದ್ದು ಕಾಡಿನ ರಸ್ತೆಯಲ್ಲಿ ಹುಲಿ ಆನೆಗಳು ಕಾಣಿಸಿಕೊಂಡಿವೆ. ಇನ್ನು ಬೈಕ್ ಸವಾರನ ಹತ್ತಿರದಲ್ಲಿ ಆನೆಗಳು ಕಾಣಿಸಿಕೊಂಡಿದ್ದು ಮೈ ನಡುಗಿಸುವಂತಿದೆ.
5 / 10
640 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹಲವಾರು ರೀತಿಯ ವನ್ಯಜೀವಿಗಳು ನೆಲೆಸಿವೆ. ಇದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಪ್ರಮುಖ ಹುಲಿ ಮೀಸಲು ಪ್ರದೇಶವಾಗಿದೆ.
6 / 10
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡುವವರಿಗೆ ಒಂದು ಅಪರೂಪದ ಅನುಭವ ಸಿಗುತ್ತೆ. ದಾರಿ ನಡುವೆ, ನೀರಲ್ಲಿ ವಿವಿಧ ಬಗೆಯ ಕಾಡು ಪ್ರಾಣಿಗಳನ್ನು ನೋಡುವುದೇ ವಿಸ್ಮಯ.
7 / 10
ಹಿರಿಯ ಛಾಯಾಗ್ರಾಹಕ ಲಕ್ಷ್ಮೀ ನಾರಾಯಣ್ ಯಾದವ್ ಅವರು ಕಾಡು ಪ್ರಾಣಿಗಳ ಅಪರೂಪದ ಫೋಟೋಗಳನ್ನು ಶೋಟ್ ಮಾಡಿದ್ದಾರೆ.
8 / 10
ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ, ನೀರಿನ ಹೊಂಡಗಳು ಒಣಗಿರುವಾಗ ಪ್ರಾಣಿಗಳು ಸರೋವರದ ಬಳಿ ಸೇರುತ್ತವೆ. ಈ ವೇಳೆ ಹೆಚ್ಚು ಪ್ರಾಣಿಗಳು ಕಣ್ಣಿಗೆ ಬೀಳುತ್ತವೆ.
9 / 10
ನಾಗರಹೊಳೆ ಉದ್ಯಾನವನ ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 6:45 ರಿಂದ 8:45 ರವರೆಗೆ ಮತ್ತು ಸಂಜೆ 4:00 ರಿಂದ 6:00 ರವರೆಗೆ ಓಪನ್ ಇರುತ್ತೆ.
10 / 10
ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಭಾರತದ ಅತ್ಯಂತ ಜನಪ್ರಿಯ ವನ್ಯಜೀವಿ ತಾಣವಾಗಿರುವುದರಿಂದ ಪ್ರಪಂಚದಾದ್ಯಂತ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
Published On - 10:16 am, Sun, 6 August 23