- Kannada News Photo gallery Bengaluru Lalbagh flower show first day 27 thousand people visited here photos
ಲಾಲ್ಬಾಗ್ ಫ್ಲವರ್ ಶೋಗೆ ಮೊದಲ ದಿನ ಅದ್ಭುತ ರೆಸ್ಪಾನ್ಸ್; 27 ಸಾವಿರ ಜನರಿಂದ ವೀಕ್ಷಣೆ; ಇಲ್ಲಿದೆ ಫೋಟೋಸ್
ಬೆಂಗಳೂರಿನ ಲಾಲ್ಬಾಗ್ನಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಯುತ್ತಿರುವ 214 ನೇ ಫ್ಲವರ್ ಶೋ ಮೂರನೇ ದಿನಕ್ಕೆ ಕಾಲಿಟ್ಟಿದೆ.
Updated on: Aug 06, 2023 | 10:59 AM

ಬೆಂಗಳೂರಿನ ಲಾಲ್ಬಾಗ್ನಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಯುತ್ತಿರುವ 214 ನೇ ಫ್ಲವರ್ ಶೋ ಮೂರನೇ ದಿನಕ್ಕೆ ಕಾಲಿಟ್ಟಿದೆ.

ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯನವರ ಕಾನ್ಸೆಪ್ಟ್ನಲ್ಲಿ ನಡೆಯುತ್ತಿರುವ ಫ್ಲವರ್ ಶೋ ಆಗಸ್ಟ್ 15 ರವರೆಗೂ ನಡೆಯಲಿದೆ.

17 ಲಕ್ಷ ಸ್ವದೇಶಿ ಹೂಗಳಿಂದ ಕಂಗೊಳಿಸುತ್ತಿರುವ ಈ ವರ್ಷದ ಫ್ಲವರ್ ಶೋನಲ್ಲಿ ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದೆ.

ಫ್ಲವರ್ ಶೋನಲ್ಲಿ ಕೆಂಗಲ್ ಹನುಮಂತಯ್ಯನವರು ಬೆಳೆದ ಬಂದ ಹಾದಿ, ರಾಜಕೀಯ ಜೀವನ, ಹೋರಟಾದ ದಿನಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಇಂದಿನಿಂದ ಬೆಳಿಗ್ಗೆ 6 ಗಂಟೆಯಿಂದಲೇ ಫಲಪುಷ್ಪ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಭಾನುವಾರವಾಗಿರುವ ಕಾರಣ ಸಾಕಷ್ಟು ಜನರು ಬರುವ ಸಾಧ್ಯತೆ ಇದೆ.

ನಿನ್ನೆ (ಜು.05) ಒಂದೇ ದಿನ 27 ಸಾವಿರ ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ.

ಇಂದು 50 ಸಾವಿರಕ್ಕು ಹೆಚ್ಚು ಜನರು ಬರುವ ಸಾಧ್ಯತೆ ಇದ್ದು, ಲಾಲ್ ಬಾಗ್ನ ನಾಲ್ಕು ಗೇಟ್ಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ತೋಟಗಾರಿಕೆ ಇಲಾಖೆ ಈ ಫ್ಲವರ್ ಶೋ ಆಯೋಜಿಸುತ್ತದೆ.



















