Kannada News Photo gallery National level wrestling competition held at Bagalkote Here is a glimpse of the fight of the Jattis
ಬಾಗಲಕೋಟೆಯಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ; ಪಟ್ಟು ಹಾಕಿ ಎದುರಾಳಿಯನ್ನ ಎತ್ತಿ ಬಿಸಾಕುವ ಜಟ್ಟಿಗಳ ಕಾದಾಟದ ಝಲಕ್ ಇಲ್ಲಿದೆ
ಕುಸ್ತಿ ಗ್ರಾಮೀಣ ಭಾಗದ ಮಣ್ಣಿನ ಕ್ರೀಡೆ. ಮಣ್ಣಿನ ಅಖಾಡದಲ್ಲಿ ತೊಡೆ ತಟ್ಟಿ ನಿಂತ ಮಲ್ಲರನ್ನು ನೋಡೋದೆ ಒಂದು ಖುಷಿ. ಪಟ್ಟು ಹಾಕಿ ಎದುರಾಳಿಯನ್ನು ಎತ್ತಿ ಬಿಸಾಕುವ ಜಟ್ಟಿಗಳ ಕಾದಾಟ, ನೋಡುಗರನ್ನು ತುದಿಗಾಲ ಮೇಲೆ ನಿಲ್ಲಿಸುತ್ತದೆ. ಇಂದು ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ ಪೈಲ್ವಾನರು ಭರ್ಜರಿ ಸೆಣಸಾಟ ನಡೆಸಿ ದೂಳೆಬ್ಬಿಸಿದರು. ಅದರ ಝಲಕ್ ಇಲ್ಲಿದೆ.
1 / 7
ಹಲಗೆ ಬಾರಿಸುತ್ತಾ ಜಟ್ಟಿಗಳಿಗೆ ಹುರುಪು ನೀಡುತ್ತಿರುವ ಹಲಗೆ ಮೇಳ ಕಲಾವಿದರು.ಮಣ್ಣಿನ ಅಖಾಡದಲ್ಲಿ ಎದುರಾಳಿಯನ್ನು ಎತ್ತಿ ನೆಲಕ್ಕೆ ಬಡಿಯುವ ಮಲ್ಲರು. ಕೊಬ್ಬಿದ ಗೂಳಿಯಂತೆ, ಮದಗಜಗಳಂತೆ ಜಟ್ಟಿಗಳ ಕಾದಾಟ. ಮಲ್ಲರ ಯುದ್ದ ಕಂಡು ಜನರ ಕೇಕೆ ಚಪ್ಪಾಳೆ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ ಗ್ರಾಮದಲ್ಲಿ.
2 / 7
ತುಳಸಿಗೇರಿಯಲ್ಲಿ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂದ್ರ, ತಮಿಳುನಾಡು ಮೂಲದಿಂದಲೂ ಕುಸ್ತಿ ಆಡುವುದಕ್ಕೆ ಮಲ್ಲರು ಆಗಮಿಸಿದ್ದರು. ಮಣ್ಣಿನ ಅಖಾಡದಲ್ಲಿ ಜಟ್ಟಿಗಳು ತೊಡೆ ತಟ್ಟಿ ಸೆಣಸಾಟ ನಡೆಸುತ್ತಿರುವುದು ನೋಡುಗರನ್ನು ರೋಮಾಂಚನಗೊಳಿಸಿತು.
3 / 7
ಮದಗಜದಂತೆ ಕಾದಾಡುವ ಮಲ್ಲರು, ದೇಶಿ ದಂಗಲ್ನ ಕಳೆ ಹೆಚ್ಚಿಸಿದ್ದರು. ಇನ್ನು ಕುಸ್ತಿ ನೋಡೋದಕ್ಕೆ ಸಾವಿರಾರು ಜನ ಜಮಾಯಿಸಿದ್ದರು. ಮಲ್ಲರ ನಾಡಿನ ಕುಸ್ತಿ ಕಣ ಕುತೂಹಲ ಮೂಡಿಸಿದ್ದು, ಕುಸ್ತಿಪಟುಗಳು ಕೂಡ ಉತ್ಸಾಹದಿಂದ ಕುಸ್ತಿ ಆಡಿ ಸಂಭ್ರಮ ಪಟ್ಟರು.
4 / 7
ನೆರದಿದ್ದ ಜನರು ಜಟ್ಟಿ ಕಾಳಗ ಕಂಡು ಸಂಭ್ರಮ ಪಟ್ಟರು. ಕುಸ್ತಿಗೆ ಚಾಲನೆ ನೀಡಿದ ಎಮ್ ಎಲ್ ಸಿ ಪಿ ಹೆಚ್ ಪೂಜಾರ , ಹಳ್ಳಿಗಳಲ್ಲಿ ಕುಸ್ತಿ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲ ಗ್ರಾಮಸ್ಥರು ಸೇರಿ ಆಯೋಜನೆ ಮಾಡಿದ್ದು ಮೆಚ್ಚುವಂತದ್ದು. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಜನರು ಕುಸ್ತಿ ನೋಡಿ ಸಂಭ್ರಮಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
5 / 7
ನೆರದಿದ್ದ ಜನರು ಜಟ್ಟಿ ಕಾಳಗ ಕಂಡು ಸಂಭ್ರಮ ಪಟ್ಟರು. ಕುಸ್ತಿಗೆ ಚಾಲನೆ ನೀಡಿದ ಎಮ್ ಎಲ್ ಸಿ ಪಿ ಹೆಚ್ ಪೂಜಾರ , ಹಳ್ಳಿಗಳಲ್ಲಿ ಕುಸ್ತಿ ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲ ಗ್ರಾಮಸ್ಥರು ಸೇರಿ ಆಯೋಜನೆ ಮಾಡಿದ್ದು ಮೆಚ್ಚುವಂತದ್ದು. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಜನರು ಕುಸ್ತಿ ನೋಡಿ ಸಂಭ್ರಮಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
6 / 7
ಗ್ರಾಮದಲ್ಲಿ ಇಂದಿಗೂ ಕುಸ್ತಿ ಮಲ್ಲಕಂಬ ತರಭೇತಿ ನಡೆಯುತ್ತದೆ.ಇಂತಹ ಗ್ರಾಮದಲ್ಲಿ ಇಂದು ಯೋಗಿದಾಸ ಬಸಪ್ಪಜ್ಜನವರ 75 ನೇ ಪುಣ್ಯಾರಾಧನೆ ಇತ್ತು. ಇದರ ಪ್ರಯುಕ್ತ. ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ರಾಜ್ಯ ಪರರಾಜ್ಯದಿಂದ ಒಟ್ಟು 46 ಜೋಡಿ ಪೈಲ್ವಾನರು ಭಾಗಿಯಾಗಿದ್ದರು. ಕುಸ್ತಿಯಲ್ಲಿ ಜನಪ್ರೀಯ ಕುಸ್ತಿ ಪಟು ಕಾರ್ತಿಕ್ ಕಾಟೆ ಜೋಡಿಗೆ ಬೆಳ್ಳಿ ಗದೆ ನಿಗಧಿ ಮಾಡಲಾಗಿತ್ತು.
7 / 7
ಇತರೆ ಪಟುಗಳಿಗೆ ಗೌರವಧನ ಇತ್ತು. ಆದರೆ, ಬಹುಮಾನ ಇರಲಿಲ್ಲ. ಹಳ್ಳಿ ಭಾಗದಲ್ಲಿ ನಶಿಸುತ್ತಿರುವ ಕುಸ್ತಿ ಉಳಿಸಿ ಬೆಳೆಸುವ ಈಗಿನ ಪೀಳಿಗೆಯನ್ನು ಕುಸ್ತಿ ಕಡೆ ಸೆಳೆಯುವ ಉದ್ದೇಶದಿಂದ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ಹಳ್ಳಿಗಳಲ್ಲೂ ಕುಸ್ತಿ ಕಾಣದ ದಿನದಲ್ಲಿ ತುಳಸಿಗೇರಿ ಗ್ರಾಮಸ್ಥರು ರಾಷ್ಟ್ರಮಟ್ಟದ ಕುಸ್ತಿ ಆಯೋಜಿಸಿದ್ದು ಶ್ಲಾಘನೀಯ .