ಹೇಗಿತ್ತು ನೋಡಿ ನಯನತಾರಾ-ವಿಘ್ನೇಶ್ ಶಿವನ್ ಅವಳಿ ಮಕ್ಕಳ ಮೊದಲ ವರ್ಷದ ಬರ್ತ್ಡೇ ಸಂಭ್ರಮ
ನಯನತಾರಾ ಅವರು ಮಕ್ಕಳಿಗೆ ಉಯಿರ್ ಮತ್ತು ಉಳಗಂ ಎಂದು ಹೆಸರು ಇಟ್ಟಿದ್ದಾರೆ. ಇತ್ತೀಚೆಗೆ ಈ ವಿಚಾರ ರಿವೀಲ್ ಮಾಡಲಾಗಿತ್ತು. ಈಗ ಮಕ್ಕಳ ಮೊದಲ ವರ್ಷದ ಬರ್ತ್ಡೇನ ಆಚರಿಸಲಾಗಿದೆ. ಈ ಫೋಟೋಗಳನ್ನು ವಿಘ್ನೇಶ್ ಪೋಸ್ಟ್ ಮಾಡಿದ್ದಾರೆ.
1 / 6
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದು ಒಂದು ವರ್ಷವಾಗಿದೆ. ಮಕ್ಕಳ ಜನ್ಮದಿನವನ್ನು ಇಬ್ಬರೂ ಸಿಂಪಲ್ ಆಗಿ ಆಚರಿಸಿದ್ದಾರೆ. ಈ ಫೋಟೋ ವೈರಲ್ ಆಗಿದೆ.
2 / 6
ನಯನತಾರಾ ಅವರು ಮಕ್ಕಳಿಗೆ ಉಯಿರ್ ಮತ್ತು ಉಳಗಂ ಎಂದು ಹೆಸರು ಇಟ್ಟಿದ್ದಾರೆ. ಇತ್ತೀಚೆಗೆ ಈ ವಿಚಾರ ರಿವೀಲ್ ಮಾಡಲಾಗಿತ್ತು. ಈಗ ಮಕ್ಕಳ ಮೊದಲ ವರ್ಷದ ಬರ್ತ್ಡೇನ ಆಚರಿಸಲಾಗಿದೆ. ಈ ಫೋಟೋಗಳನ್ನು ವಿಘ್ನೇಶ್ ಪೋಸ್ಟ್ ಮಾಡಿದ್ದಾರೆ.
3 / 6
ನಯನತಾರಾ ಹಾಗೂ ವಿಘ್ನೇಶ್ಗೆ ಮಕ್ಕಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಅವರು ಮಕ್ಕಳ ಬಗ್ಗೆ ಹಲವು ಪೋಸ್ಟ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾ ಇರುತ್ತಾರೆ. ಮಕ್ಕಳ ಮೇಲಿನ ಪ್ರೀತಿಯನ್ನು ಅವರು ಹಲವು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ.
4 / 6
ನಯನತಾರಾ ಅವರು ಹಲವು ವರ್ಷಗಳ ಹಿಂದೆಯೇ ಮದುವೆ ನೋಂದಣಿ ಮಾಡಿಸಿಕೊಂಡಿದ್ದರು ಎನ್ನಲಾಗಿದೆ. ಶಾಸ್ತ್ರಬದ್ಧವಾಗಿ ಕಳೆದ ವರ್ಷ ಮದುವೆ ಆದರು. ಆರೇ ತಿಂಗಳಿಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು.
5 / 6
ನಯನತಾರಾಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ‘ಜವಾನ್’ ಚಿತ್ರದ ಯಶಸ್ಸಿನಿಂದ ಅವರ ಖ್ಯಾತಿ ಬಾಲಿವುಡ್ಗೂ ಹಬ್ಬಿದೆ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ.
6 / 6
ನಯನತಾರಾ ವೃತ್ತಿ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ಅವರು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವ ಆಯ್ಕೆ ಮಾಡಿಕೊಂಡರು. ಸದ್ಯ ವೃತ್ತಿ ಜೀವನ, ವೈಯಕ್ತಿಕ ಜೀವನವನ್ನು ಸಮದೂಗಿಸಿಕೊಂಡು ಹೋಗುತ್ತಿದ್ದಾರೆ.
Published On - 10:51 am, Wed, 27 September 23