
ನಟಿ ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ಹಾಯಾಗಿ ಸಂಸಾರ ನಡೆಸುಕೊಂಡು ಹೋಗುತ್ತಿದ್ದಾರೆ. ಇವರ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಈಗ ನಯನಾತಾರಾ ಅವರು ಪತಿಯ ಬರ್ತ್ಡೇನ ಅದ್ದೂರಿಯಾಗಿ ಆಚರಿಸಿದ್ದಾರೆ.

ವಿಘ್ನೇಶ್ ಶಿವನ್ಗೆ ಇಂದು (ಸೆಪ್ಟೆಂಬರ್ 18) ಬರ್ತ್ಡೇ. ಒಂದು ದಿನ ಮೊದಲು ಅಂದರೆ ಸೆಪ್ಟೆಂಬರ್ 17ರ ರಾತ್ರಿ ಪತಿ ಬರ್ತ್ಡೇನ ನಯನತಾರಾ ಆಚರಿಸಿದ್ದಾರೆ. ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಯನತಾರಾ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಅವರು ಕುಟುಂಬಕ್ಕಾಗಿ ಸಮಯ ಮಾಡಿಕೊಳ್ಳುತ್ತಾರೆ. ಅವರು ಪತಿಯ ಬರ್ತ್ಡೇ ದಿನ ಸಮಯ ಮಾಡಿಕೊಂಡು ವಿಘ್ನೇಶ್ ಜೊತೆ ಹೋಟೆಲ್ನಲ್ಲಿ ಊಟ ಮಾಡಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರದ್ದು ಲವ್ ಮ್ಯಾರೇಜ್. ಇಬ್ಬರೂ ಒಂದೇ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಅಲ್ಲಿಂದ ಇವರ ಪ್ರೀತಿ ಆರಂಭ ಆಯಿತು.

ನಯನತಾರಾ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ನಾಯಕಿ. ಅವರು ಚಿತ್ರದ ಶೂಟಿಂಗ್ನಲ್ಲಿ ಭಾಗಿ ಆಗುತ್ತಿದ್ದಾರೆ.
Published On - 11:15 am, Wed, 18 September 24