ಪ್ರವಾಸಿಗರಿಗೆ ಹೊಸ ಆಕರ್ಷಣೆ! ಪ್ಯಾರಾಗ್ಲೈಡ್‌ ಮಾಡುತ್ತಾ ಆದಿಯೋಗಿ ಪ್ರತಿಮೆ ನೋಡುತ್ತಾ ಸುಂದರ ಸೂರ್ಯಾಸ್ತ ಕಣ್ತುಂಬಿಕೊಳ್ಳಿ

| Updated By: ಸಾಧು ಶ್ರೀನಾಥ್​

Updated on: Feb 05, 2024 | 10:13 AM

ಅದು ಹೇಳಿ ಕೇಳಿ ರಾಜಧಾನಿ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಅಲ್ಲಿರುವ 112 ಅಡಿಗಳ ಆದಿಯೋಗಿ ಪ್ರತಿಮೆ ನೋಡುವುದೆ ಒಂಥರ ಚೆಂದ, ಇನ್ನು ಆಕಾಶದೆತ್ತರ ಬೆಳೆದು ನಿಂತಿರುವ ಆದಿಯೋಗಿಯನ್ನು ಆಕಾಶದಲ್ಲಿ ಹಾರಾಡುತ್ತಾ ನೋಡುವುದು ಅಂದ್ರೆ ಕೇಳಬೇಕಾ!? ಹೌದು! ಪ್ಯಾರಾಗ್ಲೈಡ್‌ ಮೂಲಕ ಹಾರಾಡುತ್ತಾ... ಈಗ ಆದಿಯೋಗಿ ಪ್ರತಿಮೆ ನೋಡಬಹುದಾಗಿದೆ. ಈ ಕುರಿತು ಒಂದು ವರದಿ.

1 / 6

2 / 6
ಪ್ರವಾಸಿಗರು ಹಕ್ಕಿಯಂತೆ ಹಾರಾಡುತ್ತಾ... ಕೆಳಗೆ ಇರುವ 112 ಅಡಿಗಳ ಆದಿಯೋಗಿ ಪ್ರತಿಮೆಯನ್ನು ನೋಡುತ್ತಾ... ಸುಂದರ ಸೂರ್ಯಾಸ್ತ ನೋಡುತ್ತಾ... ಮೊಬೈಲ್ ಸೆಲ್ಪಿ ಸ್ಟಿಕ್ ಹಿಡಿದು ಎಂಜಾಯ್ ಮಾಡುತ್ತಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಇಶಾ ಫೌಂಡೇಷನ್ ನ ಅವಲಗುರ್ಕಿ ಗ್ರಾಮದ ಬಳಿ.

3 / 6
ಸ್ಕೈ ಬರ್ಡ್ ಅಡ್ವಂಚರ್ ಸ್ಪೋರ್ಟ್ಸ್ ಸಂಸ್ಥೆಯೊಂದು ಇದೇ ಪ್ರಥಮ ಬಾರಿಗೆ ಇಶಾ  ಫೌಂಡೇಷನ್ ನ ಬಳಿ ಪ್ರವಾಸಿಗರಿಗೆ ಪ್ಯಾರಾಗ್ಲೈಡಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕರು  5 ನಿಮಿಷದಿಂದ 8 ನಿಮಿಷದ ವರೆಗೂ ಆಕಾಶದಲ್ಲಿ ಹಾರಾಡಬಹುದಾಗಿದೆ.

4 / 6
ಪ್ರತಿದಿನ ಬೆಳಿಗಿನ ವೇಳೆ ಆರು ಗಂಟೆಯಿಂದ ಹತ್ತು ಗಂಟೆವರೆಗೂ ಹಾಗೂ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ಪ್ಯಾರಾಗ್ಲೈಡಿಂಗ್ ಮಾಡಬಹುದಾಗಿದೆ. ಪ್ರವಾಸಿಗರು ತಲಾ ಮೂರು ಸಾವಿರ ರೂಪಾಯಿ ಫೀಸ್ ನೀಡಿ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಹುದಾಗಿದೆ. ಸಂಜೆಯಂತೂ... ಮೇಲಿನಿಂದ ಆದಿಯೋಗಿ ಪ್ರತಿಮೆ ನೋಡುವ ಸೌಭಾಗ್ಯ ಒಂದೆಡೆಯಾದ್ರೆ.... ಮತ್ತೊಂದೆಡೆ ಪ್ರಕೃತಿಯ ವಿಹಂಗಮ ನೋಟ ಮನಸೆಳೆಯುತ್ತೆ.

5 / 6
ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಗ್ಲೈಡಿಂಗ್ ದೃಶ್ಯಗಳನ್ನು ನೋಡಿ ಆಕರ್ಷಣೆಗೆ ಒಳಗಾಗ್ತಿರುವ ಪ್ರವಾಸಿಗರು, ಪ್ರತಿದಿನ ಬೆಂಗಳೂರಿನಿಂದ ಆಗಮಿಸಿ ಪ್ಯಾರಾಗ್ಲೈಡಿಂಗ್ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

6 / 6
ಮತ್ತೊಂದೆಡೆ ಆದಿಯೋಗಿ ಪ್ರತಿಮೆ ನೋಡಲು ಇಶಾ ಫೌಂಡೇಷನ್ ಗೆ ಬರುವ ಪ್ರವಾಸಿಗರು ಸಹ ಪ್ಯಾರಾಗ್ಲೈಡಿಂಗ್ ಮೂಲಕ ಆದಿಯೋಗಿ ಪ್ರತಿಮೆ ನೋಡಿ ಕಣ್ತುಂಬಿಕೊಳ್ತಿದ್ದಾರೆ.