
ಜರ್ಮನಿಯ ಸ್ಟುಟ್ ಗಾಟ್ ನಗರದಲ್ಲಿ ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9 ಆಯೋಜಿಸಿರುವ ಮೂರು ದಿನಗಳ ಗ್ಲೋಬಲ್ ಸಮ್ಮಿಟ್ ಇಂದು ಆರಂಭವಾಗಿದೆ. ನಾಳೆ(ನವೆಂಬರ್ 21 ಮತ್ತು 22) ಮತ್ತು ನಾಡಿದ್ದು ಮೂರು ದಿನಗಳ ಕಾಲ ಜಾಗತಿಕ ಸಮಾವೇಶ ನಡೆಯಲಿದೆ.

. ಟಿವಿ9 ನೆಟ್ ವರ್ಕ್ ಎಂಡಿ ಮತ್ತು ಸಿಇಒ ಬರುನ್ ದಾಸ್ ಅವರ ಚಿಂತನೆಯ ಈ ನ್ಯೂಸ್ 9 ಗ್ಲೋಬಲ್ ಸಮ್ಮಿಟ್, ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಆಯೋಜಿಸಲಾಗಿದೆ. ಇನ್ನು ಸಮಿಟ್ನ ಮೊದಲ ದಿನದಲ್ಲಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂದಿಯಾ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.

ಟಿವಿ9 ನೆಟ್ವರ್ಕ್ ಎಂಡಿ ಮತ್ತು ಸಿಇಒ ಬರುನ್ ದಾಸ್ ಅವರು ನ್ಯೂಸ್9 ಗ್ಲೋಬಲ್ ಸಮ್ಮಿಟ್ ನಲ್ಲಿ ಮಾತನಾಡಿ, ಮೊದಲ ಬಾರಿಗೆ ಗ್ಲೋಬಲ್ ಸಮ್ಮಿಟ್ ಆಯೋಜಿಸಲಾಗಿದೆ. ಸಮ್ಮಿಟ್‌ನಲ್ಲಿ ಭಾಗಿಯಾಗಿದ್ದಕ್ಕೆ ಗಣ್ಯರಿಗೆ ಧನ್ಯವಾದಗಳು. ಠಾಗೋರ್ ಜನಿಸಿದ ದೇಶದಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ನಡೆಯುತ್ತಿರುವ ಮೂರು ದಿನಗಳ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಎ ವೈಷ್ಣವ್, ಭಾರತದ ಬೆಳವಣಿಗೆಯಲ್ಲಿ ನಾಲ್ಕು ಪಿಲ್ಲರ್ಗಳನ್ನು ವಿವರಿಸಿದ್ದಾರೆ.

ಭಾರತದ ಪ್ರಗತಿಯ ಕಾರ್ಯತಂತ್ರವು ನಾಲ್ಕು ಸ್ತಂಭಗಳ ಮೇಲೆ ನಿಂತಿದೆ. ಮೊದಲನೆಯದು ಇನ್ಫ್ರಾಸ್ಟ್ರಕ್ಚರ್ನಲ್ಲಿ ಸಾರ್ವಜನಿಕ ಹೂಡಿಕೆ. ಎರಡನೆಯದು ಸಮಗ್ರ ಪ್ರಗತಿ. ಮೂರನೆಯದು ಮ್ಯಾನುಫ್ಯಾಕ್ಚರಿಂಗ್ ಮತ್ತು ಇನ್ನೋವೇಶನ್. ನಾಲ್ಕನೆಯದು ಕಾನೂನುಗಳ ಸರಳೀಕರಣ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.

ಜರ್ಮನಿಯಲ್ಲಿ ನ್ಯೂಸ್9 ವಾಹಿನಿಯಿಂದ ಗ್ಲೋಬಲ್ ಸಮಿಟ್ ಕಾರ್ಯಕ್ರಮ ಆಯೋಜನೆ ಮಾಡಿರುವುದನ್ನು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಪ್ರಶಂಸಿಸಿದರು. ಭಾರತ ಮಾತ್ರವಲ್ಲ, ವಿಶ್ವದ ಯಾವುದೇ ಮಾಧ್ಯಮವೂ ಇಂಥದ್ದೊಂದು ಉನ್ನತ ಮಟ್ಟದ ಜಾಗತಿಕ ಸಮಿಟ್ ಅನ್ನು ಆಯೋಜನೆ ಮಾಡಿದ್ದು ಇದೇ ಮೊದಲು ಎಂದು ಹೇಳಿದರು.

ನ್ಯೂಸ್ 9 ಗ್ಲೋಬಲ್ ಸಮ್ಮಿಟ್‌ನಲ್ಲಿ ಭಾರತದ ವೈಭವ ಬಿಚ್ಚಿಟ್ಟ ಸಚಿವ ಎ ವೈಷ್ಣವ್ ಅವರಿಗೆ ಜಮರ್ನಿಯ ಜರ್ಸಿ ಹಾಗೂ ಭಾರತದ ಶಾಲು ಹಾಕಿ ಗೌರವಿಸಲಾಯ್ತು

Published On - 11:58 pm, Thu, 21 November 24