ಭಾರತದಲ್ಲಿ ಇಂದಿನಿಂದ ನೋಕಿಯಾದ ಈ ಸ್ಟೈಲಿಶ್ ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯ: ಬೆಲೆ ಎಷ್ಟು?

|

Updated on: Sep 15, 2023 | 6:55 AM

Nokia G42 5G Sale Start Today: ನೋಕಿಯಾ G42 5G ಬಜೆಟ್ ಬೆಲೆಯ ಫೋನಾಗಿದ್ದರೂ, ಆಕರ್ಷಕ ಡಿಸ್ ಪ್ಲೇ, ಕ್ಯಾಮೆರಾ, ಬ್ಯಾಟರಿ ಆಯ್ಕೆ ನೀಡಲಾಗಿದೆ. ಈ ಫೋನ್ ಅಮೆಜಾನ್ ಮತ್ತು ನೋಕಿಯಾ ವೆಬ್‌ಸೈಟ್ ಮೂಲಕ ಇಂದಿನಿಂದ (ಸೆ. 15) ಖರೀದಿಗೆ ಲಭ್ಯವಿರುತ್ತದೆ. ಹಾಗಾದರೆ ನೋಕಿಯಾ G42 5G ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

1 / 7
ಬಹುದಿನಗಳ ಬಳಿಕ ಪ್ರಸಿದ್ಧ ನೋಕಿಯಾ ಕಂಪನಿ ಭಾರತದಲ್ಲಿ ಕಳೆದ ವಾರ ಸ್ಟೈಲಿಶ್ ಸ್ಮಾರ್ಟ್​ಫೋನ್ ಒಂದನ್ನು ಅನಾವರಣ ಮಾಡಿತ್ತು. ಇದರ ಹೆಸರು ನೋಕಿಯಾ ಜಿ42 5ಜಿ (Nokia G42 5G). G-ಸರಣಿಯ ಈ ಫೋನ್ ಇಂದಿನಿಂದ ದೇಶದಲ್ಲಿ ಮಾರಾಟ ಕಾಣಲಿದ್ದು, ಅಮೆಜಾನ್ ಮೂಲಕ ಖರೀದಿಗೆ ಸಿಗಲಿದೆ.

2 / 7
ನೋಕಿಯಾ G42 5G ಬಜೆಟ್ ಬೆಲೆಯ ಫೋನಾಗಿದ್ದರೂ, ಆಕರ್ಷಕ ಡಿಸ್ ಪ್ಲೇ, ಕ್ಯಾಮೆರಾ, ಬ್ಯಾಟರಿ ಆಯ್ಕೆ ನೀಡಲಾಗಿದೆ. ಹಾಗಾದರೆ ನೋಕಿಯಾ G42 5G ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

3 / 7
ಭಾರತದಲ್ಲಿ ನೋಕಿಯಾ G42 5G ಸ್ಮಾರ್ಟ್​ಫೋನ್ ಒಂದು ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆ ಆಗಿದೆ. ಇದರ ಬೆಲೆ 6GB RAM + 128GB ಕಾನ್ಫಿಗರೇಶನ್ ಆಯ್ಕೆಗೆ ಕೇವಲ 12,599 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಅಮೆಜಾನ್ ಮತ್ತು ನೋಕಿಯಾ ವೆಬ್‌ಸೈಟ್ ಮೂಲಕ ಇಂದಿನಿಂದ (ಸೆ. 15) ಖರೀದಿಗೆ ಲಭ್ಯವಿರುತ್ತದೆ.

4 / 7
ನೋಕಿಯಾದ ಈ ಹೊಸ ಸ್ಮಾರ್ಟ್‌ಫೋನ್ 720 × 1612 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.56-ಇಂಚಿನ HD+ LCD ಡಿಸ್ ಪ್ಲೇ ಹೊಂದಿದೆ. 90Hz ರಿಫ್ರೆಶ್ ದರ, 560 nits ಬೈಟ್​ನೆಸ್, 20: 9 ಅನುಪಾತ, ಮತ್ತು ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ ವಾಟರ್‌ಡ್ರಾಪ್ ನಾಚ್ ಅನ್ನು ಒಳಗೊಂಡಿದೆ.

5 / 7
ನೋಕಿಯಾ G42 5G ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480+ ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಅದರೊಂದಿಗೆ Adreno 619 GPU ಅನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ನೊಂದಿಗೆ ಲೋಡ್ ಆಗಿದೆ. ನೋಕಿಯಾ ಆಂಡ್ರಾಯ್ಡ್ 14 ಮತ್ತು ಆಂಡ್ರಾಯ್ಡ್ 15 ಎರಡು ಆವೃತ್ತಿಯ ನವೀಕರಣಗಳ ಭರವಸೆ ನೀಡಿದೆ.

6 / 7
ನೋಕಿಯಾದ ಈ ಹೊಸ ಸ್ಮಾರ್ಟ್​ಫೋನ್ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಡೆಪ್ತ್ ಕ್ಯಾಮೆರಾ, 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು LED ಫ್ಲಾಶ್ ಒಳಗೊಂಡಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

7 / 7
ನೋಕಿಯಾ G42 5G ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ ಮತ್ತು 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ. ಡ್ಯುಯಲ್-ಸಿಮ್, 5G, ವೈಫೈ 802.11 a/b/g/n/ac/ax, ಬ್ಲೂಟೂತ್ 5.1, NFC, GPS, USB ಟೈಪ್-C ಪೋರ್ಟ್, 3.5mm ಆಡಿಯೋ ಜ್ಯಾಕ್ ಬೆಂಬಲ ಪಡೆದುಕೊಂಡಿದೆ.