Ola Electric Scooter: ಓಲಾ ಸ್ಕೂಟರ್​ ಖರೀದಿಸಬೇಕು ಅಂತಿದ್ದೀರಾ? ಸಾಲ ಸಿಗುತ್ತೆ ಈ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ

Updated By: Srinivas Mata

Updated on: Sep 06, 2021 | 6:11 PM

ಓಲಾ ಎಲೆಕ್ಟ್ರಿಕ್ ಸ್ಕೂಟರ್​ಗಳ ಖರೀದಿಗೆ ವಿವಿಧ ಬ್ಯಾಂಕ್​ಗಳು, ಹಣಕಾಸು ಸಂಸ್ಥೆಗಳಿಂದ ದೊರೆಯುವ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ಇಲ್ಲಿದೆ.

1 / 5
ಓಲಾ ಎಲೆಕ್ಟ್ರಿಕ್ ತನ್ನ S1 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರಿಗೆ ಸಾಲ ನೀಡಲು ಪ್ರಮುಖ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಸಹಯೋಗ ಮಾಡಿಕೊಂಡಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸೆಪ್ಟೆಂಬರ್ 8ರಿಂದ ಖರೀದಿಗೆ ಲಭ್ಯ ಇರುತ್ತದೆ. ಕಂಪೆನಿಯು ಓಲಾ S1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು ವೇರಿಯಂಟ್​ನಲ್ಲಿ ಬಿಡುಗಡೆ ಮಾಡಿದೆ- S1 ಮತ್ತು S1 Pro - ಇವುಗಳ ಬೆಲೆ ಕ್ರಮವಾಗಿ ರೂ. 99,999 ಮತ್ತು ರೂ. 1,29,999 (FAME II ಸಬ್ಸಿಡಿ ಮತ್ತು ರಾಜ್ಯ ಸಬ್ಸಿಡಿಗಳನ್ನು ಹೊರತುಪಡಿಸಿ ಎಕ್ಸ್ ಶೋರೂಂ ಬೆಲೆಗಳು). ಅಕ್ಟೋಬರ್‌ನಲ್ಲಿ ವಿತರಣೆ ಆರಂಭಿಸುವುದಾಗಿ ಓಲಾ ಎಲೆಕ್ಟ್ರಿಕ್ ಹೇಳಿದೆ. "ನಾವು ಎಲ್ಲ ಪ್ರಮುಖ ಬ್ಯಾಂಕ್​ಗಳು ಮತ್ತು (ಹಣಕಾಸು) ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ... ಅವುಗಳಲ್ಲಿ ಹೆಚ್ಚಿನವು ಸೆಪ್ಟೆಂಬರ್ 8 ರಿಂದ ಆರಂಭವಾಗುತ್ತವೆ ಮತ್ತು ಇತರವು ಶೀಘ್ರದಲ್ಲೇ ಲೈವ್ ಆಗುತ್ತವೆ," ಎಂದು ಓಲಾ ಎಲೆಕ್ಟ್ರಿಕ್ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವರುಣ್ ದುಬೆ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

2 / 5
ಬ್ಯಾಂಕ್ ಆಫ್ ಬರೋಡಾ, ಆಕ್ಸಿಸ್ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಎಫ್​ಸಿ ಫಸ್ಟ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಪ್ರೈಮ್, ಟಾಟಾ ಕ್ಯಾಪಿಟಲ್ ಮತ್ತು ಯೆಸ್​ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಓಲಾ ಎಲೆಕ್ಟ್ರಿಕ್ ಒಪ್ಪಂದ ಮಾಡಿಕೊಂಡಿದೆ. ಸಹಯೋಗದ ನಂತರ ದುಬೆ ಮಾತನಾಡಿ, ಓಲಾ ಸ್ಕೂಟರ್‌ಗೆ ಹಣಕಾಸು ಆಯ್ಕೆ ಮಾಡಲು ಇಚ್ಛಿಸುವ ಗ್ರಾಹಕರಿಗೆ ಆಯ್ಕೆಯನ್ನು ಒದಗಿಸಲಾಗುವುದು. ಸಂಪೂರ್ಣ ಖರೀದಿ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿರುತ್ತದೆ, ಇದು "ಅತ್ಯಂತ ಸುಲಲಿತವಾಗಿರುತ್ತದೆ" ಎಂದು ಹೇಳಿದ್ದಾರೆ. "ಗ್ರಾಹಕರಿಗೆ ದೊರೆಯಲಿರುವ ಸಾಲದ ಅನುಮೋದನೆ ಮೊತ್ತ, ಅವರು ಏನು ಮಾಡಬೇಕೆಂಬುದರ ಬಗ್ಗೆ ಎಲ್ಲಾ ವಿವರಗಳನ್ನು ಸಹ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ, ನಾವು ಅತ್ಯಂತ ಆಕರ್ಷಕವಾದ ಹಣಕಾಸು ಆಯ್ಕೆಗಳನ್ನು ಪಡೆದುಕೊಂಡಿದ್ದೇವೆ, S1ಗೆ EMI ಕೇವಲ 2,999 ರೂಪಾಯಿಯಿಂದ  ಪ್ರಾರಂಭವಾಗುತ್ತದೆ," ಎಂದು ಹೇಳಿದ್ದಾರೆ.

3 / 5
ಬಣ್ಣವನ್ನು ಅಂತಿಮಗೊಳಿಸಬಹುದು

ಬಣ್ಣವನ್ನು ಅಂತಿಮಗೊಳಿಸಬಹುದು

4 / 5
ಸೆಮಿ ಕಂಡಕ್ಟರ್ ಕೊರತೆ

ಸೆಮಿ ಕಂಡಕ್ಟರ್ ಕೊರತೆ

5 / 5
500 ಎಕರೆಗಳಲ್ಲಿ ಓಲಾ ಫ್ಯಾಕ್ಟರಿ

500 ಎಕರೆಗಳಲ್ಲಿ ಓಲಾ ಫ್ಯಾಕ್ಟರಿ