Kannada News Photo gallery Onam Festival at Bagalakote Medical College, Color pull celebration of students in traditional Kerala dress, Kannada News
ಬಾಗಲಕೋಟೆ ಮೆಡಿಕಲ್ ಕಾಲೇಜಿನಲ್ಲಿ ರಂಗೇರಿದ ಓಣಂ ಹಬ್ಬ; ಕೇರಳದ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳ ಕಲರ್ ಪುಲ್ ಸಂಭ್ರಮ
ಅದು ಪಕ್ಕಾ ಕನ್ನಡ ನೆಲ, ಅದರಲ್ಲೂ ಜವಾರಿ ನಾಡು ಉತ್ತರ ಕರ್ನಾಟಕ. ಇಂತಹ ನಾಡಲ್ಲಿ ಕೇರಳ ಕುಟ್ಟಿಗಳು ಒಂದೇ ಸಮನೆ ಹೆಜ್ಜೆ ಹಾಕುತ್ತಿದ್ದರು. ಚಂಡೆ ಮದ್ದಳೆ ಸದ್ದಿಗೆ ಮೈಚಳಿ ಬಿಟ್ಟು ಕುಣಿದು ಕುಪ್ಪಳಿಸಿದರು. ಉತ್ತರ ಕರ್ನಾಟಕದಲ್ಲಿ ಕೇರಳ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದರು. ಇದರ ಝಲಕ್ ಇಲ್ಲಿದೆ.
1 / 6
ಹುರುಪಿನಿಂದ ಚಂಡೆ ಬಾರಿಸುತ್ತಿರುವ ಕಲಾವಿದರು. ಚಂಡೆ ಮದ್ದಳೆ ಸದ್ದಿಗೆ ಯುವತಿಯರ ಭರ್ಜರಿ ಕುಣಿತ. ಕೇರಳ ಸಾಂಪ್ರದಾಯಿಕ ಉಡುಗೆಯಲ್ಲಿ ಕಲರ್ ಪುಲ್ ಸಂಭ್ರಮ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆಯ ಬಿವಿವಿ ಸಂಘದ ಮೆಡಿಕಲ್ ಕಾಲೇಜ್ ಕ್ಯಾಂಪಸ್‌ನಲ್ಲಿ.
2 / 6
ಈಗ ಎಲ್ಲ ಕಡೆ ಗಣೇಶ ಹಬ್ಬದ ಸಂಭ್ರಮ. ಅದರಂತೆ ಬಾಗಲಕೋಟೆ ಬಿವಿವಿ ಸಂಘದಲ್ಲಿ ಮೆಡಿಕಲ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಗಣಪನನ್ನು ಪ್ರತಿಷ್ಟಾಪನೆ ಮಾಡಿದ್ದಾರೆ. ಆದರೆ, ವಿಶೇಷ ಅಂದರೆ ಇಲ್ಲಿ ಕೇವಲ ಗಣಪನ ಸಂಭ್ರಮ ಮಾತ್ರ ಇರಲಿಲ್ಲ. ಜೊತೆಗೆ ಕೇರಳದ ಪ್ರಸಿದ್ದ ಓಣಂ ಹಬ್ಬದ ಆಚರಣೆ ಇತ್ತು. ಬಲಿ ಚಕ್ರವರ್ತಿ ವೇಷಧಾರಿ ಜೊತೆಗೆ ಚಂಡೆ ಮದ್ದಳೆ ಸದ್ದು ಎಲ್ಲರ ಗಮನ ಸೆಳೆಯಿತು.
3 / 6
ಒಣಂ ಹಬ್ಬವನ್ನು ಜ್ಯೋತಿ ಬೆಳಗುವ ಮೂಲಕ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಉದ್ಘಾಟನೆ ಮಾಡಿದರು. ನಂತರ ಮಲಯಾಳಿ ಹಾಡಿಗೆ ಕೈಮುಗಿದು ಗುಂಪಾಗಿ ಭರತನಾಟ್ಯ ಸ್ಟೆಪ್ ಹಾಕಿದ ಕುಟ್ಟಿಗಳ ಸಾಂಪ್ರದಾಯಿಕ ನೃತ್ಯ ಎಲ್ಲರ ಮನ ಸೆಳೆಯಿತು. ಎಲ್ಲರೂ ಗಣೇಶ ಹಬ್ಬದ ಜೊತೆಗೆ ಓಣಂ ಆಚರಿಸಿ ಹರ್ಷ ಪಟ್ಟರು..
4 / 6
ಮಲೆಯಾಳಿ ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಯುವತಿಯರು ಮೈಚಳಿ ಬಿಟ್ಟು ಕುಣಿದ್ರು. ಬಿವಿವಿ ಸಂಘದಲ್ಲಿ ಮೆಡಿಕಲ್ ಹಾಗೂ ನರ್ಸಿಂಗ್ ವಿವಿಧ ವಿಭಾಗ ಸೇರಿ ಒಟ್ಟು 500 ಜನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಾರೆ. ಈ ಅವಧಿಯಲ್ಲಿ ಕೇರಳದಲ್ಲಿ ಹತ್ತು ದಿನಗಳ ಕಾಲ ಇದನ್ನು ಆಚರಣೆ ಮಾಡುತ್ತಾರೆ. ಭೂಲೋಕದಲ್ಲಿ ದೇವರು ಅಸೂಯೆ ಪಡುವಷ್ಟು ಪ್ರಜೆಗಳ ಪ್ರೀತಿ ಗಳಿಸಿದ್ದ, ಇಡೀ ರಾಜ್ಯದ ಜನರು ಒಂದೇ ಒಂದು ಸುಳ್ಳು ಹೇಳದ ರೀತಿ ಆಳ್ವಿಕೆ ನಡೆಸಿದ್ದ ಬಲಿ ಮಹಾರಾಜ ಚಕ್ರವರ್ತಿಯಾಗಿದ್ದಈತ, ಇಷ್ಟು ಹೆಸರು, ಖ್ಯಾತಿ ಗಳಿಸಿದ್ದಾನೆ.
5 / 6
ಯಾವ ಭಕ್ತರು ನಮ್ಮ ಕಡೆ ತಿರುಗಿ ನೋಡೋದಿಲ್ಲ ಎಂದು ದೇವತೆಗಳು ವಿಷ್ಣುವಿನ ಬಳಿ ಹೇಳುತ್ತಾರೆ. ವಿಷ್ಣು ವಾಮನ ಅವತಾರ ತಾಳಿ ನನಗೆ ಮೂರು ಪಾದದಷ್ಟು ಜಾಗ ಬೇಕು ಎಂದು ಕೇಳುತ್ತಾನೆ. ಆಗ ಬಲಿ ಆಯ್ತು ಎಂದಾಗ ವಿಷ್ಣು ಮಹಾ ಅವತಾರ ತಾಳಿ ಒಂದು ಹೆಜ್ಜೆಯಿಟ್ಟಾಗ ಇಡೀ ಭೂಲೋಕ ಕವರ್ ಆಗುತ್ತದೆ. ನಂತರ ಇನ್ನೊಂದು ಹೆಜ್ಜೆ ಇಟ್ಟಾಗ ಆಕಾಶ, ಮೂರನೆ ಹೆಜ್ಜೆ ಎಲ್ಲಿ ಇಡೋದು ಅಂದಾಗ ಬಲಿ ತನ್ನ ತಲೆ ಮೇಲೆ ಇಡಿ ಎಂದು ಹೇಳುತ್ತಾನೆ. ವಿಷ್ಣು ಬಲಿ ತಲೆ ಮೇಲೆಕಾಲಿಟ್ಟಾಗ ಆತ ಸಂಹಾರನಾಗ್ತಾನೆ.
6 / 6
ಬಲಿ ಪ್ರತಿ ವರ್ಷ ನನ್ನ ಪ್ರಜೆಗಳ ನೋಡೋದಕ್ಕೆ ಅವಕಾಶ ಕೊಡಬೇಕು ಎಂದು ಕೇಳಿದ ಹಿನ್ನೆಲೆ ವಿಷ್ಣು ಅಸ್ತು ಎಂದಿರುತ್ತಾನೆ. ಆ ಪ್ರಕಾರ ಪ್ರತಿವರ್ಷ ಬಲಿಯನ್ನು ಪ್ರಜೆಗಳು ಸಂಭ್ರಮದಿಂದ ಬರ ಮಾಡಿಕೊಳ್ಳೋದೆ ಓಣಂ. ಇಂತಹ ಪ್ರಮುಖ ಹಬ್ಬ ಕೇರಳ ವಿದ್ಯಾರ್ಥಿಗಳಿಗೆ ತಪ್ಪಬಾರದು ಎಂದು ಆಡಳಿತ ಮಂಡಳಿ ಕೇರಳಿಗರಿಗೆ ಓಣಂ ಹಬ್ಬಕ್ಕೆ ವ್ಯವಸ್ಥೆ ಮಾಡಿತ್ತು. ಗಣೇಶ ಹಬ್ಬದ ಜೊತೆಗೆ ಓಣಂ ಕೇರಳ ಕುಟ್ಟಿಗಳಿಗೆ ಡಬಲ್ ಸಂಭ್ರಮ ನೀಡ್ತು. ಕರುನಾಡಿನಲ್ಲಿ ಕೇರಳಿಗರಿಗೆ ಓಣಂ ಆಚರಿಸುವ ವ್ಯವಸ್ಥೆ ಕಲ್ಪಿಸಿದ್ದು ಶ್ಲಾಘನೀಯ.