- Kannada News Photo gallery Rachita Ram shares cryptic post after He met Darshan In Jail cinema News in Kannada
‘ಮುಖವಾಡ ಹಾಕಿದ ಜನರಿಗೆ ವರ್ಚಸ್ಸು ಕಾಯ್ದುಕೊಳ್ಳಬೇಕು’; ರಚಿತಾ ರಾಮ್
‘ಮುಖವಾಡ ಹಾಕಿದ ಜನರು (ಫೇಕ್ ಜನರು) ವರ್ಚಸ್ಸನ್ನು ಕಾಯ್ದುಕೊಳ್ಳಬೇಕು. ಆದರೆ, ನಿಜವಾದವರು ಡೋಂಟ್ ಕೇರ್ ಎನ್ನುತ್ತಾರೆ’ ಎಂಬರ್ಥ ಬರುವಂತೆ ರಚಿತಾ ರಾಮ್ ಪೋಸ್ಟ್ ಮಾಡಿದ್ದಾರೆ. ಅವರ ಮಾಡಿದ ಫೋಟೋ ಸಾಕಷ್ಟು ಗಮನ ಸೆಳೆದಿದೆ.
Updated on: Sep 11, 2024 | 10:59 AM

ನಟಿ ರಚಿತಾ ರಾಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಆಗಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಮಾಡಿರೋ ಪೋಸ್ಟ್ ಒಂದು ಸಖತ್ ವೈರಲ್ ಆಗಿ ಗಮನ ಸೆಳೆದೆ.

‘ಮುಖವಾಡ ಹಾಕಿದ ಜನರು (ಫೇಕ್ ಜನರು) ವರ್ಚಸ್ಸನ್ನು ಕಾಯ್ದುಕೊಳ್ಳಬೇಕು. ಆದರೆ, ನಿಜವಾದವರು ಡೋಂಟ್ ಕೇರ್ ಎನ್ನುತ್ತಾರೆ’ ಎಂಬರ್ಥ ಬರುವಂತೆ ರಚಿತಾ ರಾಮ್ ಪೋಸ್ಟ್ ಮಾಡಿದ್ದಾರೆ. ಇದು ಸಾಕಷ್ಟು ಗಮನ ಸೆಳೆದಿದೆ.

ರಚಿತಾ ರಾಮ್ ಅವರು ಮಾಡಿರೋ ಪೋಸ್ಟ್ ಗಮನ ಸೆಳೆಯುತ್ತಿದೆ. ಅವರು ಹೀಗೆ ಹೇಳಿದ್ದು ಏಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಈ ಮೊದಲು ರಚಿತಾ ರಾಮ್ ಅವರು ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದರು. ಆ ಬಳಿಕ ಅವರು ಕಣ್ಣೀರು ಹಾಕಿದ್ದರು. ಈ ವಿಚಾರಕ್ಕೆ ಕೆಲವರು ಅವರನ್ನು ಟೀಕೆ ಕೂಡ ಮಾಡಿದ್ದರು.

ಸದ್ಯ ರಚಿತಾ ರಾಮ್ ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಝೈದ್ ಖಾನ್ ನಟನೆಯ ಹೊಸ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ. ಇತ್ತೀಚೆಗೆ ಸಿನಿಮಾದ ಮುಹೂರ್ತ ನಡೆದಿದೆ. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿದ್ದವು.



















