AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

One Plus Nord 3: ಕೇವಲ 15 ನಿಮಿಷಗಳಲ್ಲಿ ಫುಲ್ ಚಾರ್ಜ್: ಒನ್​ಪ್ಲಸ್ ಬಿಡುಗಡೆ ಮಾಡುತ್ತಿದೆ ಅಚ್ಚರಿಯ ಫೋನ್

150W fast charging Phone: OnePlus Nord 3 ಫೋನಿನ ಪ್ರಮುಖ ಹೈಲೇಟ್ 150W ಚಾರ್ಜರ್. ಹೌದು, ಈ ಫೋನ್ 150 ವ್ಯಾಟ್ ಸೂಪರ್ VOOC ಚಾರ್ಜಿಂಗ್ ತಂತ್ರಜ್ಞಾನದಿಂದ ಚಾಲಿತವಾಗಿದೆ. ಇದು ಕೇವಲ 15 ನಿಮಿಷಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಅನುಮತಿಸುತ್ತದೆ. ಅಲ್ಲದೆ ಶೇಕಡಾ 1 ರಿಂದ 50 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಲು ಕೇವಲ 5 ನಿಮಿಷಗಳು ಸಾಕಂತೆ.

Vinay Bhat
|

Updated on:Mar 03, 2022 | 9:07 AM

Share
ಭಾರತದಲ್ಲಿ ತನ್ನ ನಾರ್ಡ್ ಸರಣಿಯ ಸ್ಮಾರ್ಟ್​ಫೋನ್​ಗಳನ್ನು (Smartphone) ಬಿಡುಗಡೆ ಮಾಡಿ ಮಾರುಕಟಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಒನ್​ಪ್ಲಸ್​ ಕಂಪನಿ ಇದೀಗ ಮತ್ತೆ ಬಂದಿದೆ. ಸತತವಾಗಿ ಹಲವಾರು ಹೊಸ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುವ OnePlus, ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಫೋನ್ ಅನ್ನು ಅನಾವರಣ ಮಾಡಲು ಸಿದ್ಧವಾಗಿದೆ. OnePlus Nord 3 ಎಂದು ಹೆಸರಿಸಲಾದ ಫೋನ್ ಏಪ್ರಿಲ್ ಮತ್ತು ಜೂನ್ ನಡುವೆ ಬಿಡುಗಡೆಯಾಗಲಿದೆ.

1 / 6
OnePlus Nord 3 ಫೋನ್ 6.7-ಇಂಚಿನ ಪೂರ್ಣ HD + OLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಫೋನ್ A78 ಕೋರ್ MediaTek Dimension 8100 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸಲಿದೆ.

2 / 6
ಕ್ಯಾಮೆರಾಕ್ಕೆ ಸಂಬಂಧಿಸಿದಂತೆ, ಇದು 50 ಮೆಗಾಪಿಕ್ಸೆಲ್ ಸೋನಿ IMX766 ಹಿಂಬದಿಯ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ 32 ಮೆಗಾಪಿಕ್ಸೆಲ್ ಪಂಚ್ ಹೋಲ್ ಕ್ಯಾಮೆರಾವನ್ನು ಹೊಂದಿರುತ್ತದೆ.

3 / 6
OnePlus Nord 3 ಫೋನಿನ ಪ್ರಮುಖ ಹೈಲೇಟ್ 150W ಚಾರ್ಜರ್. ಹೌದು, ಈ ಫೋನ್ 150 ವ್ಯಾಟ್ ಸೂಪರ್ VOOC ಚಾರ್ಜಿಂಗ್ ತಂತ್ರಜ್ಞಾನದಿಂದ ಚಾಲಿತವಾಗಿದೆ. ಇದು ಕೇವಲ 15 ನಿಮಿಷಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಅನುಮತಿಸುತ್ತದೆ. ಅಲ್ಲದೆ ಶೇಕಡಾ 1 ರಿಂದ 50 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಲು ಕೇವಲ 5 ನಿಮಿಷಗಳು ಸಾಕಂತೆ.

4 / 6
ಎರಡು ವಾರಗಳ ಹಿಂದೆಯಷ್ಟೆ ದೇಶದಲ್ಲಿ ಬಹುನಿರೀಕ್ಷಿತ ಹೊಸ ಒನ್​ಪ್ಲಸ್​ ನಾರ್ಡ್ ಸಿಇ 2 5G (OnePlus Nord CE 2 5G) ಸ್ಮಾರ್ಟ್​ಫೋನ್​ ಅನಾವರಣ ಮಾಡಿತ್ತು. ಇದು ಕಳೆದ ವರ್ಷ ಬಿಡುಗಡೆ ಆಗಿ ಸಾಕಷ್ಟು ಬೇಡಿಕೆ ಸೃಷ್ಟಿಸಿದ್ದ ಒನ್​ಪ್ಲಸ್​ ನಾರ್ಡ್ CE 5G ಯ ಉತ್ತರಾಧಿಕಾರಿಯಾಗಿದೆ.

5 / 6
ಭಾರತದಲ್ಲಿ ಒನ್​ಪ್ಲಸ್​ ನಾರ್ಡ್ CE 2 5G ಇದರ 6GB RAM ಮತ್ತು 128GB ಸ್ಟೋರೇಜ್ ಬೇಸ್ ಮಾಡೆಲ್ಗೆ 23,999 ರೂ. ಅಂತೆಯೆ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 24,999 ರೂ. ಆಗಿದೆ.

6 / 6

Published On - 8:46 am, Thu, 3 March 22