Oppo Reno 10 5G Series: ಕ್ಯಾಮೆರಾ ಪ್ರಿಯರು ಕಾದು ಕುಳಿತಿದ್ದ ಒಪ್ಪೋ ರೆನೋ 10 ಪ್ರೊ ಈಗ ಖರೀದಿಗೆ ಲಭ್ಯ: ಬೆಲೆ ಎಷ್ಟು?

|

Updated on: Jul 13, 2023 | 3:44 PM

ರೆನೋ 10 ಸರಣಿಯ ಒಪ್ಪೋ ರೆನೋ 10 ಪ್ರೊ 5ಜಿ ಮತ್ತು ಒಪ್ಪೋ ರೆನೋ 10 ಪ್ರೊ+ 5ಜಿ ಸ್ಮಾರ್ಟ್​ಫೋನ್ ಈಗ ದೇಶದಲ್ಲಿ ಮಾರಾಟ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್, Oppo ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ದೇಶದಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಸೇಲ್ ಆಗುತ್ತಿದೆ.

1 / 8
ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್​ಫೋನ್ ತಯಾರಿಕ ಕಂಪನಿ ಒಪ್ಪೋ ಮೊನ್ನೆಯಷ್ಟೆ ಭಾರತದಲ್ಲಿ ಒಪ್ಪೋ ರೆನೋ 10 5ಜಿ, ಒಪ್ಪೋ ರೆನೋ 10 ಪ್ರೊ 5ಜಿ ಮತ್ತು ಒಪ್ಪೋ ರೆನೋ 10 ಪ್ರೊ+ 5ಜಿ ಮೊಬೈಲ್​ಗಳನ್ನು ಅನಾವರಣಮಾಡಿತ್ತು. ಈ ಮೂರೂ ಫೋನುಗಳಲ್ಲಿ ಕ್ಯಾಮೆರಾ ಅದ್ಭುತವಾಗಿದ್ದು, ಫೋಟೋಗ್ರಫಿಗೆ ಹೇಳಿಮಾಡಿಸಿದಂತಿದೆ.

2 / 8
ರೆನೋ 10 ಸರಣಿಯ ಒಪ್ಪೋ ರೆನೋ 10 ಪ್ರೊ 5ಜಿ ಮತ್ತು ಒಪ್ಪೋ ರೆನೋ 10 ಪ್ರೊ+ 5ಜಿ ಸ್ಮಾರ್ಟ್​ಫೋನ್ ಈಗ ದೇಶದಲ್ಲಿ ಮಾರಾಟ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್, Oppo ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ದೇಶದಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಸೇಲ್ ಆಗುತ್ತಿದೆ.

ರೆನೋ 10 ಸರಣಿಯ ಒಪ್ಪೋ ರೆನೋ 10 ಪ್ರೊ 5ಜಿ ಮತ್ತು ಒಪ್ಪೋ ರೆನೋ 10 ಪ್ರೊ+ 5ಜಿ ಸ್ಮಾರ್ಟ್​ಫೋನ್ ಈಗ ದೇಶದಲ್ಲಿ ಮಾರಾಟ ಕಾಣುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್, Oppo ಇಂಡಿಯಾ ಆನ್‌ಲೈನ್ ಸ್ಟೋರ್ ಮತ್ತು ದೇಶದಾದ್ಯಂತದ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಸೇಲ್ ಆಗುತ್ತಿದೆ.

3 / 8
ಒಪ್ಪೋ ರೆನೋ 10 Pro+ 5G ಫೋನಿನ 12GB RAM +256GB ಸ್ಟೋರೇಜ್ ಮಾದರಿಗಾಗಿ ಭಾರತದಲ್ಲಿ 54,999 ರೂ. ಇದೆ. ಒಪ್ಪೋ ರೆನೊ 10 ಪ್ರೊ 5G ಯ 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ 39,999 ರೂ. ನಿಗದಿ ಮಾಡಲಾಗಿದೆ. ಈ ಎರಡೂ ಪ್ರೊ ಮಾದರಿಗಳು ಗ್ಲಾಸಿ ಪರ್ಪಲ್ ಮತ್ತು ಸಿಲ್ವರ್ ಗ್ರೇ ಶೇಡ್‌ಗಳಲ್ಲಿ ಬರುತ್ತದೆ.

4 / 8
ಡಿಸ್ ಪ್ಲೇ: ರೆನೋ 10 ಪ್ರೋ 6.74-ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದರೆ, ರೆನೋ 10 ಪ್ರೊ+ 6.7-ಇಂಚಿನ ಡಿಸ್ ಪ್ಲೇ ಹೊಂದಿದೆ. ಎರಡು ಫೋನ್‌ಗಳು 120Hz ರಿಫ್ರೆಶ್ ದರದೊಂದಿಗೆ OLED AMOLED ಡಿಸ್‌ಪ್ಲೇ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಒಳಗೊಂಡಿದೆ.

5 / 8
ಪ್ರೊಸೆಸರ್: ರೆನೋ 10 ಪ್ರೋ+ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದೆ, ರೆನೋ 10 ಪ್ರೋ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ರೆನೋ 10 ಪ್ರೋ ColorOS 13.1 ಮೂಲಕ ರನ್ ಆದರೆ, ರೆನೋ 10 ಪ್ರೋ+ ನಲ್ಲಿ ColorOS 13 ನೀಡಲಾಗಿದೆ.

6 / 8
ಕ್ಯಾಮೆರಾಗಳು: ಕ್ಯಾಮೆರಾ ವಿಭಾಗದಲ್ಲಿ, ರೆನೋ 10 ಪ್ರೋ+ 50MP Sony IMX890 ಪ್ರಾಥಮಿಕ ಸಂವೇದಕವನ್ನು ಹೊಂದಿದೆ, 64MP ಟೆಲಿಫೋಟೋ ಲೆನ್ಸ್, 8MP ಅಲ್ಟ್ರಾವೈಡ್ ಆಂಗಲ್ ಲೆನ್ಸ್ ನೀಡಲಾಗಿದೆ. ರೆನೋ 10 ಪ್ರೋ ಕೂಡ ಇದೇ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಆದರೆ ಇದು 32MP ಟೆಲಿಫೋಟೋ ಲೆನ್ಸ್ ಆಗಿದೆ. ಸೆಲ್ಫಿಗಳಿಗಾಗಿ, ಎರಡು ಫೋನ್‌ಗಳಲ್ಲಿ 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿವೆ.

7 / 8
ಬ್ಯಾಟರಿ, ಚಾರ್ಜಿಂಗ್: ರೆನೋ 10 ಪ್ರೋ 80W SUPERVOOC ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 4,600mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 28 ನಿಮಿಷಗಳಲ್ಲಿ ಶೇ. 100 ರಷ್ಟು ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿದೆ.

8 / 8
ರೆನೋ 10 ಪ್ರೋ+ 100W SUPERVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡದಾದ 4,700mAh ಬ್ಯಾಟರಿಯನ್ನು ಹೊಂದಿದೆ. ಇದು 27 ನಿಮಿಷಗಳಲ್ಲಿ ಶೇ. 100 ರಷ್ಟು ಚಾರ್ಜ್ ಮಾಡುತ್ತಂತೆ.