
ತೆಲುಗಿನ ಜನಪ್ರಿಯ ಹಾಸ್ಯ ನಟ ನವೀನ್ ಪೋಲಿಶೆಟ್ಟಿ ನಟಿಸಿರುವ ಹಾಸ್ಯಮಯ ಸಿನಿಮಾ ‘ಅನಗನಗ ಒಕ ರಾಜು’ ಇದೇ ವಾರ ಒಟಿಟಿಗೆ ಬಂದಿದೆ. ಅಸಲಿಗೆ ಈ ಸಿನಿಮಾ ಸಹ ಸಂಕ್ರಾಂತಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಒಳ್ಳೆಯ ಪ್ರದರ್ಶನ ಕಂಡಿತ್ತು. ಇದೀಗ ಈ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು.

ಕಮ್ ಬ್ಯಾಕ್ ಮಾಡಿರುವ ಮಲಯಾಳಂ ಸ್ಟಾರ್ ನಟ ನಿವಿನ್ ಪಾಲಿ ಅವರ ಹೊಸ ಸಿನಿಮಾ ‘ಬೇಬಿ ಗರ್ಲ್’ ಈ ವಾರ ಒಟಿಟಿಗೆ ಬಂದಿದೆ. ಜನವರಿಯಲ್ಲಿ ಬಿಡುಗಡೆ ಆಗಿದ್ದ ಈ ಮೆಡಿಕಲ್ ಥ್ರಿಲ್ಲರ್ ಸಿನಿಮಾ ಇದೀಗ ಒಟಿಟಿಗೆ ಬಂದಿದ್ದು, ಸೋನಿ ಲಿವ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.

‘ಕಾಂಜುರಿಂಗ್’ ಸಿನಿಮಾ ಸರಣಿ ವಿಶ್ವದ ಬಲು ಜನಪ್ರಿಯ ಹಾರರ್ ಸಿನಿಮಾ ಸರಣಿಗಳಲ್ಲಿ ಒಂದಾಗಿದೆ. ಇತ್ತೀಚೆಗಷ್ಟೆ ಕಾಂಜುರಿಂಗ್ ಸರಣಿಯ ಹೊಸ ಸಿನಿಮಾ ‘ದಿ ಕಾಂಜುರಿಂಗ್: ದಿ ಲಾಸ್ಟ್ ರೈಟ್ಸ್’ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಈ ವಾರ ಈ ಸಿನಿಮಾ ಒಟಿಟಿಗೆ ಬಂದಿದ್ದು, ಜಿಯೋ ಹಾಟ್ಸ್ಟಾರ್ನಲ್ಲಿ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

ಸಂಕ್ರಾಂತಿಗೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಮೆಗಾಸ್ಟಾರ್ ಚಿರಂಜೀವಿಯನ್ನು ಸೋಲಿನ ಸುಳಿಯಿಂದ ಮೇಲಕ್ಕೆತ್ತಿದ ಈ ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ. ನಟಿ ನಯನತಾರಾ ಸಿನಿಮಾದ ನಾಯಕಿ.

ತಮಿಳಿನಲ್ಲಿ ಇತ್ತೀಚೆಗೆ ಬಿಡುಗಡೆ ಆಗಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ‘ತಲೈವರ್ ತಂಬಿ ತಲೈಮಯಿಲ್’ ಸಿನಿಮಾ. ಸಣ್ಣ ಹಳ್ಳಿಯೊಂದರ ಪಂಚಾಯಿತಿ ಅಧ್ಯಕ್ಷನೊಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಇದೇ ವಾರ ಬಿಡುಗಡೆ ಆಗಿದೆ.