ಒಟಿಟಿಯಲ್ಲಿ ಈ ವಾರ ಒಂದಕ್ಕಿಂತ ಒಂದು ಒಳ್ಳೆ ಸಿನಿಮಾ: ಇಲ್ಲಿದೆ ಪಟ್ಟಿ

Updated on: Apr 04, 2026 | 6:30 PM

OTT Release this week: ಚಿತ್ರಮಂದಿರಗಳಲ್ಲಿ ಇನ್ನೂ ‘ಧುರಂಧರ್ 2’ ಸಿನಿಮಾದ ಚಾಲ್ತಿಯಲ್ಲಿದೆ. ಅದರ ನಡುವೆ ಕೆಲವು ಇತರೆ ಭಾಷೆ ಸಿನಿಮಾಗಳು ಸಹ ಗಮನ ಸೆಳೆವ ಪ್ರದರ್ಶನ ಕಾಣುತ್ತಿವೆ. ‘ಧುರಂಧರ್ 2’ ಅಬ್ಬರದ ನಡುವೆ ಒಟಿಟಿಯಲ್ಲಿ ಕೆಲವು ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ. ಅದರಲ್ಲೂ ಕೆಲ ಸಿನಿಮಾಗಳಂತೂ ಚಿತ್ರಮಂದಿರದಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳು ಸಹ ಇವೆ. ಇಲ್ಲಿದೆ ನೋಡಿ ಪಟ್ಟಿ....

1 / 5
‘ಧುರಂಧರ್’ ನಾಯಕಿ ಸಾರಾ ಅರ್ಜುನ್ ನಟನೆಯ ತೆಲುಗು ಸಿನಿಮಾ ‘ಯುಫೋರಿಯಾ’ ಈ ವಾರ ಒಟಿಟಿಗೆ ಬಂದಿದೆ. ವಾಸುದೇವ್ ಮೆನನ್, ಭೂಮಿಕಾ ಚಾವ್ಲಾ ಇನ್ನೂ ಕೆಲವು ಪ್ರಮುಖ ನಟ-ನಟಿಯರು ನಟಿಸಿರುವ ಸಿನಿಮಾ ಇದಾಗಿದೆ. ಸಿನಿಮಾ ಅನ್ನು ಇಟಿವಿ ವಿನ್ ನಲ್ಲಿ ವೀಕ್ಷಿಸಬಹುದಾಗಿದೆ.

2 / 5
ಭಾರತದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿರುವ ‘ಮಾಮ್ಲಾ ಲೀಗಲ್ ಹೈ’ನ ಎರಡನೇ ಸೀಸನ್ ಇದೀಗ ಬಿಡುಗಡೆ ಆಗಿದೆ. ರವಿಕಿಶನ್ ಸೇರಿದಂತೆ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ಈ ವೆಬ್ ಸರಣಿ ಲಾಯರ್​​​ಗಳ ಕುರಿತಾದ ಕತೆ ಒಳಗೊಂಡಿದೆ. ವೆಬ್ ಸರಣಿಯನ್ನು ನೆಟ್​​ಫ್ಲಿಕ್ಸ್​​ನಲ್ಲಿ ನೋಡಬಹುದಾಗಿದೆ.

3 / 5
ಆಮಿರ್ ಖಾನ್ ನಿರ್ಮಾಣ ಮಾಡಿ, ಕಮಿಡಿಯನ್ ವೀರ್ ದಾಸ್ ನಟಿಸಿ, ನಿರ್ದೇಶನ ಮಾಡಿರುವ ಹಾಸ್ಯಮಯ ಥ್ರಿಲ್ಲರ್ ಸಿನಿಮಾ ‘ಹ್ಯಾಪಿ ಪಟೇಲ್’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ತಕ್ಕ ಮಟ್ಟಿಗೆ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾ ನೆಟ್​​ಫ್ಲಿಕ್ಸ್ ನಲ್ಲಿ ಬಿಡುಗಡೆ ಆಗಿದೆ.

4 / 5
ಅಮೀರ್ ಖಾನ್ ನಟಿಸಿ ಆರ್​​​ಎಸ್ ಪ್ರಸನ್ನ ನಿರ್ದೇಶನ ಮಾಡಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯ್ತು. ಬಳಿಕ ಯುಟ್ಯೂಬ್​​ನಲ್ಲೂ ಬಿಡುಗಡೆ ಆಯ್ತು. ಇದೀಗ ಈ ಸಿನಿಮಾ ಸೋನಿ ಲಿವ್​​​ನಲ್ಲಿ ಬಿಡುಗಡೆ ಆಗಿದೆ.

5 / 5
‘ಸಾಂಪ್ರದಾಯಿನಿ ಸುಪ್ಪಿನಿ ಸುದ್ದಪೂಸನಿ’ ಹೆಸರಿನ ತೆಲುಗು ಸಿನಿಮಾ ಇದೀಗ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಶಿವಾಜಿ, ಲಯಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಹಾಸ್ಯಮಯ ಫ್ಯಾಮಿಲಿ ಕತೆಯನ್ನು ಒಳಗೊಂಡಿದೆ. ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

Published On - 6:28 pm, Sat, 4 April 26

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us