Papaya Seeds: ಪಪ್ಪಾಯಿ ಹಣ್ಣಿನ ಬೀಜವನ್ನು ಎಸೆಯಬೇಡಿ; ಇಲ್ಲಿದೆ ಕಾರಣ
ಪಪ್ಪಾಯಿ ಬೀಜಗಳು ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್, ವಿಟಮಿನ್‌ಗಳು ಮತ್ತು ಸತು, ರಂಜಕ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳನ್ನು ಒಳಗೊಂಡಿರುವ ಪೌಷ್ಟಿಕಾಂಶಭರಿತ ಹಣ್ಣು. ಪಪ್ಪಾಯಿ ಬೀಜಗಳು ಫೈಬರ್‌ನಿಂದ ತುಂಬಿರುತ್ತವೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
1 / 14
ಮೃದುವಾದ, ಕೇಸರಿ ಬಣ್ಣದ ತಿರುಳು ಮತ್ತು ಸ್ವಲ್ಪ ಸಿಹಿಯಾಗಿರುವ ಪಪ್ಪಾಯಿಯು ಮಕ್ಕಳಿಂದ ಹಿರಿಯರವರೆಗೆ ಎಲ್ಲಾ ವಯಸ್ಸಿನವರಿಗೂ ಅತ್ಯಂತ ಪೌಷ್ಟಿಕಾಂಶ ನೀಡುವ ಹಣ್ಣು. ಇದು ಮಲಬದ್ಧತೆಗೆ ನೈಸರ್ಗಿಕ ಚಿಕಿತ್ಸೆಯಾಗಿದೆ. ವಿಟಮಿನ್ ಎ ಮತ್ತು ಸಿ ಹೇರಳವಾಗಿರುವ ಈ ಹಣ್ಣಿನಲ್ಲಿ ಅತಿ ಹೆಚ್ಚು ಫೈಬರ್ ಅಂಶವಿದೆ.
2 / 14
ಆದರೆ, ಈ ಹಣ್ಣಿನಲ್ಲಿ ಮಾತ್ರವಲ್ಲದೆ ಇದರ ಬೀಜದಲ್ಲೂ ಅನೇಕ ಔಷಧೀಯ ಅಂಶಗಳಿವೆ. ಹೀಗಾಗಿ, ಮುಂದಿನ ಬಾರಿ ಪಪ್ಪಾಯಿ ಹಣ್ಣನ್ನು ತಿಂದಾದ ನಂತರ ಬೀಜವನ್ನು ಎಸೆಯಬೇಡಿ!
3 / 14
ಪಪ್ಪಾಯಿ ಬೀಜಗಳು ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು, ಆಲ್ಕಲಾಯ್ಡ್‌ಗಳು, ಟ್ಯಾನಿನ್‌ಗಳು ಮತ್ತು ಸಪೋನಿನ್‌ಗಳಂತಹ ಅದ್ಭುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ದೇಹವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ. ಇದು ದೇಹದಲ್ಲಿ ಉರಿಯೂತವನ್ನು ನಿಯಂತ್ರಿಸುತ್ತದೆ.
4 / 14
ಪಪ್ಪಾಯಿ ಬೀಜಗಳಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ. ಇದು ನಿಮ್ಮ ಮಲಬದ್ಧತೆಯ ಸಮಸ್ಯೆಗಳನ್ನು ಪರಿಹರಿಸಬಹುದು.
5 / 14
ಪಪ್ಪಾಯಿ ಬೀಜದಲ್ಲಿರುವ ಕಾರ್ಪೈನ್ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹಾಗೇ, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
6 / 14
ಪಪ್ಪಾಯಿ ಬೀಜಗಳು ಚಯಾಪಚಯವನ್ನು ಉತ್ತೇಜಿಸುತ್ತದೆ ಮತ್ತು ದೇಹವು ಕೊಬ್ಬನ್ನು ಸಂಗ್ರಹಿಸದಂತೆ ನೋಡಿಕೊಳ್ಳುತ್ತದೆ. ಅಲ್ಲದೆ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
7 / 14
ಪಪ್ಪಾಯಿ ಬೀಜಗಳು ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್, ವಿಟಮಿನ್‌ಗಳು ಮತ್ತು ಸತು, ರಂಜಕ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳನ್ನು ಒಳಗೊಂಡಿರುವ ಪೌಷ್ಟಿಕಾಂಶಭರಿತ ಹಣ್ಣು.
8 / 14
ಪಪ್ಪಾಯಿ ಬೀಜಗಳು ಫೈಬರ್‌ನಿಂದ ತುಂಬಿರುತ್ತವೆ. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
9 / 14
ಪಪ್ಪಾಯಿಯಲ್ಲಿನ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾದ ಕ್ಯಾರೋಟಿನ್ ಈಸ್ಟ್ರೊಜೆನ್ ತರಹದ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಹಾಗೇ, ನಿಯಮಿತವಾಗಿ ಋತುಚಕ್ರವಾಗಲು ಸಹಕಾರಿಯಾಗಿದೆ.
10 / 14
ಪಪ್ಪಾಯಿ ಬೀಜಗಳಲ್ಲಿರುವ ಫೈಬರ್ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪಾತ್ರ ವಹಿಸುತ್ತದೆ.
11 / 14
ಪಪ್ಪಾಯಿ ಬೀಜಗಳು ಕಾರ್ಪೈನ್ ಅನ್ನು ಹೊಂದಿರುತ್ತವೆ. ಇದು ಕರುಳಿನ ಹುಳುಗಳು ಮತ್ತು ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
12 / 14
ಹಾಗೇ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
13 / 14
ಪಪ್ಪಾಯಿ ಬೀಜಗಳು ಪಾಲಿಫಿನಾಲ್‌ಗಳು ಮತ್ತು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ. ಇದು ವಿವಿಧ ರೀತಿಯ ಕ್ಯಾನ್ಸರ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
14 / 14
ಒಬ್ಬರು ದಿನಕ್ಕೆ ಸುಮಾರು 1 ಚಮಚ (15 ಗ್ರಾಂ) ಪಪ್ಪಾಯಿ ಬೀಜಗಳನ್ನು ಸೇವಿಸಬೇಕು. ಆಗ ಮಾತ್ರ ಈ ಎಲ್ಲ ಪ್ರಯೋಜನಗಳು ಸಿಗಲು ಸಾಧ್ಯ.
Published On - 12:10 pm, Thu, 7 September 23