IPL 2024: 9 ವರ್ಷಗಳ ನಂತರ ಐಪಿಎಲ್ ಆಡಲು ಮುಂದಾದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್
IPL 2024: ಟೆಸ್ಟ್ ಕ್ರಿಕೆಟ್ ಆಡುವ ಮಹದಾಸೆಯೊಂದಿಗೆ ಐಪಿಎಲ್ನಿಂದ ಹಿಂದೆ ಸರಿದಿದ್ದ ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 9 ವರ್ಷಗಳ ಬಳಿಕ ಐಪಿಎಲ್ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆಸೀಸ್ ವೇಗಿಯ ಈ ಯೋಚನೆಯ ಹಿಂದೆ ಮಹತ್ವದ ಕಾರಣವೂ ಇದ್ದು ಟಿ20 ವಿಶ್ವಕಪ್‌ಗೆ ತಮ್ಮನ್ನು ತಾವು ಚೆನ್ನಾಗಿ ಸಿದ್ಧಪಡಿಸಿಕೊಳ್ಳುವ ಸಲುವಾಗಿ ಐಪಿಎಲ್‌ನಲ್ಲಿ ಆಡಲು ಮುಂದಾಗಿದ್ದಾರೆ.