Paris Olympic Games 2024: ಈ ಬಾರಿ ಎಷ್ಟು ಪದಕಗಳನ್ನು ನೀಡಲಾಗುತ್ತದೆ? ಪ್ರತಿಯೊಂದು ಪದಕದ ಗಾತ್ರ, ಬೆಲೆ ಬಗ್ಗೆ ನಿಮಗೆಷ್ಟು ಗೊತ್ತು?

|

Updated on: Jul 17, 2024 | 3:09 PM

Paris Olympic Games 2024: ಜುಲೈ 26 ರಿಂದ 33ನೇ ಆವೃತ್ತಿಯ ಒಲಿಂಪಿಕ್ಸ್‌ ಪ್ಯಾರಿಸ್‌ನಲ್ಲಿ ಪ್ರಾರಂಭವಾಗಲಿದೆ. ಫ್ರಾನ್ಸ್‌ನ 16 ವಿವಿಧ ನಗರಗಳಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಈ ಬಾರಿ 10000 ಕ್ಕೂ ಅಧಿಕ ಕ್ರೀಡಾಪಟುಗಳು ಈ ಕ್ರೀಡಕೂಟದಲ್ಲಿ ಬಾಗವಹಿಸುತ್ತಿದ್ದು, ಇದಕ್ಕಾಗಿ ಸುಮಾರು 5084 ಪದಕಗಳನ್ನು ತಯಾರಿಸಲಾಗಿದೆ. ಅಲ್ಲದೆ ಈ ಕ್ರೀಡಕೂಟಕ್ಕಾಗಿ ಬರೋಬ್ಬರಿ 61,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

1 / 6
ಜುಲೈ 26 ರಿಂದ 33ನೇ ಆವೃತ್ತಿಯ ಒಲಿಂಪಿಕ್ಸ್‌ ಪ್ಯಾರಿಸ್‌ನಲ್ಲಿ ಪ್ರಾರಂಭವಾಗಲಿದೆ. ಆದಾಗ್ಯೂ, ಫ್ರಾನ್ಸ್‌ನಲ್ಲಿ ಕೆಲವು ಕ್ರೀಡೆಗಳು ಜುಲೈ 24 ರಿಂದ ಪ್ರಾರಂಭವಾಗುತ್ತವೆ. ಪ್ಯಾರಿಸ್ ಹೊರತುಪಡಿಸಿ, ಫ್ರಾನ್ಸ್‌ನ 16 ವಿವಿಧ ನಗರಗಳಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಒಲಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಒಟ್ಟು 61,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

2 / 6
ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ಕ್ರೀಡೆಗಳಲ್ಲಿ ಗೆದ್ದ ಆಟಗಾರರು ಒಲಿಂಪಿಕ್ಸ್‌ ಪದಕಗಳನ್ನು ಪಡೆಯುತ್ತಾರೆ. ಪ್ರಥಮ ಸ್ಥಾನ ಪಡೆದವರಿಗೆ ಚಿನ್ನದ ಪದಕ, ಎರಡನೇ ಸ್ಥಾನ ಪಡೆದವರಿಗೆ ಬೆಳ್ಳಿ ಹಾಗೂ ಮೂರನೇ ಸ್ಥಾನ ಪಡೆದವರಿಗೆ ಕಂಚಿನ ಪದಕ ನೀಡಲಾಗುತ್ತದೆ. ಹಲವು ಸ್ಪರ್ಧೆಗಳಲ್ಲಿ ನಾಲ್ಕನೇ ಸ್ಥಾನ ಪಡೆದವರಿಗೂ ಕಂಚಿನ ಪಂದಕ ನೀಡಲಾಗುತ್ತದೆ.

3 / 6
ಪ್ಯಾರಿಸ್ ಒಲಿಂಪಿಕ್ಸ್‌ನ ಏಳು ಪ್ಯಾರಾಲಿಂಪಿಕ್ ಪದಕಗಳಿಗೆ ಮಾತ್ರ ಐಫೆಲ್ ಟವರ್‌ನಿಂದ ಕಬ್ಬಿಣದ ತುಂಡನ್ನು ಬಳಸಲಾಗಿದೆ. ಪ್ಯಾರಿಸ್‌ಗೆ ಕ್ರೀಡಾಕೂಟದ ಮರಳುವಿಕೆಯನ್ನು ಆಚರಿಸಲು ಈ ತುಣುಕನ್ನು ಪದಕದಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ಪ್ರತಿ ಪದಕದಲ್ಲಿರುವ ಐಫೆಲ್ ಗೋಪುರದ ತುಂಡು 18 ಗ್ರಾಂ ತೂಗುತ್ತದೆ.

4 / 6
ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ಗಾಗಿ ಒಟ್ಟು 5084 ಪದಕಗಳನ್ನು ಮಾಡಲಾಗಿದೆ. ಇದರಲ್ಲಿ ಪ್ರತಿ ಪದಕದ ದಪ್ಪವು 9.2 ಮಿಮೀ ಆಗಿದ್ದರೆ, ಅದರ ವ್ಯಾಸವು 85 ಮಿಮೀ ಇರುತ್ತದೆ. ಚಿನ್ನದ ಪದಕದ ತೂಕ 529 ಗ್ರಾಂ, ಬೆಳ್ಳಿ ಪದಕದ ತೂಕ 525 ಗ್ರಾಂ. ಕಂಚಿನ ಪದಕ 455 ಗ್ರಾಂ ತೂಗುತ್ತದೆ.

5 / 6
ಇನ್ನು ಈ ಪದಕಗಳ ತಯಾರಿಕೆಯ ಬಗ್ಗೆ ಹೇಳುವುದಾದರೆ.. ಒಲಿಂಪಿಕ್​ನಲ್ಲಿ ನೀಡುವ ಚಿನ್ನದ ಪದಕದಲ್ಲಿ 92.5 ಪ್ರತಿಶತ ಬೆಳ್ಳಿ ಮತ್ತು 6 ಗ್ರಾಂ ಚಿನ್ನವಿರುತ್ತದೆ. ಬೆಳ್ಳಿ ಪದಕ 92.5 ಪ್ರತಿಶತ ಬೆಳ್ಳಿಯಿಂದ ತಯಾರಿಸಲ್ಪಟ್ಟಿದ್ದರೆ,  ಕಂಚಿನ ಪದಕವು 97 ಪ್ರತಿಶತ ತಾಮ್ರ, 2.5 ಪ್ರತಿಶತ ಸತು ಮತ್ತು 0.5 ಪ್ರತಿಶತ ತವರವನ್ನು ಹೊಂದಿರುತ್ತದೆ.

6 / 6
ಹಾಗೆಯೇ ಪ್ರತಿಯೊಂದು ಪದಕದ ಬೆಲೆಯ ಬಗ್ಗೆ ಹೇಳುವುದಾದರೆ.. ಪ್ರತಿ ಒಲಂಪಿಕ್ ಪದಕದ ಬೆಲೆ ವಿಭಿನ್ನವಾಗಿರುತ್ತದೆ. ಅದರಂತೆ ಒಂದು ಚಿನ್ನದ ಪದಕದ ಬೆಲೆ ₹ 75 ಲಕ್ಷವಾಗಿದ್ದರೆ, ಉಳಿದಂತೆ ಬೆಳ್ಳಿ ಮತ್ತು ಕಂಚಿನ ಪದಕಗಳ ಬೆಲೆ ಕ್ರಮವಾಗಿ ₹ 50 ಲಕ್ಷ ಮತ್ತು ₹ 30 ಲಕ್ಷ ರೂ. ಆಗಿರುತ್ತದೆ.